ದೆಹಲಿ ಮೆಟ್ರೋ ಪ್ರಯಾಣಿಕರು ಮಾಡುವಂತಹ ಕಿತಾಪತಿಗಳ ಕಾರಣದಿಂದಲೇ ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಯುವತಿಯೊಬ್ಬಳು ಮೆಟ್ರೋದಳಗೆ ಹೇರ್ ಸ್ಟ್ರೈಟನಿಂಗ್ ಮಾಡಿದಂತ, ಯುವತಿಯರು ಅರೆಬರೆ ತೊಟ್ಟು ರೀಲ್ಸ್ ಮಾಡಿದಂತಹ, ದೆಹಲಿ ಮೆಟ್ರೋದಳಗೆ ಪ್ರೇಮಿಗಳು ರೊಮ್ಯಾನ್ಸ್ ಮಾಡಿದಂತಹ, ಸೀಟಿನ ವಿಚಾರವಾಗಿ ಜಗಳಗಳು ನಡೆದಂತಹ ಕೆಲವೊಂದಿಷ್ಟು ಘಟನೆಗಳಿಗೆ ಸಂಬಂಧಪಟ್ಟ ವಿಡಿಯೋಗಳು ಈ ಹಿಂದೆಯೂ ವೈರಲ್ ಆಗಿದ್ದವು. ಇದೀಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ಸೀಟಿನ ವಿಚಾರವಾಗಿ ಮಹಿಳೆಯರಿಬ್ಬರು ಮೆಟ್ರೋದಲ್ಲಿ ಜಗಳವಾಡಿದ್ದಾರೆ. ಹೌದು ಇವರಿಬ್ಬರನ ನಡುವಿನ ವಾಗ್ವಾದ ಅತಿರೇಕಕ್ಕೆ ತಿರುಗಿ ಕೊನೆಗೆ ಜುಟ್ಟು ಎಳೆದಾಡಿ ದೊಡ್ಡ ರಂಪಾಟವನ್ನೇ ಮಾಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಭಾರೀ ವೈರಲ್ ಆಗುತ್ತಿದೆ.
ವಿಶೇಷವಾಗಿ ದೆಹಲಿ ಮೆಟ್ರೋದಲ್ಲಿ ಸೀಟಿನ ವಿಚಾರವಾಗಿ ಪ್ರಯಾಣಿಕರ ಮಧ್ಯೆ ನಡೆಯುವ ಜಗಳಗಳ ಸುದ್ದಿಗಳು ಆಗಾಗ್ಗೆ ಕೇಳಿಬರುತ್ತಿರುತ್ತವೆ. ಇದೀಗ ಮತ್ತೊಂದು ಅದೇ ರೀತಿಯ ಘಟನೆ ನಡೆದಿದ್ದು, ಮಹಿಳೆಯರಿಬ್ಬರು ಸೀಟಿನ ವಿಚಾರವಾಗಿ ಜುಟ್ಟು ಎಳೆದಾಡಿ ಜಗಳವಾಡಿದ್ದಾರೆ. ಇವರಿಬ್ಬರ ನಡುವೆ ಮಾತಿನ ಚಕಮಕಿ ಏರ್ಪಟ್ಟು ಕೊನೆಗೆ ಕೂದಲು ಎಳೆದಾಡಿ ರಂಪಾಟ ಮಾಡಿದ್ದಾರೆ.
Delhi.connection ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಸೀಟಿನಲ್ಲಿ ಕುಳಿತ ಹಾಗೂ ಆಕೆಯ ಪಕ್ಕ ನಿಂತ ಮಹಿಳೆಯ ನಡುವೆ ಮಾತಿನ ಚಕಮಕಿ ಏರ್ಪಟ್ಟಂತಹ ದೃಶ್ಯವನ್ನು ಕಾಣಬಹುದು. ನಂತರ ಆ ಮಹಿಳೆ ಸೀಟಿನಿಂದ ಎದ್ದು ನಿಂತು ಇನ್ನೊಬ್ಬ ಮಹಿಳೆಯ ಜುಟ್ಟು ಎಳೆದಾಡಿ ಜೋರು ಜೋರಾಗಿ ಜಗಳವಾಡಿದ್ದಾಳೆ.
ಇದನ್ನೂ ಓದಿ: ಬರೋಬ್ಬರಿ 56 ಲಕ್ಷ ರೂ. ಗಳಿಗೆ ಮಾರಾಟವಾದ 1950ರ ದಶಕದ ಭಾರತೀಯ ಕರೆನ್ಸಿ ನೋಟು
ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 4.2 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಜಗಳವಾಡಿದ ತಕ್ಷಣ ಜನ ಏಕೆ ಪರಸ್ಪರ ದೈಹಿಕ ಹಲ್ಲೆಯನ್ನು ಮಾಡುತ್ತಾರೆ?ʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼವಿದ್ಯಾವಂತರೇ ಅನಾಗರಿಕರಂತೆ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ