ಶಾರ್ಕ್​ ದೇಹ, ಹಂದಿ ಮುಖ; ಸಮುದ್ರದಲ್ಲಿ ಸಿಕ್ಕ ಈ ಮೀನಿನ ಫೋಟೋಗೆ ಈಗ ಡಿಮ್ಯಾಂಡಪ್ಪೋ ಡಿಮ್ಯಾಂಡ್

ಇದನ್ನು ಹಂದಿ ಮುಖದ ಶಾರ್ಕ್​ (pig-faced shark) ಎಂದೂ ಕರೆಯಲಾಗುತ್ತದೆ. ಆದರೆ, ಇದು ತೀರಾ ಎಂದರೆ ತೀರಾ ಅಪರೂಪದ್ದಾಗಿದ್ದು ವಿರಳವಾಗಿ ಕಾಣಿಸಿಕೊಳ್ಳುವುದರಿಂದ ನಾವಿಕರು ಇದು ಯಾವುದೋ ಜೈವಿಕ ಸಮಸ್ಯೆಯಿಂದ ಹೀಗೆ ಆಕಾರ ಪಡೆದಿರಬೇಕು ಎಂದು ಭಾವಿಸಿದ್ದರು.

ಶಾರ್ಕ್​ ದೇಹ, ಹಂದಿ ಮುಖ; ಸಮುದ್ರದಲ್ಲಿ ಸಿಕ್ಕ ಈ ಮೀನಿನ ಫೋಟೋಗೆ ಈಗ ಡಿಮ್ಯಾಂಡಪ್ಪೋ ಡಿಮ್ಯಾಂಡ್
ವೈರಲ್​ ಆದ ಅಪರೂಪದ ಬಗೆಯ ಮೀನು
Follow us
TV9 Web
| Updated By: Skanda

Updated on: Sep 11, 2021 | 3:27 PM

ಈ ಜಗತ್ತಿನಲ್ಲಿ ಅಚ್ಚರಿಗಳಿಗೆ ಪೂರ್ಣ ವಿರಾಮ ಎನ್ನುವುದು ಇಲ್ಲವೇ ಇಲ್ಲ. ಪ್ರತಿನಿತ್ಯ ಒಂದಲ್ಲಾ ಒಂದು ಹೊಸ ವಿಚಾರಗಳಿಗೆ ಸಾಕ್ಷಿಯಾಗುವ ನಾವು ಎಲ್ಲವನ್ನೂ ಬೆರಗುಗಣ್ಣಿನಿಂದ ನೋಡುತ್ತಾ ಉದ್ಗರಿಸುತ್ತಲೇ ಇರುತ್ತೇವೆ. ಈಗ ಬಹುತೇಕ ಎಲ್ಲರ ಕೈಯ್ಯಲ್ಲೂ, ಎಲ್ಲೆಡೆಯೂ ಸ್ಮಾರ್ಟ್​ಫೋನ್​, ಸಾಮಾಜಿಕ ಜಾಲತಾಣಗಳು ಇರುವುದರಿಂದ ಹಿಂದೆಂದಿಗಿಂತಲೂ ಬಲುಬೇಗನೆ ಅಚ್ಚರಿಯ ವಿಚಾರಗಳು ಎಲ್ಲೆಡೆ ಹರಡಿಕೊಳ್ಳುತ್ತಿವೆ. ಇಂದು ನಾವು ಹೇಳಲು ಹೊರಟಿರುವ ಸಂಗತಿಯೂ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಫೋಟೋ ಕುರಿತಾಗಿದೆ. ಈ ವೈರಲ್​ ಫೋಟೋದಲ್ಲಿರುವುದು ಮೇಲ್ನೋಟಕ್ಕೆ ಮೀನಿಂತೆ ಕಂಡರೆ, ಒಂಚೂರು ಗಮನವಿಟ್ಟು ನೋಡಿದಾಗ ಶಾರ್ಕ್​ನಂತೆಯೂ, ಮತ್ತೊಂಚೂರು ಪರಾಮರ್ಶಿಸಿದಾಗ ಹಂದಿಯಂತೆಯೂ ಕಾಣುತ್ತದೆ.

ಇಟಲಿ ಮೂಲದ ನಾವಿಕರಿಗೆ ಈ ಅಪರೂಪದ ಬಗೆಯ ಮೀನು ಸಿಕ್ಕಿದ್ದು, ಹಂದಿ ಮತ್ತು ಶಾರ್ಕ್​ನ ಸಮ್ಮಿಶ್ರಣದಂತೆ ಕಂಡು ಬಂದ ಮತ್ಸ್ಯವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಡಾರ್ಸೇನಾ ಮೆಡಿಸೀ ಬಳಿ ನೀರಿನ ಮೇಲ್ಭಾಗದಲ್ಲಿ ಈಜುತ್ತಿದ್ದ ಈ ಮೀನು ಬೋಟ್​ನಲ್ಲಿದ್ದವರನ್ನು ಆಕರ್ಷಿಸಿದೆ. ಶಾರ್ಕ್​ ಸ್ವರೂಪದ ದೇಹವನ್ನೂ, ಹಂದಿಯಂತಹ ಮುಖವನ್ನೂ ಹೊಂದಿದ್ದ ಮೀನನ್ನು ಪರಿಶೀಲಿಸುವ ಸಲುವಾಗಿಯೇ ನೀರಿನಿಂದ ಹೊರಗೆ ತೆಗೆದಿದ್ದಾರೆ.

VIRAL PIG SHARK FISH

ವೈರಲ್​ ಆದ ಮೀನಿನ ಫೋಟೋ

ನೀರಿನಿಂದ ಆಚೆ ತೆಗೆದು ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದು ಆಕಸ್ಮಿಕವಾಗಿ ರೂಪುಗೊಂಡ ಮೀನಲ್ಲ ಬದಲಾಗಿ ngular roughshark – Oxynotus centrina ತಳಿಗೆ ಸೇರಿದ್ದು ಎಂಬ ವಿಚಾರ ಹೊರಬಿದ್ದಿದೆ. ಇದನ್ನು ಹಂದಿ ಮುಖದ ಶಾರ್ಕ್​ (pig-faced shark) ಎಂದೂ ಕರೆಯಲಾಗುತ್ತದೆ. ಆದರೆ, ಇದು ತೀರಾ ಎಂದರೆ ತೀರಾ ಅಪರೂಪದ್ದಾಗಿದ್ದು ವಿರಳವಾಗಿ ಕಾಣಿಸಿಕೊಳ್ಳುವುದರಿಂದ ನಾವಿಕರು ಇದು ಯಾವುದೋ ಜೈವಿಕ ಸಮಸ್ಯೆಯಿಂದ ಹೀಗೆ ಆಕಾರ ಪಡೆದಿರಬೇಕು ಎಂದು ಭಾವಿಸಿದ್ದರು.

International Union for the Conservation of Nature (IUCN) ಸಂಸ್ಥೆ ಈ ಮೀನನ್ನು ಅಳಿವಿನಂಚಿನಲ್ಲಿರುವ ಪ್ರಬೇಧ ಎಂದು ಗುರುತಿಸಿದ್ದು, ಒಂದಷ್ಟು ಮಾಹಿತಿ ನೀಡಿದೆ. ಈ ಮೀನಿನ ಬಗ್ಗೆ ಸ್ಥಳೀಯರನ್ನು ಕೇಳಿದಾಗ ಅವರು ಹೇಳುವುದೇನೆಂದರೆ ಇದು ಯಾವಗಲೋ ಒಂದು ಸಂದರ್ಭದಲ್ಲಿ ಮಾತ್ರ ಕಾಣಸಿಗುತ್ತದೆ. ಬೇಕು ಬೇಕೆಂದಾಗಲೆಲ್ಲಾ ಸಿಗುವ ಮೀನಂತೂ ಅಲ್ಲ ಎಂದಿದ್ದಾರೆ. ಕಳೆದ ಆಗಸ್ಟ್​ 19ರಂದೇ ಈ ಮೀನನ್ನು ಹಿಡಿದು ಪರಿಶೀಲಿಸಲಾಗಿತ್ತಾದರೂ ಅದರ ಫೋಟೋಗಳು ಈಗ ವೈರಲ್ ಆಗಿ ಗಮನ ಸೆಳೆಯುತ್ತಿವೆ. ಸಮುದ್ರದಿಂದ ಮೀನನ್ನು ಹಿಡಿದು ದಡಕ್ಕೆ ತಂದಿದ್ದ ನಾವಿಕರಿಗೆ ಇದು ಅತ್ಯಪರೂಪದ ಪ್ರಬೇಧಕ್ಕೆ ಸೇರಿದ ಮೀನು ಎಂಬ ವಿಚಾರ ಗೊತ್ತಾಗುತ್ತಿದ್ದಂತೆಯೇ ಅವರದನ್ನು ಮರಳಿ ಕಡಲಿಗೆ ಬಿಟ್ಟಿದ್ದಾರೆ.

ಇದನ್ನೂ ಓದಿ: ಮೀನುಗಾರರಿಗೆ ಇನ್ಮುಂದೆ ಸಮುದ್ರದಲ್ಲೇ ಸಿಗಲಿದೆ ಸಿಹಿ ನೀರು; ಆಸ್ಟ್ರೇಲಿಯಾದ ತಂತ್ರಜ್ಞಾನ ಭಾರತದಲ್ಲಿ ಮೊದಲ ಬಾರಿಗೆ ಬಳಕೆ 

ಅದೃಷ್ಟ ಅಂದ್ರೆ ಇದಪ್ಪಾ! ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಕೋಟ್ಯಾಧೀಶನಾದ ಮಹಾರಾಷ್ಟ್ರದ ಮೀನುಗಾರ

(Sailors find fish with body of shark and face of pig photos gone viral)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ