Video: ಮದುಮಗನ ಗೆಳೆಯ ಕೊಟ್ಟ ಗಿಫ್ಟ್ ನೋಡಿ ಸುಸ್ತಾದ ಹುಡುಗಿ!
Funny Video: ಮದುವೆ ಮಂಟಪದ ವಿಡಿಯೋಗಳು ವೈರಲ್ ಆಗುವುದು ಹೊಸದೇನಲ್ಲ. ಹಲವು ವಿಡಿಯೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಲೇ ಇರುತ್ತದೆ. ಮದುಮಗ, ಮದುಮಗಳ ನಡವಳಿಕೆ, ಪೇಚಾಟ, ಹಾಸ್ಯ, ಸಿಟ್ಟು ಇದೆಲ್ಲಾ ನೋಡುಗರಿಗೆ ವಿಶೇಷವಾಗಿ, ಕುತೂಹಲಕಾರಿಯಾಗಿ ಕಾಣುತ್ತದೆ.
ಸಾಮಾಜಿಕ ಜಾಲತಾಣವು ಈಗ ಜನರಿಗೆ ಟೈಂ ಪಾಸ್ ಮಾಡಲು, ಬೋರ್ ಆದಾಗ ಬಳಸುವ ಮಾಧ್ಯಮದಂತೆಯೂ ಆಗಿದೆ. ಅಂದರೆ, ಅಲ್ಲಿ ಜನರು ಒಂದಾದ ನಂತರ ಒಂದರಂತೆ ಹಲವು ವಿಡಿಯೋಗಳನ್ನು ನೋಡುತ್ತಾ, ಹಂಚಿಕೊಳ್ಳುತ್ತಾ ಇರುತ್ತಾರೆ. ಫನ್ನಿ ವಿಡಿಯೋಗಳು, ವೈರಲ್ ವಿಡಿಯೋಗಳು ದಿನನಿತ್ಯ ನೂರಾರು ಕಾಣಸಿಗುತ್ತದೆ. ಅಷ್ಟೇ ಅಲ್ಲ. ಜನರು ವಿಡಿಯೋ ಹಂಚಿಕೊಳ್ಳುವ ಜತೆಗೆ ವಿಡಿಯೋ ಮಾಡುವ ಅಭ್ಯಾಸವನ್ನು ಕೂಡ ಹೆಚ್ಚು ಮಾಡಿಕೊಂಡಿದ್ದಾರೆ. ಎಲ್ಲಾ ವಿಚಾರವನ್ನೂ ಜನರು ವಿಡಿಯೋ ಮಾಡಿ ಇಟ್ಟುಕೊಳ್ಳುವ ಗೋಜಿಗೆ ಜನ ಹೋಗುತ್ತಾರೆ.
ಇಲ್ಲಿ ಅಂತಹ ಒಂದು ವಿಡಿಯೋ ವೈರಲ್ ಆಗಿದೆ. ಮದುವೆ ವೇದಿಕೆ ಜನರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದೆ. ಮದುವೆ ಮಂಟಪದ ವಿಡಿಯೋಗಳು ವೈರಲ್ ಆಗುವುದು ಹೊಸದೇನಲ್ಲ. ಹಲವು ವಿಡಿಯೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಲೇ ಇರುತ್ತದೆ. ಮದುಮಗ, ಮದುಮಗಳ ನಡವಳಿಕೆ, ಪೇಚಾಟ, ಹಾಸ್ಯ, ಸಿಟ್ಟು ಇದೆಲ್ಲಾ ನೋಡುಗರಿಗೆ ವಿಶೇಷವಾಗಿ, ಕುತೂಹಲಕಾರಿಯಾಗಿ ಕಾಣುತ್ತದೆ.
ಮದುವೆಯಲ್ಲಿ ಗೆಳೆಯರು ಹೇಗೆ ವರ್ತಿಸುತ್ತಾರೆ ಎಂದು ಬಹುತೇಕ ಎಲ್ಲರಿಗೂ ಗೊತ್ತಿರಬಹುದು. ಪರಸ್ಪರ ಕಾಲೆಳೆಯುವುದು, ಕೀಟಲೆ ಕೊಡುವುದು ಇದ್ದೇ ಇರುತ್ತದೆ. ಅಂತಹ ಘಟನೆ ಇಲ್ಲಿ ಕೂಡ ನಡೆದಿದೆ. ಮದುವೆ ಹುಡುಗನ ಗೆಳೆಯನ ಉಡುಗೊರೆ ಈ ತಮಾಷೆಗೆ ಕಾರಣವಾಗಿದೆ. ಆದರೆ ಕುತೂಹಲದಿಂದ ಇದನ್ನು ನೋಡುತ್ತಲೇ ನಿಂತ ಹುಡುಗಿಯ ಪರಿಸ್ಥಿತಿ ಹೇಗಿದ್ದಿರಬಹುದು? ಇಲ್ಲಿದೆ ವಿಡಿಯೋ.
View this post on Instagram
ಮದುವೆ ಗಂಡು ಮತ್ತು ಹೆಣ್ಣು ನಿಂತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಅವರ ಜೊತೆಗೆ ಹುಡುಗನ ಗೆಳೆಯ ಕೂಡ ಇದ್ದಾನೆ. ಆತ ಬಂದು ಉಡುಗೊರೆ ನೀಡುತ್ತಾನೆ. ಆ ಬಳಿಕ, ಮದುಮಗ ಅದನ್ನು ತೆರೆದು ನೋಡಲು ತೊಡಗುತ್ತಾನೆ. ಒಂದಾದ ಮೇಲೆ ಒಂದು ಪ್ಯಾಕಿಂಗ್ ಬಿಚ್ಚುತ್ತಾ ಹೋದಷ್ಟು ಮುಗಿಯುವುದಿಲ್ಲ. ಕೊನೆಗೆ ನೋಡಿದರೆ ಆ ಪೊಟ್ಟಣದಲ್ಲಿ ಏನೂ ಇಲ್ಲ!
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ಹಂಚಿಕೊಂಡಿದ್ದಾರೆ. ನೀವು ಎಷ್ಟೇ ಕಷ್ಟ ಪಡಿ. ಇಂತಹ ಗೆಳೆಯರು ಸರಿ ಆಗುವುದಿಲ್ಲ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಹುಡುಗನ ಗೆಳೆಯರು ವೇದಿಕೆಯಲ್ಲಿ ಇಂತಹ ತಮಾಷೆ ಮಾಡಿ ನೋಡಬಾರದಿತ್ತು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Video: ದೇವ ಶ್ರೀಗಣೇಶ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ ವಿದೇಶಿ ವ್ಯಕ್ತಿ! ವಿಡಿಯೋ ವೈರಲ್
ಇದನ್ನೂ ಓದಿ: ತಾಲಿಬಾನ್, ಪಾಕಿಸ್ತಾನದ ನಡುವೆ ಭಿನ್ನಾಭಿಪ್ರಾಯ! ತಾಲಿಬಾನ್ ಕಮ್ಯಾಂಡರ್ ಆಡಿಯೋ ವೈರಲ್