ನಾಯಿಯ ನಿಯತ್ತು ಎಂಬ ಮಾತಿಗೆ ಸಾಕ್ಷಿ ಈ ವಿಡಿಯೋ; ಮುದ್ದಾದ ಶ್ವಾನ ತನ್ನ ಮನೆ ಮಕ್ಕಳ ಕಡೆಗೆ ತೋರಿಸುವ ಕಾಳಜಿ ಹೇಗಿದೆ ನೋಡಿ

ನಾಯಿಯೊಂದು ಮನೆಯಲ್ಲಿ ಎಲ್ಲರೂ ಮಲಗಿದ ಮೇಲೂ ಎಷ್ಟು ಕಾಳಜಿ ವ್ಯಕ್ತಪಡಿಸುತ್ತದೆ ಎನ್ನುವುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯ ನಾಯಿಯ ನಿಯತ್ತು ಎಂಬ ಮಾತಿಗೆ ಸಾಕ್ಷಿಯಂತಿದ್ದು, ಮಲಗಿದ ಮಕ್ಕಳ ಬಳಿ ಬಂದು ಅದು ಕಾಳಜಿ ತೋರಿಸುವುದು ಎಲ್ಲರ ಹೃದಯ ಗೆದ್ದಿದೆ.

ನಾಯಿಯ ನಿಯತ್ತು ಎಂಬ ಮಾತಿಗೆ ಸಾಕ್ಷಿ ಈ ವಿಡಿಯೋ; ಮುದ್ದಾದ ಶ್ವಾನ ತನ್ನ ಮನೆ ಮಕ್ಕಳ ಕಡೆಗೆ ತೋರಿಸುವ ಕಾಳಜಿ ಹೇಗಿದೆ ನೋಡಿ
ವೈರಲ್​ ವಿಡಿಯೋದ ಒಂದು ದೃಶ್ಯ
Edited By:

Updated on: Sep 11, 2021 | 8:37 AM

ಮನುಷ್ಯ ಹಾಗೂ ನಾಯಿ ನಡುವಿನ ಒಡನಾಟಕ್ಕೆ ಒಂದು ಇತಿಹಾಸವೇ ಇದೆ. ನಾಗರೀಕತೆ ಹಂಹಂತವಾಗಿ ಬೆಳೆಯುತ್ತಾ ಬಂದಂತೆ ಮನುಷ್ಯನೊಂದಿಗೆ ನಾಯಿಗಳ ಒಡನಾಟವೂ ಬಲಗೊಂಡಿದೆ. ಮೊದಮೊದಲು ಕಾವಲಿಗಾಗಿ, ರಕ್ಷಣೆಗಾಗಿ ಎಂದು ಸಾಕುತ್ತಿದ್ದ ನಾಯಿಗಳಿಗೀಗ ಮನೆಯೊಳಗೆ, ಹಾಸಿಗೆಯ ಮೇಲೂ ಜಾಗ ಸಿಗುತ್ತಿದೆ. ಈಗ ನಾಯಿಗಳು ಒಂಟಿತನವನ್ನು ನೀಗಿಸುವ, ಕುಟುಂಬ ಸದಸ್ಯರ ಖಾಲಿ ಜಾಗವನ್ನು ತುಂಬುವ ಸಹಜೀವಿಗಳಾಗಿ ಬದಲಾಗಿವೆ.

ನಾಯಿಗಳು ಮನುಷ್ಯರೊಟ್ಟಿಗೆ ಹೇಗೆ ಬೆರೆಯುತ್ತವೆ, ಎಷ್ಟು ಸಲೀಸಾಗಿ ಆಪ್ತತೆ ಬೆಳೆಸಿಕೊಳ್ಳುತ್ತವೆ ಎನ್ನುವುದನ್ನು ನೋಡಲು ಸಾಮಾಜಿಕ ಜಾಲತಾಣಗಳನ್ನು ಒಮ್ಮೆ ಜಾಲಾಡಿದರೂ ರಾಶಿ ರಾಶಿ ವಿಡಿಯೋಗಳು ಸಿಗುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಇಂತಹ ಸಂಗತಿಗಳು ಮನಸ್ಸನ್ನು ಹಗುರಾಗಿಸಲು ಅತ್ಯುತ್ತಮ ಔಷಧಿ ಎಂದರೂ ತಪ್ಪಾಗಲಾರದು. ತಲೆಯೊಳಗೆ ಎಷ್ಟೇ ಚಿಂತೆ ಇದ್ದರೂ ಆ ವಿಡಿಯೋಗಳನ್ನು ನೋಡುತ್ತಾ ಹಗುರಾಗಿ ಕಳೆದುಹೋಗಬಹುದು. ಕೊರೊನಾದಿಂದಾಗಿ ಎಲ್ಲರೂ ಮನೆಯಲ್ಲೇ ಕೂತು ಕೆಲಸ ಮಾಡುವಂತಾದ ಮೇಲಂತೂ ಇಂಥಾ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ವೇಗವಾಗಿ ಹರಿದಾಡುತ್ತಿವೆ. ಇಲ್ಲೀಗ ತೋರಿಸಲು ಹೊರಟ ವೈರಲ್​ ವಿಡಿಯೋ ಕೂಡಾ ಅಷ್ಟೇ ಖುಷಿ ಕೊಡುವಂತಿದೆ.

ನಾಯಿಯೊಂದು ಮನೆಯಲ್ಲಿ ಎಲ್ಲರೂ ಮಲಗಿದ ಮೇಲೂ ಎಷ್ಟು ಕಾಳಜಿ ವ್ಯಕ್ತಪಡಿಸುತ್ತದೆ ಎನ್ನುವುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ. ಕೆಲ್​ ರಾಟೆಟ್​ ಎನ್ನುವವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಮುದ್ದು ಮುದ್ದಾದ ಶ್ವಾನವೊಂದು ರಾತ್ರಿ ವೇಳೆ ಮನೆಯ ಸದಸ್ಯರು ನಿದ್ರಿಸುವಾಗ ಮಕ್ಕಳ ಬಳಿ ಬಂದು ಅವರು ಸುರಕ್ಷಿತವಾಗಿ ಮಲಗಿದ್ದಾರಾ ಎಂದು ಪರಿಶೀಲಿಸುವ ದೃಶ್ಯ ಕಂಡುಬಂದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯ ನಾಯಿಯ ನಿಯತ್ತು ಎಂಬ ಮಾತಿಗೆ ಸಾಕ್ಷಿಯಂತಿದ್ದು, ಮಲಗಿದ ಮಕ್ಕಳ ಬಳಿ ಬಂದು ಅದು ಕಾಳಜಿ ತೋರಿಸುವುದು ಎಲ್ಲರ ಹೃದಯ ಗೆದ್ದಿದೆ.

ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಎಲ್ಲರೂ ನಾಯಿಯ ಪ್ರೀತಿ, ಕಾಳಜಿಯನ್ನು ಕೊಂಡಾಡಿದ್ದಾರೆ. ನಾವು ಅವುಗಳಿಗೆ ಒಂದು ತುತ್ತು ಊಟ ಹಾಕಿದರೆ ಅದಕ್ಕಿಂತ ಸಾವಿರ ಪಟ್ಟು ಪ್ರೀತಿಯನ್ನು ಹಿಂದಿರುಗಿಸುತ್ತವೆ. ಮನುಷ್ಯ ಮನುಷ್ಯರ ನಡುವಿನ ಸಂಬಂಧಕ್ಕಿಂತಲೂ ಮಿಗಿಲಾದದ್ದು ನಾಯಿ ಹಾಗೂ ಮನುಷ್ಯರ ನಡುವಿನ ಒಡನಾಟ. ಆದರೂ ಕೆಲವರು ಅವುಗಳ ಮುಗ್ಧತೆಯನ್ನು ಕಡೆಗಣಿಸಿ ಹಿಂಸೆ ನೀಡುತ್ತಾರೆ. ಅಂತಹವರಿಗೆ ಈ ವಿಡಿಯೋ ತೋರಿಸಬೇಕು ಎಂಬೆಲ್ಲ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:
ಒಸಾಮಾನನ್ನು ಮನೆಹೊಕ್ಕು ಕೊಂದಿದ್ದ ಅಮೇರಿಕನ್ನರು ಕ್ಷುದ್ರ ತಾಲಿಬಾನಿಗಳಿಗೆ ಹೆದರಿ ತಮ್ಮ ನಾಯಿಗಳನ್ನು ಬಿಟ್ಟು ಓಡಿಹೋದರು! 

Shocking Video: 7 ಮರಿಗಳ ಜೊತೆ ನಾಯಿಗೆ ಬೆಂಕಿ ಹಚ್ಚಿ ಸುಟ್ಟ ಮಹಿಳೆಯರು; ಅಮಾನವೀಯ ವಿಡಿಯೋ ಇಲ್ಲಿದೆ

(Dog Check its baby humans at bedtime adorable video gone viral)