350 ಜನರನ್ನು ಆಹ್ವಾನಿಸಿ ನಾಯಿಯ ಹುಟ್ಟುಹಬ್ಬ ಮಾಡಿದ ಧನಬಾದ್​ನ ದಂಪತಿ

| Updated By: ಶ್ರೀದೇವಿ ಕಳಸದ

Updated on: Dec 03, 2022 | 8:59 AM

Viral Video : ಈ ನಾಯಿಯ ಹುಟ್ಟುಹಬ್ಬಕ್ಕೆ ಆಮಂತ್ರಣ ಪತ್ರಿಕೆ ಮುದ್ರಿಸಲಾಯಿತು. ರೂ. 4,500 ವೆಚ್ಚದಲ್ಲಿ ಸೂಟ್​ ಖರೀದಿಸಲಾಯಿತು. ಬಂಧುಗಳು ಚಿನ್ನದ ಲಾಕೆಟ್​ ಉಡುಗೊರೆ ಕೊಟ್ಟರು.

350 ಜನರನ್ನು ಆಹ್ವಾನಿಸಿ ನಾಯಿಯ ಹುಟ್ಟುಹಬ್ಬ ಮಾಡಿದ ಧನಬಾದ್​ನ ದಂಪತಿ
ಧನಬಾದ್​ನಲ್ಲಿ ನಾಯಿಯ ಹುಟ್ಟುಹಬ್ಬ ಆಚರಿಸುತ್ತಿರುವುದು
Follow us on

Viral Video : ಈಗೀಗ ಸಾಕುಪ್ರಾಣಿಗಳೆಂದರೆ ಸ್ವಂತ ಮಕ್ಕಳಂತೆಯೇ ನೋಡಿಕೊಳ್ಳುತ್ತಿರುವವರ ಟ್ರೆಂಡ್ ಜಾಸ್ತಿಯಾಗುತ್ತಿದೆ. ಇದು ಪೋಷಣೆಗೆ ಮಾತ್ರ ಸೀಮಿತವಾಗದೆ ಸಂಭ್ರಮ, ಆಚರಣೆಗೂ ವಿಸ್ತರಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಾಕುಪ್ರಾಣಿಗಳಿಗೆಂದೇ ಪ್ರತ್ಯೇಕ ಅಕೌಂಟ್​ ಮಾಡಿ ಅವುಗಳ ಜೀವನಶೈಲಿಯ ಬಗ್ಗೆ ಅಪ್​ಡೇಟ್​ ಮಾಡುವಲ್ಲಿ ಜನ ನಿರತರಾಗಿರುತ್ತಾರೆ. ಇತ್ತೀಚೆಗೆ ಗುರಗ್ರಾಂನಲ್ಲಿ ನಾಯಿಗಳ ಮದುವೆ ಮಾಡಿದ ವಿಡಿಯೋ ವೈರಲ್ ಆಗಿದ್ದನ್ನು ನೋಡಿದ್ದಿರಿ. ಇದೀಗ ಈ ದಂಪತಿ ತಮ್ಮ ಸಾಕುನಾಯಿಯ ಹುಟ್ಟುಹಬ್ಬಕ್ಕೆ 350 ಜನರನ್ನು ಆಹ್ವಾನಿಸಿ ದೊಡ್ಡದಾದ ಕೇಕ್ ಕಟ್​ ಮಾಡಿ ಸಂಭ್ರಮಿಸಿದ್ದಾರೆ.

ಲೋಯಾಬಾದ್​ನಲ್ಲಿ ವಾಸವಾಗಿರುವ ಈ ಕುಟುಂಬಕ್ಕೆ ಸಾಕುನಾಯಿ ಅಕ್ಸರ್ ಎಂದರೆ ಪ್ರಾಣ. ಇದರ ಹುಟ್ಟುಹಬ್ಬವನ್ನು ವೈಭದಿಂದ ಆಚರಿಸಬೇಕೆಂದು ಇವರು ಯೋಚಿಸಿ ಹುಟ್ಟುಹಬ್ಬಕ್ಕಾಗಿ ಆಮಂತ್ರಣ ಪತ್ರಿಕೆಯನ್ನೂ ಪ್ರಿಂಟ್ ಮಾಡಿಸಿದರು. ರೂ. 4,500 ಕೊಟ್ಟು ನಾಯಿಗೆ ಸೂಟ್​ ಅನ್ನೂ ಖರೀದಿಸಿದರು. ದೊಡ್ಡದಾದ ಕೇಕ್ ಮತ್ತು 350 ಅತಿಥಿಗಳೊಂದಿಗೆ ಅಕ್ಸರ್​ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.

ಬಂಗಾಳದ ಶ್ರೀಪುರದಿಂದ ಬಂಧು ಬಳಗದವರು ಆಗಮನಿಸಿದ್ದರು. ನಾಯಿಗೆ ಚಿನ್ನದ ಪದಕವನ್ನು ಉಡುಗೊರೆಯಾಗಿ ಕೊಟ್ಟರು. ಬಂದವರೆಲ್ಲ ಒಂದಿಲ್ಲಾ ಒಂದು ಉಡುಗೊರೆ ನೀಡಿ ಸಂತೋಷಪಟ್ಟರು.

ಇದನ್ನೂ ಓದಿ  : ನಾಯಿಯ ಹುಟ್ಟುಹಬ್ಬ ಆಚರಿಸಿದ ಮಕ್ಕಳು; ವೈರಲ್ ವಿಡಿಯೋ

ಈ ನಾಯಿಯ ಪೋಷಕರು ಸುಮಿತ್ರಾ ಕುಮಾರಿ ಮತ್ತು ಸಂದೀಪ್​ ಕುಮಾರಿ. ಇವು ನಾಯಿಯನ್ನು ಮಗುವಿನಂತೆಯೇ ಪ್ರೀತಿಸುತ್ತಾರೆ. ಅದರೊಂದಿಗೆ ಊಟ ಮಾಡುತ್ತಾರೆ ಮತ್ತು ಮಲಗುತ್ತಾರೆ ಕೂಡ. ‘ನಾನು ಪಂಜಾಬ್​ನಲ್ಲಿ ವಾಸವಾಗಿದ್ದಾಗ ಅಲ್ಲಿಯ ಜನರು ನಾಯಿಗಳನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುದನ್ನು ಸ್ವತಃ ಗಮನಿಸುತ್ತಿದ್ದೆ. ಅವರು ನಡೆಸಿಕೊಳ್ಳುವ ರೀತಿ ಬೇಸರ ತರಿಸುವಂತಿತ್ತು. ಈ ಊರಿಗೆ ಬಂದ ಮೇಲೆ ಬೀದಿಬದಿಯಲ್ಲಿದ್ದ 20 ದಿನದ ನಾಯಿಮರಿಯನ್ನು ತಂದು ಸಾಕಿದೆವು. ಈಗ ಇದರ ಹುಟ್ಟುಹಬ್ಬವನ್ನು ಆಚರಿಸಿ ಖುಷಿಪಟ್ಟೆವು ಎಂದಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 8:59 am, Sat, 3 December 22