Viral Video : ಮಗಳ ಮದುವೆಯ ದಿನ ಮಗಳೊಂದಿಗೆ ನರ್ತಿಸಿದ್ದಾರೆ ಇಲ್ಲೊಬ್ಬ ಅಪ್ಪ. ಇದು ಒಂದು ತಿಂಗಳಷ್ಟು ಹಳೆಯದಾದ ವಿಡಿಯೋ ಆದರೂ ನೃತ್ಯವೆಂದೂ ಹಳೆಯದಾಗುವುದಿಲ್ಲ ಎನ್ನುವುದಕ್ಕೆ ಸಾಕ್ಷಿ ಈ ವಿಡಿಯೋ. ಅದಕ್ಕೇ ಇದು ವೈರಲ್ ಆಗಿದೆ. ಆಗಸ್ಟ್ 21ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ವಧು ಬ್ರಿಟಾನಿ ರೆವೆಲ್ ಮತ್ತು ಆಕೆಯ ತಂದೆ ಕ್ಯಾಲಿ ಸ್ವಾಗ್ ಡಿಸ್ಟ್ರಿಕ್ಟ್ ‘ಮಿ ಹೌ ಟು ಡೌಗಿ’ ಎಂಬ ಹಾಡಿಗೆ ನರ್ತಿಸಿದ್ದಾರೆ. 47 ಮಿಲಿಯನ್ಗಿಂತಲೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ. ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.
ಸ್ಯಾನ್ ಡಿಯಾಗೋದಲ್ಲಿ ವಾಸಿಸುತ್ತಿರುವ 30 ವರ್ಷದ ವಧು ಬ್ರಿಟಾನಿ ಪ್ರಕಾರ, ಟೂಟ್ಸಿ, ರೂಲ್, ಹ್ಯಾಮರ್ ಡ್ಯಾನ್ಸ್ ಮತ್ತು ಕಾರ್ಲ್ಟನ್ ಎಂಬ ನೃತ್ಯಪ್ರಕಾರಗಳನ್ನು ಈ ಹಾಡಿಗೆ ಸಂಯೋಜಿಸಲಾಗಿದೆ. 63 ವರ್ಷದ ಬ್ರಿಟಾನಿಕಾಳ ತಂದೆಗೆ ಈ ಹಳೆಯ ಹಾಡು, ನೃತ್ಯವು ಅತಿಥಿಗಳಿಗೆ ಇಷ್ಟವಾಗುತ್ತದೆ ಎಂದು ಮೊದಲೇ ತಿಳಿದಿತ್ತು. ಹಾಗಾಗಿ ಅಪ್ಪ ಮಗಳು ಸೇರಿ ಇದನ್ನು ಆಯೋಜಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಬ್ರಿಟಾನಿ ರೆವೆಲ್ ಈ ವಿಡಿಯೋ ಅನ್ನು ಅವರೇ ಪೋಸ್ಟ್ ಮಾಡಿದ್ದಾರೆ. ಆ ದಿನದ ಅನುಭವವನ್ನು ವಿವರಿಸಲು ಸಾಧ್ಯವಿಲ್ಲ. ಇದರಲ್ಲಿ ನಾನು, ನನ್ನ ಶಾಲಾದಿನಗಳಲ್ಲಿ ಕಲಿತ ಕೆಲ ನೃತ್ಯದ ಮಟ್ಟುಗಳನ್ನು ಹೇಳಿಕೊಟ್ಟಿದ್ದೇನೆ. ಈ ಪ್ರದರ್ಶನದಲ್ಲಿ ಈ ಸಂಗತಿ ವಿನೋದಮಯವಾಗಿತ್ತು ಎಂದಿದ್ದಾರೆ.
ತಂದೆಮಗಳ ನೃತ್ಯಪ್ರದರ್ಶನಕ್ಕೆ ಮಾರುಹೋದ ನೆಟ್ಟಿಗರು, ‘ನಿಮ್ಮಿಬ್ಬರಿಗೆ ಬಗ್ಗೆ ತುಂಬಾ ಪ್ರೀತಿ. ಬಹಳ ಆಪ್ತವಾಗಿತ್ತು ಈ ವಿಡಿಯೋ’ ಎಂದಿದ್ದಾರೆ ಒಬ್ಬರು. ‘ದಶಕದ ಹಿಂದೆ ನಮ್ಮನ್ನು ಈ ಹಾಡು ನೃತ್ಯ ಕರೆದೊಯ್ದವು. ಇದಕ್ಕೆ ನಿಮ್ಮಿಬ್ಬರಿಗೂ ಧನ್ಯವಾದ ಎಂದಿದ್ದಾರೆ ಮತ್ತೊಬ್ಬರು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:46 am, Tue, 4 October 22