Viral: ಡೇಂಜರಸ್‌ ಸ್ಪೀಡ್‌ ಬ್ರೇಕರ್‌… ಹಂಪ್‌ ಕಾಣದೇ ಸ್ಕೂಟಿ ಸಮೇತ ಪಲ್ಟಿಯಾದ ಸವಾರ; ಭಯಾನಕ ವಿಡಿಯೋ ವೈರಲ್‌

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 13, 2024 | 3:17 PM

ಕೆಲ ಸಮಯದ ಹಿಂದೆಯಷ್ಟೇ ಗುರುಗ್ರಾಮದ ಗಾಲ್ಫ್‌ಕೋರ್ಸ್‌ ರಸ್ತೆಯಲ್ಲಿ ಸ್ಫೀಡ್‌ ಬ್ರೇಕರ್‌ ಕಾಣಿಸದೆ ವಾಹನಗಳು ಗಾಳಿಯಲ್ಲಿ ಹಾರಿದಂತಹ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದೀಗ ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಸ್ಪೀಡ್‌ ಆಗಿ ಬಂದ ಸ್ಕೂಟರ್‌ ಚಾಲಕ ರಸ್ತೆಯಲ್ಲಿದ್ದ ಹಂಪ್‌ ಕಾಣಿಸದ ಪರಿಣಾಮ ಸ್ಕೂಟಿ ಸಮೇತ ಕೆಳಗೆ ಬಿದ್ದಿದ್ದಾನೆ. ಈ ಭಯಾನಕ ದೃಶ್ಯ ಇದೀಗ ಭಾರೀ ವೈರಲ್‌ ಆಗಿದೆ.

ವಾಹನಗಳ ವೇಗವನ್ನು ತಡೆಯಲು ರಸ್ತೆಗಳಲ್ಲಿ ಅಲ್ಲಲ್ಲಿ ಸ್ಫೀಡ್‌ ಬ್ರೇಕರ್‌ಗಳನ್ನು ನಿರ್ಮಿಸಿರುತ್ತಾರೆ. ವಾಹನಗಳ ವೇಗವನ್ನು ನಿಧಾನಗೊಳಿಸಲು ನಿರ್ಮಿಸಲಾದ ಈ ಹಂಪ್‌ಗಳೇ ಅದೆಷ್ಟೋ ಬಾರಿ ವಾಹನ ಸವಾರರ ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸಿದ್ದುಂಟು. ಹೌದು ಹಂಪ್‌ ಕಾಣಿಸದೆ ಅದನ್ನು ದಾಟುವ ಸಂದರ್ಭದಲ್ಲಿ, ಅವೈಜ್ಞಾನಿಕ ಸ್ಪೀಡ್‌ ಬ್ರೇಕರ್‌ಗಳಿಂದಾಗಿ ಅಪಘಾತಗಳು ಸಂಭವಿಸಿವೆ. ಇಲ್ಲೊಂದು ಇಂತಹದ್ದೇ ಘಟನೆ ನಡೆದಿದ್ದು, ರಸ್ತೆಯಲ್ಲಿರುವ ಸ್ಪೀಡ್‌ ಬ್ರೇಕರ್‌ ಕಾಣಿಸದೆ ಸ್ಕೂಟರ್‌ ಸವಾರನೊಬ್ಬ ಸ್ಕೂಟಿ ಸಮೇತ ಹಾರಿ ಬಿದ್ದಿದ್ದಾನೆ. ಈ ಭಯಾನಕ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಈ ಘಟನೆ ಉತ್ತರಖಂಡದ ಡೆಹ್ರಾಡೂನ್‌ನಲ್ಲಿ ನಡೆದಿದ್ದು, ಇಲ್ಲಿನ ಕ್ಲಾಕ್‌ ಟವರ್‌ ಬಳಿ ಇರುವ ರಸ್ತೆಯಲ್ಲಿ ಸ್ಪೀಡ್‌ ಬ್ರೇಕರ್‌ ಕಾಣಿಸದೆ ಸ್ಕೂಟರ್‌ ಸವಾರನೊಬ್ಬ ಸ್ಕೂಟಿ ಸಮೇತ ಪಲ್ಟಿಯಾಗಿದ್ದಾನೆ. ಅಷ್ಟೇ ಅಲ್ಲದೆ ಬೈಕ್‌ ಕಾರ್‌ಗಳು ಕೂಡಾ ಇದೇ ಹಂಪ್‌ ಬಳಿ ಗಾಳಿಯಲ್ಲಿ ಹಾರಿ ಹೋಗಿವೆ. ಇಲ್ಲಿ ಯಾವುದೇ ಗುರುತುಗಳು ಮತ್ತು ಸೂಚನಾ ಫಲಕಗಳು ಇಲ್ಲದ ಕಾರಣ ಅಲ್ಲಿ ಹಂಪ್‌ ಇದೆ ಎಂಬುದು ವಾಹನ ಸವಾರರ ಗಮನಕ್ಕೆ ಬಾರದೆ ಈ ಅಪಘಾತ ಸಂಭವಿಸಿದೆ. ಹೌದು ಹಂಪ್‌ ಇಲ್ಲವೆಂದು ವೇಗವಾಗಿ ಬಂದಾಗ ಸ್ಪೀಡ್‌ ಬ್ರೇಕರ್‌ಗೆ ಸಿಕ್ಕಿ ಸ್ಕೂಟರ್‌ ಸವಾರ ಬೈಕ್‌ ಸಮೇತ ಹಾರಿ ದೊಪ್ಪನೆ ಬಿದ್ದಿದ್ದಾನೆ.

ಈ ಸ್ಪೀಡ್‌ ಬ್ರೇಕರ್‌ನಿಂದ ಇಲ್ಲಿ ಇಂತಹ ಏಳು ಅಪಘಾತಗಳು ಸಂಭವಿಸಿದ್ದು, ಪರಿಣಾಮ ಮೂರು ವರ್ಷದ ಮಗು ಸೇರಿದಂತೆ ಇಬ್ಬರಿಗೆ ಗಾಯಗಳಾಗಿವೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಹಾವಿಗೆ ಮುತ್ತಿಡಲು ಹೋಗಿ ತುಟಿಗೆ ಕಚ್ಚಿಸಿಕೊಂಡ ವ್ಯಕ್ತಿ; ವಿಡಿಯೋ ವೈರಲ್‌

ಈ ಕುರಿತ ವಿಡಿಯೋವೊಂದನ್ನು askbhupi ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ವೇಗವಾಗಿ ಬಂದ ಸ್ಕೂಟರ್‌ ಸವಾರ ಹಂಪ್‌ ಕಾಣಿಸದೆ ಸ್ಕೂಟಿ ಸಮೇತ ಕೆಳಗೆ ಬೀಳುವಂತಹ ದೃಶ್ಯವನ್ನು ಕಾಣಬಹುದು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಗಮನ ಹರಿಸಿ ಎಂದು ಹಲವರು ಆಗ್ರಹಿಸಿದ್ದಾರೆ. ಇನ್ನೂ ಕೆಲವರು ನಿಮ್ಮ ಸ್ಪೀಡ್‌ ಬ್ರೇಕರ್‌ಗಳಿಂದಾಗಿ ಜನ ಸಾಮಾನ್ಯರು ಕಷ್ಟ ಅನುಭವಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ