AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಧಾನಕಾರನ ಮೇಲೆ ವಿಷಪ್ರಾಶನ: ಉಕ್ರೇನ್-ರಷ್ಯಾ ಶಾಂತಿ ಸ್ಥಾಪನೆ ಪ್ರಯತ್ನಗಳಿಗೆ ಮತ್ತೊಂದು ಹಿನ್ನಡೆ

ರಷ್ಯಾ ಮೂಲದ ಶ್ರೀಮಂತ ಉದ್ಯಮಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆಪ್ತ ರೊಮನ್ ಅಬ್ರಾಮೊವಿಕ್ ಮತ್ತು ಇತರ ಉಕ್ರೇನ್ ಸಂಧಾನಕಾರರ ಮೇಲೆ ರಷ್ಯಾ ಏಜೆಂಟರು ವಿಷಪ್ರಾಶನ ಮಾಡಿದ್ದಾರೆ

ಸಂಧಾನಕಾರನ ಮೇಲೆ ವಿಷಪ್ರಾಶನ: ಉಕ್ರೇನ್-ರಷ್ಯಾ ಶಾಂತಿ ಸ್ಥಾಪನೆ ಪ್ರಯತ್ನಗಳಿಗೆ ಮತ್ತೊಂದು ಹಿನ್ನಡೆ
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಸಂಧಾನಕಾರ ರೊಮನ್ ಅಬ್ರಾಮೊವಿಕ್
TV9 Web
| Edited By: |

Updated on:Mar 29, 2022 | 8:34 AM

Share

ಕೀವ್: ರಷ್ಯಾ-ಉಕ್ರೇನ್ ಸಂಘರ್ಷಕ್ಕೆ (Russia Ukraine Conflict) ಶಾಂತಿಯುತ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳಿಗೆ ಮತ್ತೆ ಹಿನ್ನಡೆಯಾಗಿದೆ. ಶಾಂತಿ ಸ್ಥಾಪನೆಗಾಗಿ ಶ್ರಮಿಸುತ್ತಿದ್ದ ರಷ್ಯಾ ಮೂಲದ ಶ್ರೀಮಂತ ಉದ್ಯಮಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಆಪ್ತ ರೊಮನ್ ಅಬ್ರಾಮೊವಿಕ್ (Abramovich) ಮತ್ತು ಇತರ ಉಕ್ರೇನ್ ಸಂಧಾನಕಾರರ ಮೇಲೆ ರಷ್ಯಾ ಏಜೆಂಟರು ವಿಷಪ್ರಾಶನ ಮಾಡಿದ್ದಾರೆ ಎಂದು ದೂರಲಾಗಿದೆ. ರೊಮನ್ ಅಬ್ರಾವಿಕ್ ಅವರನ್ನು ಟರ್ಕಿ ರಾಜಧಾನಿ ಇಸ್ತಾಂಬುಲ್​ಗೆ ಕರೆದೊಯ್ದಿದ್ದು, ಅಲ್ಲಿಯೇ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ರಷ್ಯಾ ನಿಯೋಗದೊಂದಿಗೆ ಸಂಧಾನ ಮಾತುಕತೆಯಲ್ಲಿ ಪಾಲ್ಗೊಂಡಿದ್ದ ಅಬ್ರಾಮೊವಿಕ್ ಮತ್ತು ಇತರ ಉಕ್ರೇನ್ ಪ್ರತಿನಿಧಿಗಳಲ್ಲಿ ಚರ್ಮದ ಉರಿ, ಕಣ್ಣುರಿ, ಕಣ್ಣು ಕೆಂಪಾಗುವುದು, ಕುರುಡುತನ ಮತ್ತು ತಲೆನೋವಿನ ಲಕ್ಷಣಗಳು ಕಾಣಿಸಿಕೊಂಡವು ಎಂದು ಅಮೆರಿಕದ ಪ್ರತಿಷ್ಠಿತ ದಿನಪತ್ರಿಕೆ ವಾಲ್​ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು. ಇದು ವಿಷಪ್ರಾಶನದ ಪರಿಣಾಮ ಇರಬಹುದು ಎಂದು ಶಂಕಿಸಲಾಗಿತ್ತು. ವಿಷ ಉಣಿಸುವ ತಂತ್ರದ ಉದ್ದೇಶವೇನು? ಇದರಲ್ಲಿ ಪಾಲ್ಗೊಂಡಿದ್ದವರು ಯಾರು? ಎಂಥ ವಿಷವನ್ನು ಅವರ ಮೇಲೆ ಪ್ರಯೋಗಿಸಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಶಾಂತಿಯಲ್ಲಿ ಪಾಲ್ಗೊಂಡಿದ್ದ ಉಕ್ರೇನ್​ನ ಸಂಸದ ಉಮೆರೊವ್ ಸಹ ಟರ್ಕಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಪ್ರಾಶನದ ವರದಿಗಳನ್ನು ಅವರು ತಳ್ಳಿಹಾಕಿಲ್ಲ. ಬದಲಿಗೆ ಟ್ವಿಟರ್​ನಲ್ಲಿ ‘ಸದ್ಯಕ್ಕೆ ನಾನು ಕ್ಷೇಮ’ ಎಂದಷ್ಟೇ ಪೋಸ್ಟ್ ಮಾಡಿದ್ದಾರೆ. ಉಕ್ರೇನ್ ಮತ್ತು ರಷ್ಯಾ ನಡುವ ಇಂದು (ಮಾರ್ಚ್ 29) ಮತ್ತೊಂದು ಸುತ್ತಿನ ಶಾಂತಿ ಮಾತುಕತೆಗಳು ಆರಂಭವಾಗಬೇಕಿತ್ತು. ಎರಡೂ ದೇಶಗಳ ನಡುವೆ ಕಳೆದ 15 ದಿನಗಳಿಂದ ಮಾತುಕತೆ ಸ್ಥಗಿತಗೊಂಡಿದೆ.

ರಷ್ಯಾ ದಾಳಿಯ ನಂತರ ಶಾಂತಿಸ್ಥಾಪನೆಗೆಂದು ಶ್ರಮಿಸುತ್ತಿದ್ದ ಅಬ್ರಮೊವಿಕ್​ರನ್ನು ಅನಧಿಕೃತ ಸಂಧಾನಕಾರ ಎಂದು ಉಕ್ರೇನ್ ಪರಿಗಣಿಸಿತ್ತು. ಪುಟಿನ್​ಗೆ ಆಪ್ತರಾಗಿರುವ ಅಬ್ರಮೊವಿಕ್​ ವಿರುದ್ಧ ಅಮೆರಿಕ, ಬ್ರಿಟನ್ ಮತ್ತು ಇತರ ಐರೋಪ್ಯ ಒಕ್ಕೂಟದ ದೇಶಗಳು ಹಲವು ನಿರ್ಬಂಧಗಳನ್ನು ವಿಧಿಸಿದ್ದವು. ಆದರೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಮಧ್ಯಪ್ರವೇಶಿಸಿ ಈ ನಿರ್ಬಂಧಗಳ ಕಾವು ತಗ್ಗುವಂತೆ ಮಾಡಿದ್ದರು.

ರಷ್ಯಾ ವಿರುದ್ಧ ಈ ಹಿಂದೆಯೂ ಹಲವು ವಿಷಪ್ರಾಶನದ ಆರೋಪಗಳು ಕೇಳಿಬಂದಿದ್ದವು. 2018ರಲ್ಲಿ ಇಂಗ್ಲೆಂಡ್​ನಲ್ಲಿ ಇಬ್ಬರು ರಷ್ಯನ್ನರನ್ನು ವಿಷ ಹಾಕಿ ಕೊಲ್ಲಲು ರಷ್ಯಾದ ಗುಪ್ತಚರ ಏಜೆಂಟ್​ಗಳು ಯತ್ನಿಸಿದ್ದರು. ಆದರೆ ಈ ಘಟನೆಯಲ್ಲಿ ಓರ್ವ ಬ್ರಿಟನ್ ನಾಗರಿಕ ಮೃತಪಟ್ಟಿದ್ದ. 2006ರಲ್ಲಿಯೂ ರಷ್ಯಾದ ಏಜೆಂಟ್​ಗಳು ಬ್ರಿಟನ್​ನಲ್ಲಿ ರೇಡಿಯೊ ವಿಕಿರಣ ಸೂಸುವ ವಸ್ತು ಬಳಸಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ್ದವು. ಆದರೆ ರಷ್ಯಾ ಸರ್ಕಾರವು ಈ ಎಲ್ಲ ಅರೋಪಗಳನ್ನು ಅಲ್ಲಗಳೆದಿತ್ತು.

ಇದನ್ನೂ ಓದಿ: Russia Ukraine Conflict: ರಷ್ಯಾಕ್ಕೆ ಎಂದಿಗೂ ಶರಣಾಗುವುದಿಲ್ಲ ಎಂದ ಝೆಲೆನ್​ಸ್ಕಿ: ರಷ್ಯಾ ಉಕ್ರೇನ್ ಸಂಘರ್ಷದ 10 ಪ್ರಮುಖ ಬೆಳವಣಿಗೆಗಳಿವು

ಇದನ್ನೂ ಓದಿ: Russia Ukraine War: ಪುಟಿನ್ ಕೆಟ್ಟೋನು ಅಂತ್ಲೇ ಅಂದ್ಕೊಳಿ: ರಷ್ಯಾ ಉಕ್ರೇನ್ ಯುದ್ಧ ನೋಡುವ ಮೂರು ಕ್ರಮಗಳಿವು

Published On - 8:33 am, Tue, 29 March 22

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್