
ದೀಪಾವಳಿ ಹಬ್ಬದ ಸಂಭ್ರಮ ಸಡಗರ ಎಲ್ಲೆಡೆ ಮನೆ ಮಾಡಿದೆ. ದೂರದ ಊರಿನಲ್ಲಿದ್ದ ಮಕ್ಕಳು ಹಬ್ಬ ಆಚರಿಸಲು ತಮ್ಮ ಊರಿಗೆ ತೆರಳಿದ್ದಾರೆ. ಆದರೆ ಇಲ್ಲೊಬ್ಬ ಯುವತಿಯು ಹೆತ್ತವರಿಗೆ ಹೇಳದೇನೆ ದಿಢೀರನೆ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ. ತಾನು ಈ ಸಲ ಹಬ್ಬಕ್ಕೆ ಬರಲ್ಲ ಎಂದ ಮಗಳು ಏಕಾಏಕಿ ವಿದೇಶದಿಂದ (Foreign) ಬಂದದ್ದನ್ನು ಕಂಡು ಹೆತ್ತವರ ಖುಷಿಗೆ ಪಾರಾವೇ ಇಲ್ಲದಂತಾಗಿದೆ. ಮಗಳನ್ನು ಕಂಡೊಡನೆ ಹೆತ್ತವರು ಭಾವುಕರಾಗಿದ್ದು, ಈ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ರಿಯಾ ಗೋಯೆಲ್ (Riya Goyal) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾಳೆ. ತಂದೆ ತಾಯಿ ಹಬ್ಬಕ್ಕೆ ಮಗಳನ್ನು ಕರೆದಿದ್ದರು. ಆದರೆ ಈ ಬಾರಿ ಹಬ್ಬಕ್ಕೆ ಬರಲು ಆಗಲ್ಲ ಎಂದು ಹೇಳಿದ್ದಳು. ಆದರೆ ಹೆತ್ತವರಿಗೆ ಗೊತ್ತಿಲ್ಲದೇ ಅವರಿಗೆ ಸರ್ಪ್ರೈಸ್ ನೀಡಲು ಪ್ಲ್ಯಾನ್ ಮಾಡಿಕೊಂಡಿದ್ದಳು. ಈ ವಿಡಿಯೋದಲ್ಲಿ ಯುವತಿ ವಿದೇಶದಿಂದ ಮನೆಗೆ ಬರುವುದು, ಹೆತ್ತವರ ರಿಯಾಕ್ಷನ್ ಅನ್ನು ಸೆರೆ ಹಿಡಿದಿದ್ದಾಳೆ.
ವಿಮಾನದಿಂದ ಇಳಿದು ಟ್ರೈನ್ ಹತ್ತಿದ್ದಾಳೆ. ಟ್ರೈನ್ ನಿಂದ ಇಳಿದು ಆಟೋ ಹತ್ತಿ ಮನೆಗೆ ಬಂದಿದ್ದಾಳೆ. ಮನೆಯ ಬಾಗಿಲ ಮುಂದೆ ನಿಂತ ಯುವತಿ ಹೆತ್ತವರಿಗೆ ಅಚ್ಚರಿ ಪಡಿಸಿದ್ದಾಳೆ. ಮನೆಯ ಸೋಫಾ ಮೇಲೆ ಕುಳಿತ್ತಿದ್ದ ಅಮ್ಮ, ಮಗಳನ್ನು ನೋಡಿ ಶಾಕ್ ಆಗಿದ್ದಾರೆ. ಖುಷಿಗೆ ಮಾತೇ ಬಾರದೇ ಭಾವುಕಳಾಗಿದ್ದು ಜೋರಾಗಿ ತಬ್ಬಿಕೊಂಡು ಮುತ್ತನಿಟ್ಟಿದ್ದಾರೆ. ತನ್ನ ಖುಷಿಯನ್ನು ವ್ಯಕ್ತಪಡಿಸಲಾಗದೇ ಸಂಬಂಧಿಕರಿಗೆ ಕರೆ ಹೆತ್ತಮ್ಮ ಹೇಳುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ನಾಲ್ಕು ವರ್ಷಗಳ ಬಳಿಕ ಕೆನಡಾದಿಂದ ಮರಳಿದ ಮಗ, ಸರ್ಪ್ರೈಸ್ ವಿಸಿಟ್‌ಗೆ ತಾಯಿ ಭಾವುಕ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಹೆತ್ತವರಿಗೆ ತಮ್ಮ ಕಣ್ಣ ಮುಂದೆ ಇರುವುದೇ ಖುಷಿ ಎಂದಿದ್ದಾರೆ. ಇನ್ನೊಬ್ಬರು, ಹೆತ್ತವರ ಖುಷಿಯನ್ನು ಅವರ ಮುಖ ಭಾವವೇ ಹೇಳುತ್ತಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಮನೆ ಅನ್ನೋದು ಸೇಫ್ ಜಾಗ ಎಂದು ಕಾಮೆಂಟ್ ಮಾಡಿದ್ದಾರೆ. ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ