Viral video: ಭಾರತದಲ್ಲಿ ಎಂಟು ಬಗೆಯ ಮಾಂಸಹಾರಿಗಳಿದ್ದಾರಂತೆ! ನಿಮ್ಗೊತ್ತಾ?

| Updated By: Rakesh Nayak Manchi

Updated on: Jan 15, 2024 | 7:28 PM

ಇಲ್ಲೊಂದು ಬಹಳ ಇಂಟರೆಸ್ಟಿಂಗ್ ಹಾಗೇ ತಮಾಷೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದದಲ್ಲಿ ಹರಿದಾಡುತ್ತಿದೆ. ಇದ್ರಲ್ಲಿ ನಮ್ಮ ದೇಶದಲ್ಲಿರುವ ಎಂಟು ಬಗೆಯ ಮಾಂಸಹಾರಿಗಳ ಬಗ್ಗೆ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಾರೆ. ಬನ್ನಿ ಇದ್ರಲ್ಲಿ ನೀವು ಯಾವ ಗುಂಪಿಗೆ ಸೇರಿದ  ಮಾಂಸಹಾರಿಗಳೆಂದು ತಿಳಿದುಕೊಳ್ಳಿ.

Viral video: ಭಾರತದಲ್ಲಿ ಎಂಟು ಬಗೆಯ ಮಾಂಸಹಾರಿಗಳಿದ್ದಾರಂತೆ! ನಿಮ್ಗೊತ್ತಾ?
ನಮ್ ದೇಶದಲ್ಲಿ ಎಂಟು ಬಗೆಯ ಮಾಂಸಹಾರಿಗಳಿದ್ದಾರಂತೆ
Follow us on

ನಾನ್ ವೆಜ್ ಊಟ ಅಂದ ಕೂಡ್ಲೆ ಕೆಲವರ ಬಾಯಲ್ಲಿ ನೀರೂರುತ್ತದೆ.  ಕೆಲವರು ಚಿಕನ್, ಮಟನ್ ತಿನ್ನುವ  ಮಾಂಸಹಾರಿಗಳಾಗಿದ್ದರೆ, ಇನ್ನೂ ಕೆಲವರು ಕೇವಲ ಮೊಟ್ಟೆಗಳನ್ನು ಮಾತ್ರ ತಿನ್ನುವ ಮಾಂಸಹಾರಿಗಳಿದ್ದಾರೆ. ಹೀಗೆ ನಮ್ಮ ದೇಶದಲ್ಲಿ ಒಟ್ಟಾರೆ 8 ಬಗೆಯ ಮಾಂಸಹಾರಿಗಳಿದ್ದಾರಂತೆ. ಈ ಕುರಿತ ಬಹಳ ಇಂಟರೆಸ್ಟಿಂಗ್ ಹಾಗೇನೇ ತಮಾಷೆಯ ವಿಡಿಯೋವೊಂದು (Viral Video) ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬನ್ನಿ ಹಾಗಾದ್ರೆ ನೀವು ಯಾವ ಗುಂಪಿಗೆ ಸೇರಿದ ನಾನ್ ವೆಜಿಟೇರಿಯನ್ ಅನ್ನೋದನ್ನ ತಿಳಿದುಕೊಳ್ಳಿ.

ಈ  8 ಬಗೆಯ ಮಾಂಸಹಾರಿಗಳಲ್ಲಿ ಮೊದಲನೆಯವರು ಕೇವಲ ಮೊಟ್ಟೆಯನ್ನು ತಿಂತಾರೆ,  ಅವ್ರು ಚಿಕನ್ ಅಥವಾ ಮಟನ್ ತಿನ್ನಲ್ವಂತೆ.  ಎರಡನೆಯ ಮಾಂಸಹಾರಿ ಗುಂಪಿನವರು  ಮೊಟ್ಟೆಯನ್ನು ಉಪಯೋಗಿಸಿಕೊಂಡು  ಮಾಡಿದಂತಹ ಕೇಕ್ ತಿಂತಾರಂತೆ, ಆದ್ರೆ ಇವರುಗಳು ಮೊಟ್ಟೆಯಲ್ಲಿ ಮಾಡಿದಂತಹ ಒಮ್ಲೆಟ್ ಆಗಿರ್ಲಿ ಅಥವಾ ಇನ್ಯಾವುದೇ ನಾನ್ ವೆಜ್ ಐಟಂ ತಿನ್ನಲ್ವಂತೆ.

ಇನ್ನೂ ಮೂರನೇ ಗುಂಪಿನವರು ಕೇವಲ ಚಿಕನ್ ಸಾರು ತಿಂತಾರಂತೆ, ಆದ್ರೆ ಚಿಕನ್ ಪೀಸ್ ಆಗ್ಲಿ, ಮೊಟ್ಟೆ, ಮಟನ್ ಆಗ್ಲಿ ತಿನ್ನೋದೆ ಇಲ್ವಂತೆ. ಇನ್ನು ನಾಲ್ಕನೆಯವರು ಕೇವಲ ಮೀನನ್ನು ಬಿಟ್ಟು ಬೇರ್ಯಾವುದೇ ನಾನ್ ವೆಜ್ ಐಟಂ ತಿನ್ನಲ್ವಂತೆ. ಐದನೆಯ ಗುಂಪಿನ ನಾನ್ ವೆಜಿಟೇರಿಯನ್ಗಳ ಬಗ್ಗೆ ನೋಡುವುದಾದರೆ ಇವ್ರು ಸಾಮಾನ್ಯವಾಗಿ ಮಾಂಸಹಾರವನ್ನು ತಿನ್ನೋದಿಲ್ಲ, ಆದ್ರೆ ಅಕ್ಕಪಕ್ಕದವರು ಯಾರಾದ್ರೂ  ಪ್ಲೀಸ್ ತಿನ್ನಿ ಅಂತ ಹೇಳಿದ್ರೆ ಮಾತ್ರ ನಾನ್ ವೆಜ್ ತಿಂತಾರತೆ.

ಇದನ್ನೂ ಓದಿ: Viral Video: ತನ್ನ ಮೊಟ್ಟೆಯೆಂದು ಭಾವಿಸಿ ಏರ್ಪೋಡ್ ಚಾರ್ಜಿಂಗ್ ಕೇಸ್​ಗೆ ಕಾವು ಕೊಟ್ಟ ಕೋಳಿ

ಇನ್ನು ಆರನೆಯ ಗುಂಪಿನವರು  ಅಪರೂಪಕ್ಕೆ  ಮಾತ್ರ ಮಾಂಸಹಾರವನ್ನು ಸೇವನೆ ಮಾಡ್ತಾರಂತೆ.  ಏಳನೆಯ ಗುಂಪಿನವರ ಬಗ್ಗೆ ಹೇಳೋದಾದ್ರೆ, ಇವರುಗಳು  ಸೋಮವಾರ ಮತ್ತು ಶನಿವಾರ ಬಿಟ್ಟು ಮಿಕ್ಕ  ಎಲ್ಲಾ ದಿನಗಳಲ್ಲೂ ಮಾಂಸಹಾರವನ್ನು ಸೇವನೆ ಮಾಡ್ತಾರಂತೆ. ಕೊನೆಯದಾಗಿ ಎಂಟನೆಯ ಗುಂಪಿನವರ ಬಗ್ಗೆ ಹೇಳೋದಾದ್ರೆ, ಇವರುಗಳು ಹೊರಗಡೆ ನಾನ್ ವೆಜ್ ತಿಂತಾರೆ. ಆದ್ರೆ  ಮನೆಯಲ್ಲಿ ಮಾತ್ರ ತಿನ್ನಲ್ವಂತೆ. ಹೀಗೆ ನಮ್ಮ ದೇಶದಲ್ಲಿ ಎಂಟು ಬಗೆಯ ನಾನ್ ವೆಜಿಟೇರಿಯನ್ಗಳು ಇದ್ದಾರಂತೆ.

ಈ ವಿಡಿಯೋವನ್ನು ಯುಟ್ಯೂಬರ್ ಅಶೋಕ್ (million_mistake_) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಅವರು ಬಹಳ ಸೊಗಸಾಗಿ 8 ಬಗೆಯ ಮಾಂಸಹಾರಿಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

ಐದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ 37 ಸಾವಿರ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼನಾನು ಬರಿ ಚಿಕನ್ ತಿಂತೀನಿ, ಯಾಕಂದ್ರೆ ಪ್ರಾಣಿ ಹಿಂಸೆ ಮಹಾ ಪಾಪ, ಚಿಕನ್ ಪಕ್ಷಿಯಲ್ವಾʼ ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾನು ವಾರದ ಏಳು ದಿನವೂ ನಾನ್ವೆಜ್ ತಿಂತೀನಿ. ಹಬ್ಬದ ದಿನ ಮನೆಯಲ್ಲಿ ವೆಜ್ ಮಾಡಿರ್ತಾರೆ, ಆಗ ಹೊರಗಡೆ ಹೋಗಿ ಬಿರಿಯಾನಿ ತಿಂದು ಬರ್ತೀನಿʼ ಅಂತ ತಮಾಷೆ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಾನು ಯಾವಾಗಲೂ ಯಾರಾದ್ರೂ ನಾನ್ ವೆಜ್ ಊಟಕ್ಕೆ ಕರೀತಾರ ಅಂತ ಕಾಯ್ತಾ ಇರ್ತೀನಿ’ ಅಂತ ಹೇಳಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ