ಈ ಕಾರ್ಟೂನ್ ಸೀರಿಸ್ಗಳೆಂದೆರೆ ಮಕ್ಕಳ ಫೇವರೇಟ್ ಅಂತಾನೇ ಹೇಳಬಹುದು. ಅದರಲ್ಲೂ ಭಾರತೀಯ ಮಕ್ಕಳಿಗೆ ಡೋರೆಮನ್, ಛೋಟಾ ಭೀಮ್ ಕಾರ್ಟೂನ್ ಎಂದರೆ ಬಲು ಇಷ್ಟ. ಅನೇಕ ಮಕ್ಕಳ ನೆಚ್ಚಿನ ಕಾರ್ಟೂನ್ ಡೋರೆಮನ್ ಮೂಲತಃ ಜಪಾನೀಸ್ ಭಾಷೆಯದ್ದು.
ಡೋರೆಮನ್ ಎಂಬುದು ಕಾಲ್ಪನಿಕ ಪಾತ್ರವಾಗಿದ್ದು, ಇದನ್ನು ಬರಹಗಾರ ಫುಜಿಕೊ ಎಫ್.ಫ್ಯೂಜಿಯೊ ರಚಿಸಿದ್ದಾರೆ. ಈ ಕಾರ್ಟೂನ್ ಪಾತ್ರವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಸಾಕಷ್ಟು ಜನಪ್ರಿಯವಾಗಿದೆ. ಈ ಡೋರೆಮನ್ ಸೀರಿಸ್ ಅನ್ನು ಬಾಲ್ಯದಲ್ಲಿ ನೋಡದವರಿಲ್ಲ. ಈ ನಿಮ್ಮ ನೆಚ್ಚಿನ ಕಾರ್ಟೂನ್ ಪಾತ್ರಕ್ಕೆ ಧ್ವನಿಯನ್ನು ನೀಡಿದವರು ಯಾರು ಎಂದು ನಿಮಗೆ ತಿಳಿದಿದೆಯೇ?
ಇವರು ಸುಮಾರು 14 ವರ್ಷಗಳ ಕಾಲ ಭಾರತದಲ್ಲಿ ಡೋರೆಮನ್ ಪಾತ್ರಕ್ಕೆ ಧ್ವನಿ ನೀಡಿದ್ದರು. ಡೋರೆಮನ್ ಗೆ ಧ್ವನಿ ನೀಡುವ ಅವಕಾಶ ಸಿಕ್ಕಾಗ ತನಗೆ 14 ವರ್ಷ ವಯಸ್ಸಾಗಿತ್ತು ಎಂದು ಸೋನಲ್ ಮಾಧ್ಯಮವೊಂದಕ್ಕೆ ತಿಳಿಸಿದ್ದರು. 6 ವರ್ಷ ವಯಸ್ಸಿನಲ್ಲೇ ಆಲ್ ಇಂಡಿಯಾ ರೇಡಿಯೋದಲ್ಲಿ ಧ್ವನಿ ಕಲಾವಿದೆಯಾಗಿ ಕೆಲಸ ಮಾಡಲು ಪ್ರಾರಂಭಿಸಿದ ಸೋನಾಲ್ ಛೋಟಾ ಭೀಮ್, ಮೈಟಿ ರಾಜು ಮತ್ತು ಪವರ್ ಪಫ್ ಗರ್ಲ್ಸ್ ನಂತಹ ಪ್ರಸಿದ್ಧ ಅನಿಮೇಷನ್ ಕಾರ್ಟೂನ್ ಪಾತ್ರಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ.
ಇದೀಗ ಸೋನಲ್ ಕೌಶಲ್ ಕಾರ್ಟೂನ್ ಧ್ವನಿಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದ್ದು, ವಿಡಿಯೋದಲ್ಲಿ ಅವರು 60 ಸೆಕೆಂಡ್ ಗಳಲ್ಲಿ 10 ಆನಿಮೇಟೆಡ್ ಕಾರ್ಟೂನ್ ಗಳ ಧ್ವನಿಯನ್ನು ಅನುಕರಿಸುತ್ತಿರುವ ದೃಶ್ಯವನ್ನು ಕಾಣಬಹುದು. ಈ ವಿಡಿಯೋ ತುಣುಕನ್ನು @kadak_mandi_pa ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, “ಇವರೇ ನೋಡಿ ಎಲ್ಲರ ಅಚ್ಚು ಮೆಚ್ಚಿನ ಚಿಂಟು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಸೋನಲ್ 60 ಸೆಕೆಂಡುಗಳಲ್ಲಿ ಛೋಟಾ ಭೀಮ್, ಟೀಟೂ, ಮ್ಯಾಂಡಿ, ಪಿಕಾಚು, ಡೋರೆಮನ್ ಸೇರಿದಂತೆ 10 ಕಾರ್ಟೂನ್ ಪಾತ್ರಗಳ ಧ್ವನಿಯನ್ನು ಅನನುಕರಿಸುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ‘ಮಗಳ ಗೆಲುವಿಗೆ ಅಪ್ಪನೇ ಮುನ್ನುಡಿ’; ಭಾವುಕ ವಿಡಿಯೋ ಇಲ್ಲಿದೆ ನೋಡಿ
ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಒಂದುವರೆ ಲಕ್ಷಕ್ಕೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼತುಂಬಾ ಅದ್ಭುತ ಪ್ರತಿಭೆʼ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಬಹಳ ಸುಂದರವಾದ ಧ್ವನಿ ಇವರದ್ದುʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ನಿಜವಾಗಿಯೂ ಇವರ ಧ್ವನಿ ತುಂಬಾ ಮುದ್ದಾಗಿದೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ