ವಿಶ್ವದ ಅತ್ಯಂತ ದುಬಾರಿ ಫ್ರೆಂಚ್ ಫ್ರೈಸ್​ ಬಗ್ಗೆ ಗೊತ್ತಾ? ಆ್ಯಪಲ್ ಏರ್ಫೋಡ್​ 2ಗಿಂತ ದುಬಾರಿ; ಇಲ್ಲಿದೆ ವೈರಲ್ ವಿಡಿಯೋ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 28, 2022 | 8:46 AM

ಈ ಫ್ರೆಂಚ್ ಫ್ರೈ ಹೇಗೆ ತಯಾರಿಸಲಾಗುತ್ತದೆ ಎಂದು ಆಶ್ಚರ್ಯಪಡುತ್ತಿದ್ದಿರಾ? ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಪುಟದಲ್ಲಿ  ಮೇಕಿಂಗ್ ವಿಡಿಯೋ ಒಂದನ್ನು ಹಂಚಿಕೊಂಡಿದೆ.

ವಿಶ್ವದ ಅತ್ಯಂತ ದುಬಾರಿ ಫ್ರೆಂಚ್ ಫ್ರೈಸ್​ ಬಗ್ಗೆ ಗೊತ್ತಾ? ಆ್ಯಪಲ್ ಏರ್ಫೋಡ್​ 2ಗಿಂತ ದುಬಾರಿ; ಇಲ್ಲಿದೆ  ವೈರಲ್ ವಿಡಿಯೋ
ವಿಶ್ವದ ಅತ್ಯಂತ ದುಬಾರಿ ಫ್ರೆಂಚ್ ಫ್ರೈಸ್
Follow us on

ನಮ್ಮಲ್ಲಿ ಹಲವರು ಫೈಸ್ಟಾರ್​ ರೆಸ್ಟೋರೆಂಟ್‌ಗಳಲ್ಲಿ ಐಷಾರಾಮಿ ಆಹಾರವನ್ನು ಆನಂದಿಸಲು ಬಯಸುತ್ತೇವೆ. ಆದರೆ ನೀವು ಎಂದಾದರೂ ವಿಶ್ವದ ಅತ್ಯಂತ ದುಬಾರಿ ಭಕ್ಷ್ಯಗಳನ್ನು ತಿನ್ನುವ ಬಗ್ಗೆ ಯೋಚಿಸಿದ್ದೀರಾ? ಹೌದು ಆ್ಯಪಲ್ ಏರ್ಪಾಡ್ 2ಗಿಂತ ದುಬಾರಿಯಾಗಿರುವ ಈ ವಿಶೇಷವಾದ ಫ್ರೆಂಚ್ ಫ್ರೈ ಎನ್ನುವ ವಿಶೇಷ ಭಕ್ಷ್ಯದ ಬಗ್ಗೆ ಗೊತ್ತಾ? ಈ ಫ್ರೆಂಚ್​ ಫ್ರೈನ  ಬೆಲೆ 15, 257 ಇದೆ. ಇದು ನ್ಯೂಯಾರ್ಕ್ ನಗರದ ರೆಸ್ಟೋರೆಂಟ್‌ನಲ್ಲಿ ಲಭ್ಯವಿದೆ. ಇವು ಸಾಮಾನ್ಯ ಆಲೂಗಡ್ಡೆ ಫ್ರೈಗಳಲ್ಲ. ಬದಲಾಗಿ, ಪ್ರಪಂಚದಾದ್ಯಂತದ ವಿವಿಧ ದೇಶಗಳಿಂದ ರೆಸ್ಟೋರೆಂಟ್‌ಗೆ ತರಲಾಗುತ್ತದೆ. ಹಾಗೂ ಇತರೆ ಪದಾರ್ಥಗಳೊಂದಿಗೆ ಅವುಗಳನ್ನು ಬೇಯಿಸಲಾಗುತ್ತದೆ. ವಿಶೇಷ ಫ್ರೆಂಚ್ ಫ್ರೈಗಳನ್ನು ಐಷಾರಾಮಿ ಆಹಾರದ ವರ್ಗಕ್ಕೆ ಇದನ್ನು ಸೇರಿಸಲಾಗಿದೆ. ಏಕೆಂದರೆ ಈ ಫ್ರೆಂಚ್​ ಫ್ರೈ ಖಾದ್ಯದ ಮೇಲೆ ಚಿನ್ನದ ಪದರವನ್ನು ಲೇಪಿಸಲಾಗುತ್ತದೆ. ಯೂಎಸ್​ನ ನ್ಯೂಯಾರ್ಕ್ ಸಿಟಿಯಲ್ಲಿರುವ ಸೆರೆಂಡಿಪಿಟಿ ರೆಸ್ಟೊರೆಂಟ್‌ನಲ್ಲಿ ಮಾರಾಟವಾಗುವ ಫ್ರೆಂಚ್ ಫ್ರೈಗಳ ಮೇಲೆ ದುಬಾರಿ ಹಳದಿ ಲೋಹವನ್ನು ಚಿಮುಕಿಸಲಾಗುತ್ತದೆ. ಅಷ್ಟೇ ಅಲ್ಲ! ಈ ಆಲೂಗೆಡ್ಡೆ ಫ್ರೈಸ್​ ಅತ್ಯಂತ ದುಬಾರಿ ಫ್ರೆಂಚ್ ಫ್ರೈಸ್ (World’s Most Expensive French Fries) ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿದೆ.

ಈ ಫ್ರೆಂಚ್ ಫ್ರೈ ಹೇಗೆ ತಯಾರಿಸಲಾಗುತ್ತದೆ ಎಂದು ಆಶ್ಚರ್ಯಪಡುತ್ತಿದ್ದಿರಾ? ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಪುಟದಲ್ಲಿ  ಮೇಕಿಂಗ್ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಈಗಾಗಲೇ 24,216 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದ್ದು, ಐಷಾರಾಮಿ ಆಹಾರ ಪದಾರ್ಥವನ್ನು ಜನರು ಕಣ್ತುಂಬಿಕೊಂಡು ಖುಷಿಪಟ್ಟಿದ್ದಾರೆ.

ಪದಾರ್ಥಗಳ ಕುರಿತು ಹೇಳುವುದಾದರೆ, ಈ ಫ್ರೆಂಚ್ ಫ್ರೈಗಳನ್ನು ಅಪ್‌ಸ್ಟೇಟ್ ಚಿಪ್ಪರ್‌ಬೆಕ್ ಆಲೂಗಡ್ಡೆ, ವಿಂಟೇಜ್ 2006 ಡೊಮ್ ಪೆರಿಗ್ನಾನ್ ಷಾಂಪೇನ್, ಜೆ. ಲೆಬ್ಲಾಂಕ್ ಫ್ರೆಂಚ್ ಷಾಂಪೇನ್ ಅರ್ಡೆನ್ನೆ ವಿನೆಗರ್, ಫ್ರಾನ್ಸ್‌ನಿಂದ ಶುದ್ಧ ಕೇಜ್-ಫ್ರೀ ಗೂಸ್ ಕೊಬ್ಬು, ಗೆರಾಂಡೆ ಟ್ರಫಲ್ ಸಾಲ್ಟ್, ಟ್ರಫಲ್ ಎಣ್ಣೆ, ಕ್ರೀಟ್ ಸೆನೆಸಿ ಪೆಕೊರಿನೊ ಟರ್ಟುಫಲ್ ಚೀಸ್‌ನಿಂದ ತಯಾರಿಸಲಾಗುತ್ತದೆ. ಇಟಲಿಯಿಂದ ಕಪ್ಪು ಬೇಸಿಗೆ ಟ್ರಫಲ್ಸ್, ಟ್ರಫಲ್ ಬೆಣ್ಣೆ, ಸಾವಯವ A2 100% ಜರ್ಸಿ ಹಸುಗಳಿಂದ ಹುಲ್ಲಿನ ಕೆನೆ, ಗ್ರುಯೆರೆ ಟ್ರಫಲ್ಡ್ ಸ್ವಿಸ್ ಒಳಗೊಂಡಿದೆ.

ಇದನ್ನೂ ಓದಿ:

IPL 2022, GT vs LSG: ಐಪಿಎಲ್​ನಲ್ಲಿಂದು ಕುತೂಹಲಕಾರಿ ಕದನ: ಲಖನೌ-ಗುಜರಾತ್ ಪದಾರ್ಪಣೆಗೆ ಸಜ್ಜು

‘ಬೀಸ್ಟ್​ Vs ಕೆಜಿಎಫ್​ ಅನ್ನೋಕೆ ಇದು ಎಲೆಕ್ಷನ್​ ಅಲ್ಲ’: ದಳಪತಿ ವಿಜಯ್​ ಚಿತ್ರದ ಪೈಪೋಟಿ ಬಗ್ಗೆ ಯಶ್​ ಪ್ರತಿಕ್ರಿಯೆ