Viral Video: ವಿಶ್ವದ ಅತ್ಯಂತ ದುಬಾರಿ ಒಂಟೆ; ಬೆಲೆ ಕೇಳಿದ್ರೆ ನಿಜಕ್ಕೂ ದಂಗ್ ಆಗ್ತೀರಾ..!
ಸೌದಿ ಅರೇಬಿಯಾದಲ್ಲಿ ಇಷ್ಟು ದುಬಾರಿ ಬೆಲೆಗೆ ಹರಾಜಾದ ಒಂಟೆ ವಿಶ್ವದ ಅಪರೂಪದ ಒಂಟೆಗಳಲ್ಲಿ ಒಂದಾಗಿದೆ. ಈ ಒಂಟೆ ತನ್ನ ವಿಶೇಷ ಸೌಂದರ್ಯ ಮತ್ತು ಅನನ್ಯತೆಗೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ.
ಇಸ್ಲಾಂ ಧರ್ಮದ ಪವಿತ್ರ ತಿಂಗಳಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ರಂಜಾನ್ ಹಬ್ಬವು ಬರುತ್ತಿದೆ. ಸೌದಿ ಅರೇಬಿಯಾದಲ್ಲಿ ಈದ್ ಹಬ್ಬಕ್ಕಾಗಿ ಒಂಟೆಗಳನ್ನು ಬಲಿ ಕೊಡುವುದು ನಮಗೆಲ್ಲ ಗೊತ್ತೇ ಇದೆ. ಈ ಕಾರಣಕ್ಕಾಗಿಯೇ ದೇಶದ ವ್ಯಕ್ತಿಯೊಬ್ಬರು ವಿಶ್ವದ ಅತ್ಯಂತ ದುಬಾರಿ ಒಂಟೆ (Camel) ಖರೀದಿ ಮಾಡಿದ್ದಾರೆ. ಈ ಒಂಟೆಯೂ 7 ಮಿಲಿಯನ್ ಅಂದರೆ ಸುಮಾರು 14.23 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಹೌದು ಗಲ್ಫ್ ನ್ಯೂಸ್ ವರದಿಯ ಪ್ರಕಾರ, ಸೌದಿ ಅರೇಬಿಯಾದಲ್ಲಿ ಈ ಒಂಟೆಗಾಗಿ ಸಾರ್ವಜನಿಕ ಹರಾಜು ಆಯೋಜಿಸಲಾಗಿದೆ. ಹರಾಜಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ವ್ಯಕ್ತಿಯೊಬ್ಬರು ಮೈಕ್ರೊಫೋನ್ ಮೂಲಕ ಹರಾಜಿನಲ್ಲಿ ಬಿಡ್ಡಿಂಗ್ ಮಾಡುತ್ತಿರುವುದನ್ನು ಕಾಣಬಹುದು. ಒಂಟೆಯ ಆರಂಭಿಕ ಬಿಡ್ 5 ಮಿಲಿಯನ್ ಸೌದಿ ರಿಯಾಲ್‌ನಲ್ಲಿ ಇರಿಸಲಾಗಿತ್ತು ಅಂದರೆ ಸುಮಾರು 10.16 ಕೋಟಿ ರೂ.
— مقاطع فيديو (@Yoyahegazy1) March 25, 2022
ಆದಾಗ್ಯೂ, ಅವರ ಬಿಡ್ನ್ನು 7 ಮಿಲಿಯನ್ ಸೌದಿ ರಿಯಾಲ್‌ಗಳಲ್ಲಿ ಅಂತಿಮಗೊಳಿಸಲಾಯಿತು. ಇಷ್ಟು ಹೆಚ್ಚು ಬಿಡ್ ಮಾಡಿ ಒಂಟೆ ಖರೀದಿಸಿದವರ ಗುರುತು ಬಹಿರಂಗವಾಗಿಲ್ಲ. ವಿಡಿಯೋದಲ್ಲಿ, ಒಂಟೆಯನ್ನು ಚೌಕಾಕಾರದ ಕಬ್ಬಿಣದ ಮಧ್ಯೆ ಇರಿಸಿರುವುದನ್ನು ನೀವು ನೋಡಬಹುದು. ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ ಜನರು ಹರಾಜಿನಲ್ಲಿ ಭಾಗವಹಿಸುತ್ತಿರುವುದು ಕಂಡುಬಂದಿದೆ.
ಈ ಒಂಟೆಯ ವಿಶೇಷತೆ ಏನು?
ಸೌದಿ ಅರೇಬಿಯಾದಲ್ಲಿ ಇಷ್ಟು ದುಬಾರಿ ಬೆಲೆಗೆ ಹರಾಜಾದ ಒಂಟೆ ವಿಶ್ವದ ಅಪರೂಪದ ಒಂಟೆಗಳಲ್ಲಿ ಒಂದಾಗಿದೆ. ಈ ಒಂಟೆ ತನ್ನ ವಿಶೇಷ ಸೌಂದರ್ಯ ಮತ್ತು ಅನನ್ಯತೆಗೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಜಗತ್ತಿನಲ್ಲಿ ಈ ಜಾತಿಯ ಒಂಟೆಗಳು ಬಹಳ ಕಡಿಮೆ. ಸೌದಿ ಅರೇಬಿಯಾದಲ್ಲಿ ಜಗತ್ತಿನ ಅತಿ ದೊಡ್ಡ ಒಂಟೆ ಮೇಳವೂ ನಡೆಯುತ್ತದೆ.
ಇದನ್ನೂ ಓದಿ:
Viral Video: ಗುರುತ್ವಾಕರ್ಷಣೆ ನಿಯಮವೇ ಇಲ್ಲ ಎಂದ ನೆಟ್ಟಿಗರು; 7 ಸೆಕೆಂಡ್ನಲ್ಲಿ ಬೆಕ್ಕು ಏನು ಮಾಡಿತು ನೋಡಿ!