
Deer: ಟಕ್ ಟಕ್ ಟಕ್, ಹೇಯ್ ಫ್ರೆಂಡ್ (Friend) ಬಾಗಿಲು ತೆಗೀ ಬೇಗ… ಬಾಗಿಲಿನಾಚೆ ಜಿಂಕೆ ನಿಂತಿರುವುದು ನಾಯಿಗೆ ಕಾಣುತ್ತದೆ. ಹನ್ನೊಂದು ವರ್ಷದ ಗೆಳತಿ ಇಂದು ತನ್ನ ಮನೆಯ ಬಾಗಿಲಿನಾಚೆ ನಿಂತಿದ್ದಾಳೆ. ಎಷ್ಟೋ ದಿನಗಳ ನಂತರ ಈಕೆ ಮನೆಗೆ ಬಂದಿದ್ದಾಳೆ. ಏನಿರಬಹುದು ವಿಶೇಷ ಎಂಬ ಕುತೂಹಲದಲ್ಲಿಯೇ ನಾಯಿ ಹೊರಹೋಗುತ್ತದೆ. ನೋಡಿದರೆ ಜಿಂಕೆಯ ಪುಟಾಣಿಗಳು! ಜಿಂಕೆ ತನ್ನ ಬೆಸ್ಟ್ ಫ್ರೆಂಡ್ಗೆ ತನ್ನ ಮಕ್ಕಳನ್ನು ಭೇಟಿ ಮಾಡಿಸಲು ಕರೆತಂದಿದ್ದಾಳೆ. ನಾಯಿ ಆಕೆಯ ಮಕ್ಕಳನ್ನು ತನ್ನವೇ ಮಕ್ಕಳೆಂಬಂತೆ ನೆಕ್ಕಿ ಮುದ್ದಿಸಿ ಅಚ್ಛಾ ಮಾಡುತ್ತದೆ. ಈ ವಿಡಿಯೋ ಅನೇಕ ನೆಟ್ಟಿಗರ ಮನಸೂರೆಗೊಂಡಿದೆ!
ಇದನ್ನೂ ಓದಿ : Viral Video: ಹಣೆಯ ಮೇಲೆ ಇನಿಯನ ಹೆಸರಿನ ಹಚ್ಚೆ; ಇದು ಅಸಲಿಯೋ ನಕಲಿಯೋ ಎಂದ ನೆಟ್ಮಂದಿ
ನಿನ್ನೆಯಷ್ಟೇ X ನಲ್ಲಿ ಹಂಚಿಕೊಂಡ ಈ ವಿಡಿಯೋವನ್ನು ಈತನಕ 6.7 ಲಕ್ಷ ಜನರು ನೋಡಿದ್ದಾರೆ. ಸುಮಾರು 2,000 ಜನರು ರೀಪೋಸ್ಟ್ ಮಾಡಿದ್ದಾರೆ. 16,000 ಜನರು ಲೈಕ್ ಮಾಡಿದ್ದು ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಇದು ಬಹಳ ಮುದ್ದಾದ ವಿಡಿಯೋ, ಅನೇಕ ಸಲ ನೋಡುತ್ತಲೇ ಇರುವೆ ಎಂದಿದ್ದಾರೆ ಹಲವಾರು ಜನರು.
ನಿಜಕ್ಕೂ ಮನುಷ್ಯರೂ ಈ ವಿಡಿಯೋ ನೋಡಿ ನಾಚಬೇಕು ಎಂದಿದ್ದಾರೆ ಒಬ್ಬರು. ಭಾಷೆ, ನೀರು, ನೆಲ, ಬಣ್ಣ, ಮೇಲು ಕೀಳು, ಜಾತಿ, ಧರ್ಮ ಎಂದು ಕಿತ್ತಾಡುಕೊಳ್ಳುವ ಮನುಷ್ಯರು ಈ ವಿಡಿಯೋ ನೋಡಿ ನಾಚಿಕೆ ಪಡಬೇಕು ಎಂದಿದ್ದಾರೆ ಇನ್ನೊಬ್ಬರು. ಪ್ರಾಣಿಗಳ ಜಗತ್ತಿನಲ್ಲಿಯೂ ಸೌಹಾರ್ದತೆ ಇದೆ, ಆದರೆ ಮನುಷ್ಯ ಜಗತ್ತಿನಲ್ಲಿ? ಎಂದಿದ್ದಾರೆ ಮತ್ತೊಬ್ಬರು. ಅನ್ಯವರ್ಗದ ಪ್ರಾಣಿಗಳ ನಡುವೆ ಇರುವ ಸ್ನೇಹ ರಕ್ತಸಂಬಂಧವುಳ್ಳ ಮನುಷ್ಯರಲ್ಲಿಯೇ ಇಲ್ಲವಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಮಗದೊಬ್ಬರು.
ಇದನ್ನೂ ಓದಿ : Viral: ಮುಂಬೈ; ಕಳೆದುಕೊಂಡ ‘ಶಾಂತಿ’ ಹುಡುಕಲು ಪೊಲೀಸರ ಬಳಿ ಹೋಗುತ್ತಿದ್ದೇನೆ ಎಂದ ಮಹಿಳೆ; ಪೊಲೀಸರ ಉತ್ತರ ಇಲ್ಲಿದೆ
ಒಟ್ಟಿನಲ್ಲಿ ನೆಟ್ಟಿಗರ ಮನಸ್ಸನ್ನು ಈ ವಿಡಿಯೋ ಆರ್ದ್ರವಾಗಿಸಿದೆ. ಇಂಥ ಪ್ರಾಣಿಗಳೊಂದಿಗೆ ನಾನು ಬದುಕಲು ಇಷ್ಪಟಡುತ್ತೇನೆ ಎಂದಿದ್ದಾರೆ ಹಲವಾರು ಜನರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:22 pm, Tue, 7 November 23