Depression : ದೊಡ್ಡವರು ಎನ್ನಿಸಿಕೊಂಡವರು ಜೊತೆಗಿರುವ ಸಣ್ಣ ಜೀವಗಳನ್ನು ಗಮನಿಸಿಕೊಳ್ಳದೆ ಸ್ಕ್ರೀನ್ ಮೇಲಿರುವ ಭ್ರಮಾಲೋಕದಲ್ಲಿ ವಿಹರಿಸುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬರುತ್ತಿದ್ಧಾರೆಯೇ? ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿದಾಗ ಯಾಕೋ ಇದು ಸ್ಪಷ್ಟವಾಗುತ್ತಿದೆ ಎನ್ನಿಸುತ್ತಿದೆ. ಆಧುನಿಕ ಯುಗದ ಅವಕಾಶಗಳನ್ನು, ಸೌಲಭ್ಯಗಳನ್ನು ಬಳಸುವುದನ್ನು ಕಲಿತಿರುವ ಇವರುಗಳು ಪ್ರಾಬಲ್ಯ ಸಾಧಿಸುವ ಮನೋಭಾವವನ್ನು ಯಾಕೆ ಬದಲಾಯಿಸಿಕೊಳ್ಳುತ್ತಿಲ್ಲ? ಚಿಕ್ಕವರ ಅಂತರಂಗವನ್ನು ಸ್ಪರ್ಶಿಸುವಲ್ಲಿ ಇವರು ಸೋಲುತ್ತಿರುವುದು ಯಾಕೆ?
ಇದೊಂದು ಪುಟ್ಟ ಸಂಸಾರ. ಪಪ್ಪಾ ನಾ ಡಿಪ್ರೆಷನ್ಗೆ ಹೋಗ್ತಿದೀನಿ ಎನ್ನುತ್ತಾಳೆ ಮಗಳು. ಪತ್ರಿಕೆಯಲ್ಲಿ ಮುಳುಗಿರುವ ತಂದೆ, ಎಲ್ಲಿಯೂ ಹೊರಗೆ ಹೋಗುವ ಅವಶ್ಯಕತೆ ಇಲ್ಲ ಮನೆಯಲ್ಲಿಯೇ ಇರು ಎಂದು ಗದರುತ್ತಾನೆ. ಉಪಾಯಗಾಣದ ಆಕೆ ಅಮ್ಮನ ಬಳಿ ಹೋಗಿ ಅಮ್ಮಾ, ನಾ ಡಿಪ್ರೆಷನ್ಗೆ ಹೋಗ್ತಿದೀನಿ ಎನ್ನುತ್ತಾಳೆ. ಎಲ್ಲಿ ಹೋದರೂ ಸಂಜೆ 7ರೊಳಗೆ ಮನೆಯಲ್ಲಿರಬೇಕು ಎಂದು ಕಟ್ಟಪ್ಪಣೆ ಹೊರಡಿಸುತ್ತಾಳೆ ಆಕೆ. ಅಜ್ಜಿಯ ಬಳಿ ಹೋಗಿ, ಅಜ್ಜಿ ನಾ ಡಿಪ್ರೆಷನ್ಗೆ ಹೋಗ್ತಿದೀನಿ ಎನ್ನುತ್ತಾಳೆ. ಎಲ್ಲಿಯೇ ಹೋದರೂ ಮನೆಯಲ್ಲಿ ಹಿರಿಯರ ಆಶೀರ್ವಾದ ತೆಗೆದುಕೊಂಡು ಹೋಗು ಎನ್ನುತ್ತಾಳೆ ಆಕೆ.
ಇದನ್ನೂ ಓದಿ : Viral Video: ಪಾಕಿಸ್ತಾನ; 103 ವರ್ಷದ ‘ಮಾಯೀ ಧಾಯೀ’ ಕೋಕ್ ಸ್ಟುಡಿಯೋದಲ್ಲಿ ಇದನ್ನು ಹಾಡಿದ್ದು 96ರ ಹರೆಯದಲ್ಲಿ
ಕನ್ನಡದ ಖಿನ್ನತೆಯೇ ಇಂಗ್ಲಿಷ್ನ Depression; ಇದರರ್ಥ ಖಿನ್ನತೆಗೆ ಜಾರುವುದು, ಬದುಕಿನಲ್ಲಿ ಉತ್ಸಾಹ ಕಳೆದುಕೊಳ್ಳುವುದು. ಪ್ರತಿಯೊಬ್ಬರ ಜೀವಿತಾವಧಿಯಲ್ಲಿಯೂ ಖಿನ್ನತೆ ಎನ್ನುವುದು ಒಂದಿಲ್ಲಾ ಒಂದು ಹಂತದಲ್ಲಿ ಕಾಡುತ್ತಿರುತ್ತದೆ. ಇದಕ್ಕೆ ವಯಸ್ಸಿನ ಭೇದವಿಲ್ಲ. ಲಿಂಗದ ಹಂಗಿಲ್ಲ. ಕುಟುಂಬದರೇ ಆಗಲಿ, ಸ್ನೇಹಿತರೇ ಆಗಲಿ, ಸಹೋದ್ಯೋಗಿಗಳೇ ಆಗಿರಲಿ ಅಥವಾ ನಿಮ್ಮ ಒಡನಾಟದಲ್ಲಿರುವ ಯಾರೇ ಆಗಿರಲಿ ಅವರಲ್ಲಿ ಖಿನ್ನತೆಯ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ಆ ಪರಿಸ್ಥಿತಿಯಿಂದ ಅವರನ್ನು ಹೊರತರಲು ಶ್ರಮಿಸಬೇಕು. ಇಲ್ಲವಾದಲ್ಲಿ ಅನಾಹುತ ಕಟ್ಟಿಟ್ಟ ಬುತ್ತಿ.
ಇದನ್ನೂ ಓದಿ : Viral: ಸ್ವಿಗ್ಗಿ ಇನ್ಸ್ಟಾಮಾರ್ಟ್ ಇಂಥ ಸೃಜನಶೀಲ ಉದ್ಯೋಗಿಯನ್ನು ಕಳೆದುಕೊಳ್ಳಬಾರದು; ನೆಟ್ಟಿಗರ ಒತ್ತಾಯ
ಬಾಯಿಬಿಟ್ಟು ತನಗೆ ಹೀಗಾಗುತ್ತಿದೆ ಎಂದು ಯಾರಾದರೂ ನಿಮ್ಮ ಬಳಿ ಹೇಳಿಕೊಂಡಾಗ ಅವರೊಂದಿಗೆ ತಕ್ಷಣವೇ ಸ್ಪಂದಿಸಬೇಕು. ಅವರ ಮನಸಿನ ಮಾತುಗಳನ್ನು ಕೇಳಿಸಿಕೊಳ್ಳಬೇಕು. ನಿಮ್ಮಿಂದ ಪರಿಹಾರ ಸಾಧ್ಯವಾಗದಿದ್ದರೆ ಬಲ್ಲವರ ಸಹಾವನ್ನು ತೆಗೆದುಕೊಳ್ಳಬೇಕು. ಮನುಷ್ಯರಾಗಿ ಇಷ್ಟೂ ಮಾಡದಿದ್ದರೆ ಹೇಗೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:41 pm, Wed, 26 July 23