AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಡನನ್ನು ಕೊಂದರು, ಮಗ ಅಳುತ್ತಿದ್ದರೂ ನನ್ನ ಮೇಲೆ ಅತ್ಯಾಚಾರ ನಡೆಸಿದರು; ರಷ್ಯನ್ ಸೈನಿಕರ ಕರಾಳ ಮುಖ ಬಿಚ್ಚಿಟ್ಟ ಉಕ್ರೇನ್ ಮಹಿಳೆ

ರಷ್ಯಾದ ಸೈನಿಕರು ನನ್ನ ಗಂಡನಿಗೆ ಶೂಟ್ ಮಾಡಿ, ಮನೆಯೊಳಗೆ ನುಗ್ಗಿ ಬಂದರು. ನನ್ನ ಮಗ ಪಕ್ಕದ ರೂಮಿನಲ್ಲಿ ಅಳುತ್ತಾ ಕೂತಿದ್ದ. ಆಗ ನನಗೆ ಬಂದೂಕು ತೋರಿಸಿ ಹೆದರಿಸಿ, ನನ್ನ ಮೇಲೆ ಅತ್ಯಾಚಾರವೆಸಗಿದರು ಎಂದು ಉಕ್ರೇನ್ ಮಹಿಳೆ ಹೇಳಿದ್ದಾರೆ.

ಗಂಡನನ್ನು ಕೊಂದರು, ಮಗ ಅಳುತ್ತಿದ್ದರೂ ನನ್ನ ಮೇಲೆ ಅತ್ಯಾಚಾರ ನಡೆಸಿದರು; ರಷ್ಯನ್ ಸೈನಿಕರ ಕರಾಳ ಮುಖ ಬಿಚ್ಚಿಟ್ಟ ಉಕ್ರೇನ್ ಮಹಿಳೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Mar 29, 2022 | 1:31 PM

Share

ನವದೆಹಲಿ: ಉಕ್ರೇನ್​ನಲ್ಲಿ ರಷ್ಯಾದ ದಾಳಿ ಮುಂದುವರೆದಿದೆ. ರಷ್ಯಾದ ಯುದ್ಧದಿಂದ ಉಕ್ರೇನ್​ನ ಬಹುತೇಕ ಜನರ ಜೀವನ ಮೂರಾಬಟ್ಟೆಯಾಗಿದೆ. ತಮ್ಮ ದೇಶದ ಮಹಿಳೆಯರ ಮೇಲೆ ರಷ್ಯಾದ ಸೈನಿಕರು ಅತ್ಯಾಚಾರ ನಡೆಸಿದ್ದಾರೆ ಎಂದು ಉಕ್ರೇನ್ ಸರ್ಕಾರ ಆರೋಪಿಸಿತ್ತು. ಇದರ ಬೆನ್ನಲ್ಲೇ ಉಕ್ರೇನ್​ನ (Ukraine) ಮಹಿಳೆಯೊಬ್ಬರು ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ನನ್ನ ಗಂಡನನ್ನು ಗುಂಡಿಕ್ಕಿ ಕೊಂದ ಕೆಲವೇ ಕ್ಷಣಗಳಲ್ಲಿ ರಷ್ಯಾದ ಸೈನಿಕರು ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಉಕ್ರೇನಿಯನ್ ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ. ಅಪ್ಪನನ್ನು ಕೊಂದಿದ್ದರಿಂದ ನನ್ನ 4 ವರ್ಷದ ಮಗ ಗಾಬರಿಯಿಂದ ಅಳುತ್ತಿದ್ದನು. ಆಗ ಅವನ ಅಳುವನ್ನು ಕೇಳಿಸಿಕೊಂಡು ಅಲ್ಲಿಗೆ ಬಂದ ರಷ್ಯಾದ (Russia Soldiers) ಸೈನಿಕರು ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ. ಆಕೆಯ ಆರೋಪವನ್ನು ಈಗ ಉಕ್ರೇನ್ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.

ಮಾರ್ಚ್ 9ರಂದು ರಷ್ಯಾದ ಸೈನಿಕರು ನಮ್ಮ ಮನೆಯತ್ತ ಬರುತ್ತಿರುವ ಚಪ್ಪಲಿಯ ಸದ್ದು ಕೇಳಿತು. ನಂತರ ಮನೆಯ ಗೇಟ್ ಓಪನ್ ಆದ ಸದ್ದು ಕೇಳಿತು. ಅವರು ಮೊದಲು ನನ್ನ ಮುದ್ದಿನ ನಾಯಿಯನ್ನು ಕೊಂದು ನಂತರ ನನ್ನ ಪತಿಗೆ ಗುಂಡು ಹಾರಿಸಿ ಕೊಂದರು. ನಾನು ರೂಮಿನೊಳಗಿಂದ “ನನ್ನ ಗಂಡ ಎಲ್ಲಿ?” ಎಂದು ಕೂಗುತ್ತಿದ್ದೆ. ಆ ರೂಮಿನ ಕಿಟಕಿ ಬಳಿ ಹೋಗಿ ನೋಡಿದಾಗ ರಷ್ಯಾದ ಸೇನೆಯ ಯುವಕನೊಬ್ಬ ನನ್ನ ಗಂಡನಿಗೆ ಗುಂಡು ಹಾರಿಸಿದ್ದ. ನನ್ನ ಗಂಡ ಗೇಟಿನ ಬಳಿ ನೆಲದಲ್ಲಿ ಸತ್ತು ಬಿದ್ದಿದ್ದ. ‘ನಿನ್ನ ಗಂಡನನ್ನು ನಾಜಿಯಾದ್ದರಿಂದ ನಾನು ಸಾಯಿಸಿದೆ’ ಎಂದು ಆ ಸೈನಿಕ ನನಗೆ ಕೂಗಿ ಹೇಳಿದ ಎಂದು ಆ ಮಹಿಳೆ ಆ ದಿನ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಅದಾದ ನಂತರ ರಷ್ಯಾದ ಸೈನಿಕರು ಮನೆಯೊಳಗೆ ನುಗ್ಗಿ ಬಂದರು. ನನ್ನ ಮಗ ಪಕ್ಕದ ರೂಮಿನಲ್ಲಿ ಅಳುತ್ತಾ ಕೂತಿದ್ದ. ಆಗ ನನಗೆ ಬಂದೂಕು ತೋರಿಸಿ ಹೆದರಿಸಿ, ನನ್ನ ಮೇಲೆ ಅತ್ಯಾಚಾರವೆಸಗಿದರು. ನಾನು ಬಾಯಿ ಮುಚ್ಚಿಕೊಳ್ಳದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದರು ಎಂದು ಆಕೆ ಹೇಳಿದ್ದಾರೆ.

“ರಷ್ಯಾದ ಸೈನಿಕನೊಬ್ಬ ಬಂದೂಕು ಹಿಡಿದು ನನ್ನ ಬಟ್ಟೆಗಳನ್ನು ತೆಗೆಯಲು ಹೇಳಿದನು. ನಂತರ ಇಬ್ಬರು ಸೈನಿಕರು ನನ್ನ ಮೇಲೆ ಒಬ್ಬರ ನಂತರ ಒಬ್ಬರಂತೆ ಅತ್ಯಾಚಾರ ಮಾಡಿದರು. ನನ್ನ ಮಗ ಬಾಯ್ಲರ್ ರೂಮಿನಲ್ಲಿ ಅಳುತ್ತಿದ್ದರೂ ಅವರು ಸುಮ್ಮನಾಗಲಿಲ್ಲ. ನಿನ್ನ ಮಗ ಅಳುವುದನ್ನು ನಿಲ್ಲಿಸದಿದ್ದರೆ ಅವನನ್ನೂ ಕೊಲ್ಲುತ್ತೇವೆ ಎಂದು ನನಗೆ ಹೆದರಿಸಿದರು. ಅತ್ಯಾಚಾರ ನಡೆಸಿದ ಮೇಲೆ ನನ್ನ ಹಣೆಗೆ ಬಂದೂಕು ಇಟ್ಟು ಇವಳನ್ನು ಕೊಲ್ಲೋದಾ ಅಥವಾ ಬದುಕಿಸೋದಾ?” ಎಂದು ಆ ಸೈನಿಕರಿಬ್ಬರು ಗೇಲಿ ಮಾಡುತ್ತಾ ಕೊನೆಗೆ ನನ್ನನ್ನು ಸಾಯಿಸದೆ ಅಲ್ಲೇ ಬಿಟ್ಟು ಹೋದರು ಎಂದು ಆ ಮಹಿಳೆ ತನ್ನ ಮೇಲೆ ನಡೆದ ಅತ್ಯಾಚಾರದ ಬಗ್ಗೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಸಂಧಾನಕಾರನ ಮೇಲೆ ವಿಷಪ್ರಾಶನ: ಉಕ್ರೇನ್-ರಷ್ಯಾ ಶಾಂತಿ ಸ್ಥಾಪನೆ ಪ್ರಯತ್ನಗಳಿಗೆ ಮತ್ತೊಂದು ಹಿನ್ನಡೆ

ಭ್ರಮನಿರಸನಗೊಂಡ ಸೈನಿಕರಿಂದ ರಷ್ಯಾದ ಕರ್ನಲ್ ಹತ್ಯೆ: ಉಕ್ರೇನ್​ನಲ್ಲಿ ಸತ್ತ ರಷ್ಯಾ ಸೇನಾಧಿಕಾರಿಗಳ ಸಂಖ್ಯೆ 7ಕ್ಕೆ

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ