ನಮ್ಮಲ್ಲಿ ಪ್ರತಿಭೆಗಳಿಗೆ, ಜುಗಾಡ್ ಐಡಿಯಾಗಳಿಗೇನು ಕೊರತೆ ಇಲ್ಲ. ಹೌದು ಹಲವರು ಕೆಲವೊಂದು ತಮ್ಮ ದಿನನಿತ್ಯದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ವಿಭಿನ್ನ ಶೈಲಿಯ ದೇಸಿ ಉಪಾಯಗಳನ್ನು ಬಳಸಿಕೊಂಡು ಖರ್ಚಿಲ್ಲದೆ ಆ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಇಂತಹ ಹೊಸ ಹೊಸ ಪ್ರಯೋಗಗಳ ಕುರಿತ ಹಲವಾರು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸದಾ ಕಾಣಸಿಗುತ್ತಿರುತ್ತವೆ. ಸದ್ಯ ಅಂತಹದೊಂದು ವಿಡಿಯೋ ಇದೀಗ ಹರಿದಾಡುತ್ತಿದ್ದು, ಮಹಿಳೆಯೊಬ್ಬರು ಇಸ್ತ್ರಿ ಪೆಟ್ಟಿಗೆ ಇಲ್ಲದಿದ್ರೆ ಏನಂತೆ, ಹಿಂಗೂ ಐರನ್ ಮಾಡ್ಬೋದಲ್ವಾ ಎಂದು ಪ್ರೆಶರ್ ಕುಕ್ಕರ್ ಬಳಸಿ ಬಟ್ಟೆ ಇಸ್ತ್ರಿ ಮಾಡಿದ್ದಾರೆ. ಕುರಿತ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಬಿಸಿ ಬಿಸಿಯಾದ ಪ್ರೆಶರ್ ಕುಕ್ಕರ್ ಬಳಸಿಕೊಂಡು ಬಟ್ಟೆಗೆ ಇಸ್ತ್ರಿ ಮಾಡುತ್ತಿರುವಂತ ತಮಾಷೆಯ ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು ಶುಭಾಂಗಿ ಪಂಡಿತ್ (@Babymishra_) ಎಂಬವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
प्रिय दीदी जी को दंडवत प्रणाम 🙏 pic.twitter.com/ux2XkGpMSX
— Shubhangi Pandit (@Babymishra_) March 12, 2024
ವೈರಲ್ ವಿಡಿಯೋದಲ್ಲಿ ಇಸ್ತ್ರಿ ಪೆಟ್ಟಿಗೆ ಕೆಟ್ಟು ಹೋದ ಕಾರಣ ಮಹಿಳೆಯೊಬ್ಬರು ಈಗ ಹೇಗಪ್ಪಾ ಪತಿಯ ಬಟ್ಟೆಯನ್ನು ಇಸ್ತ್ರಿ ಮಾಡೋದು ಅಂತ ತಲೆಕೆಡಿಸಿಕೊಂಡು ಕುಳಿತಿರುತ್ತಾರೆ. ಆ ಸಂದರ್ಭದಲ್ಲಿ ಅವರಿಗೆ ಟಕ್ಕಂತ ಒಂದು ಉಪಾಯ ಹೊಳೆಯುತ್ತದೆ. ನಂತರ ತನ್ನ ಈ ಜುಡಾಡ್ ಐಡಿಯಾವನ್ನೇ ಉಪಯೋಗಿಸಿಕೊಂಡು, ಆ ಮಹಿಳೆ ಗ್ಯಾಸ್ ಒಲೆಯ ಮೇಲೆ ಕುಕ್ಕರ್ ಬಿಸಿ ಮಾಡಲು ಇಟ್ಟು ಅದು ಬಿಸಿಯಾದ ತಕ್ಷಣ ಆ ಕುಕ್ಕರ್ ನಲ್ಲಿಯೇ ಚಂದವಾಗಿ ಬಟ್ಟೆಗೆ ಇಸ್ತ್ರಿ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಮೂತ್ರ ಪರೀಕ್ಷೆ ಮಾಡುವ ಸಾಮರ್ಥ್ಯ ಹೊಂದಿರುವ ಹೈಟೆಕ್ ಟಾಯ್ಲೆಟ್; ವಿಡಿಯೋ ವೈರಲ್
ಒಂದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಎರಡುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಮ್ಮ ಕ್ರಿಯೆಟಿವಿಟಿಗೆ ಒಂದು ಸಲಾಂʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅಬ್ಬಬ್ಬಾ ಇದೊಂದು ಅದ್ಭುತ ಕಲ್ಪನೆ! ಹಿಂಗೂ ಇಸ್ತ್ರಿ ಮಾಡ್ಬೋದು ಅಂತ ನಾನೆಂದು ಯೋಚನೆ ಕೂಡಾ ಮಾಡಿರಲಿಲ್ಲʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹೊಸ ಆವಿಷ್ಕಾರವನ್ನು ಕಂಡು ಹಿಡಿದ ಸಹೋದರಿಗೆ ಧನ್ಯವಾದಗಳುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ದೇಸಿ ಜುಗಾಡ್ ಐಡಿಯಾವನ್ನು ಕಂಡು ನಕ್ಕು ನಕ್ಕು ಸುಸ್ತಾಗಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:20 am, Thu, 14 March 24