Optical Illusion: ಒತ್ತಡದ ಮಧ್ಯೆ ತಲೆ ಓಡ್ತಿಲ್ವಾ? ಸ್ವಲ್ಪ ಈ ಚಿತ್ರ ನೋಡಿ

| Updated By: ಶ್ರೀದೇವಿ ಕಳಸದ

Updated on: Aug 17, 2022 | 4:52 PM

Activity : ಈ ಚಿತ್ರದಲ್ಲಿ ನಿಮಗೇನೇನು ಕಾಣುತ್ತಿದೆ? ಕೆಲಸದ ಮಧ್ಯೆ ಬ್ರೇಕ್​ ತಗೊಂಡು ಸ್ವಲ್ಪ ಇತ್ತಕಡೆ ಸ್ವಲ್ಪ ಗಮನಕೊಡಿ.

Optical Illusion: ಒತ್ತಡದ ಮಧ್ಯೆ ತಲೆ ಓಡ್ತಿಲ್ವಾ? ಸ್ವಲ್ಪ ಈ ಚಿತ್ರ ನೋಡಿ
ಅಅಅ
Follow us on

Optical Illusions : ದಿನಾ ಅದೇ ಕೆಲಸ ಅದೇ ಆಫೀಸು ಅದೇ ಮನೆ. ಈ ಏಕತಾನತೆ ನಿಮ್ಮನ್ನು ಬೇಸರಕ್ಕೆ ತಳ್ಳಿದೆಯೇ? ಇದರಿಂದ ನಿಮ್ಮನ್ನು ಹಗುರಗೊಳಿಸಲು ಇಲ್ಲಿರುವ ಈ ಆಫ್ಟಿಕಲ್​ ಇಲ್ಲ್ಯೂಷನ್ ಟೆಸ್ಟ್​ ಪ್ರಯತ್ನಿಸಿ. ನಿಮ್ಮ ಗ್ರಹಿಕೆ, ಕೌಶಲ ಮತ್ತು ಗಮನವನ್ನು ಪರೀಕ್ಷಿಸಿಕೊಳ್ಳಲು ಇದೊಂದು ಸಣ್ಣ ಕಸರತ್ತು. ಇಡೀ ಜಗತ್ತು ಇಂದು ಭ್ರಮೆಯಿಂದ ಕೂಡಿರುವಾಗ ಇಂತಹ ಸಣ್ಣ ಸಣ್ಣ ಆಟಗಳು ನಿಮ್ಮನ್ನು ಔಟ್ ಆಫ್​ ದಿ ಬಾಕ್ಸ್​ ಯೋಚಿಸಲು ಸಹಾಯ ಮಾಡುತ್ತವೆ. ದಿನಕ್ಕೊಂದಾದರೂ ಇಂಥ ಚಿತ್ರವನ್ನು ಗಮನಿಸಿ. ನಿಮ್ಮ ಮೆದುಳನ್ನು ಚುರುಕುಗೊಳಿಸಿಕೊಳ್ಳಿ.

ಜಾಹೀರಾತಿನಿಂದ ತುಂಬಿತುಳುಕುತ್ತಿರುವ ಈ ಪ್ರಪಂಚದಲ್ಲಿ ಮಾರಾಟಗಾರರು, ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಒದಗಿಸುವುದಕ್ಕಾಗಿ ಇಂತ ಆಪ್ಟಿಕಲ್​ ಇಲ್ಲ್ಯೂಷನ್​ ತಂತ್ರಗಳನ್ನು ಬಳಸುವುದು ಸರ್ವೇ ಸಾಮಾನ್ಯ. ಆದರೆ ಈ ತಂತ್ರವನ್ನು ಸಕಾರಾತ್ಮಕವಾಗಿ ಅಳವಡಿಸಿಕೊಂಡರೆ ಮನಸ್ಸು ಫ್ರೆಷ್ ಆಗುವುದು ಖಂಡಿತ.

ಇಲ್ಲಿ ಒಂದು ಆಪ್ಟಿಕಲ್​ ಇಲ್ಲ್ಯೂಷನ್​ಗೆ ಒಳಗುಮಾಡುವ ಚಿತ್ರವಿದೆ. ಇಲ್ಲಿ ಎರಡು ಪ್ರಾಣಿಗಳು ಇರುವ ಚಿತ್ರವಿದೆ. ಆ ಪ್ರಾಣಿಗಳು ಯಾವುವೆಂದು ಗುರುತಿಸಬಲ್ಲಿರಾ?

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಆನೆಯನ್ನು ಸುಲಭವಾಗಿ ಗುರುತಿಸಿಬಿಡುತ್ತೀರಿ. ಅದು ಬಹಳ ಸ್ಪಷ್ಟವಾಗಿದೆ. ಆದರೆ ಇನ್ನೊಂದು ಪ್ರಾಣಿ? ಅದು ಹಂಸ. ತುಸು ಕಷ್ಟಕರವೇ. ಅಚ್ಚರಿಯಾಗುತ್ತಿದೆಯಾ? ನೀವೀಗ ಮೆಲ್ಲಗೆ ನಿಮ್ಮ ಲ್ಯಾಪ್​ಟಾಪ್​ ಅಥವಾ ಮೊಬೈಲ್​ ಅನ್ನು ತಲೆಕೆಳಗಾಗಿಸಿ ಈ ಚಿತ್ರವನ್ನು ಗಮನಿಸಿ. ಏನು ಕಾಣುತ್ತಿದೆ? ಗರಿಬಿಚ್ಚಿದ ಸುಂದರವಾದ ಹಂಸ ತಾನೆ?

ನೀವು ದೈನಂದಿನ ಕೆಲಸಗಳಿಂದ ಒತ್ತಡಕ್ಕೆ ಬಿದ್ದಾಗೆಲ್ಲ ಇಂಥ ಚಿತ್ರಗಳನ್ನು ಗಮನಿಸಿ. ಇದರಿಂದಾಗಿ ನಮ್ಮ ಮೆದುಳು ವಿಭಿನ್ನ ರೀತಿಯಲ್ಲಿ ತನ್ನ ಗ್ರಹಣ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ.

ಮತ್ತಷ್ಟು ವೈರಲ್ ಸುದ್ದಿಗಾಗಿ ಕ್ಲಿಕ್ ಮಾಡಿ