Viral: ಆನ್​ಲೈನ್​ ಆರ್ಡರ್​; ಈ ಸ್ಟಿಕರ್​ಗೆ ಕೂದಲು ಅಂಟಿಕೊಂಡಿರುವುದು ಹೇಗೆ?

Dog Hair : ಇದು ಹೀಗೆ ಆಗಲು ಹೇಗೆ ಸಾಧ್ಯ ಎಂದು ರೆಡ್ಡಿಟ್​ ಖಾತೆದಾರರು ನೆಟ್ಟಿಗರಿಗೆ ಕೇಳಿದ್ದಾರೆ. ಸಾಮಾನ್ಯವಾಗಿ ಎಲ್ಲರ ಊಹೆ ಒಂದೇ ತೆರನಾಗಿಯೇ ಇದೆ. ಈ ಫೋಟೋ ನೋಡಿದ ನೀವು ಏನಂತೀರಿ ಈ ವಿಷಯವಾಗಿ?

Viral: ಆನ್​ಲೈನ್​ ಆರ್ಡರ್​; ಈ ಸ್ಟಿಕರ್​ಗೆ ಕೂದಲು ಅಂಟಿಕೊಂಡಿರುವುದು ಹೇಗೆ?
ಫುಡ್ ಡೆಲಿವರಿ ಪ್ಯಾಕೆಟ್ಟಿನ ಸ್ಟಿಕರಿಗೆ ಅಂಟಿಕೊಂಡ ನಾಯಿಯ ಕೂದಲುಗಳು

Updated on: Aug 04, 2023 | 2:21 PM

Online Order : ಅಡುಗೆ ಮಾಡಲು ಸಾಧ್ಯವಾಗದೇ ಇದ್ದಾಗ ಅಥವಾ ಬೇಕನ್ನಿಸಿದ್ದನ್ನು ತಕ್ಷಣವೇ ತಿನ್ನಬೇಕು ಎನ್ನಿಸಿದಾಗ ಆನ್​ಲೈನ್ ಆರ್ಡರ್ ಮಾಡುತ್ತೇವೆ. ಹಸಿವಿನಿಂದಲೋ ಆಸೆಯಿಂದಲೋ ಕಾಯುತ್ತ ಕುಳಿತಾಗ ತಲುಪಿದ ಆರ್ಡರ್​ನಲ್ಲಿ ಏನಾದರೂ ಯಡವಟ್ಟು ಉಂಟಾದರೆ…!? ಇದೀಗ ವೈರಲ್ ಆಗಿರುವ ಈ ರೆಡ್ಡಿಟ್ ಪೋಸ್ಟ್​ ನೋಡಿ, ‘ಪ್ಯಾಕೆಟ್​ನೊಳಗೆ ಈ ಕೂದಲುಗಳು ಕಂಡುಬಂದಿಲ್ಲ. ಆರ್ಡರ್ ಮಾಡಿದ ಆಹಾರ ಕೂಡ ಸುಸ್ಥಿತಿಯಲ್ಲಿಯೇ ಇದೆ. ಡೆಲಿವರಿ ಕಾರಿನಲ್ಲಿ ಅಥವಾ ರೆಸ್ಟೋರೆಂಟ್​ನಲ್ಲಿ ನಾಯಿ ಇದೆಯೇ? ಈ ಸ್ಟಿಕರ್​ಗೆ ಮಾತ್ರ ಈ ಕೂದಲುಗಳು ಅಂಟಿಕೊಂಡಿರಲು ಹೇಗೆ ಸಾಧ್ಯ? ಎಂದು ಗ್ರಾಹಕರೊಬ್ಬರು ಡೋರ್​ಡ್ಯಾಶ್ (DoorDash) ಫುಡ್​ ಡೆಲಿವರಿಯ ಪ್ಯಾಕೆಟ್ ಬಗ್ಗೆ ಬರೆದು ಫೋಟೋ ಪೋಸ್ಟ್ ಮಾಡಿದ್ದಾರೆ.

Can someone tell me how this happened?
by u/jellllybones in doordash

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದಕ್ಕೆ ಪ್ರತಿಯಾಗಿ ಅನೇಕರು ತಮಗೆ ತೋಚಿದ್ದನ್ನು ಹೇಳಿದ್ದಾರೆ. ನಿಮಗೆ ಈ ಫುಡ್​ಪ್ಯಾಕ್ ಮಾಡಿದವರು ನಾಯಿಪ್ರಿಯರಾಗಿದ್ದಾರೆ ಎಂದಿದ್ದಾರೆ ಅನೇಕರು. ಬಹುಶಃ ಚಾಲಕ ತನ್ನ ನಾಯಿಯನ್ನು ಕಾರಿನಲ್ಲಿ ಕರೆದುಕೊಂಡು ಬಂದಿದ್ದಾನೆ ಎಂದಿದ್ದಾರೆ ಒಬ್ಬರು. ಡೆಲಿವರಿ ಏಜೆಂಟ್​ ತನ್ನ ಸ್ವೆಟ್​ಶರ್ಟ್​ ಅನ್ನು ಹಸ್ಕಿ ಶಾಪ್​ನಲ್ಲಿ ಖರೀದಿಸಿರುವ ಸಾಧ್ಯತೆ ಇದೆ! ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral: ಈ ಕಾಲದಲ್ಲಿಯೂ ಇದೇನಿದು ಕಾರಿನ ಮೇಲೆ ಚೀಟಿ ಸಂಭಾಷಣೆ?

ಹಸ್ಕಿಯ ಕೂದಲುಗಳೇ ಇರಬೇಕು ಇವು. ಹಸ್ಕಿ ನಾಯಿಯ ಕೂದಲುಗಳು ತುಂಬಾ ಉದುರುತ್ತವೆ. ಸ್ಟಿಕರ್ ಹಾರಿ ಕೆಳಗೆ ಬಿದ್ದಾಗ ಅದರ ಕೂದಲು ಇದಕ್ಕೆ ಅಂಟಿವೆ ಎಂದಿದ್ದಾರೆ ಮತ್ತೊಬ್ಬರು. ಒಳಗಿರುವ ಆಹಾರ ಚೆನ್ನಾಗಿದೆ ಎಂದಮೇಲೆ ಮುಗಿಯಿತಲ್ಲ, ಸ್ಟಿಕರ್ ಮತ್ತು ಕವರ್​ ಎಸೆದು ಒಳಗಿನದು ತಿನ್ನಿ, ಆ ನಾಯಿಪ್ರೇಮಿ ಡೆಲಿವರಿ ಏಜೆಂಟ್​ನನ್ನು ಕ್ಷಮಿಸಿ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಈ ಆನೆ ಇಲ್ಲಿ ಮಾಡಿದ್ದೇನು ಮತ್ತು ಓಡಿಹೋಗಿದ್ದು ಏಕೆ?

‘ನನ್ನ ಮನೆಯಲ್ಲಿ ಮೂರು ಬೆಕ್ಕು, ನಾಲ್ಕು ನಾಯಿಗಳಿವೆ. ನಾನು ಆರ್ಡರ್​ ತೆಗೆದುಕೊಳ್ಳುವಾಗ ಯಾವಾಗಲೂ ಮೊದಲು ಲಿಂಟ್​ ರೋಲರ್​ ಅನ್ನು ಬಳಸುತ್ತೇನೆ. ಈ ರೀತಿಯಾಗಿ ಗ್ರಾಹಕರಿಗೆ ಆಹಾರವನ್ನು ತಲುಪಿಸುವುದು  ಸರಿಯಲ್ಲ. ಅವರ ಅಡುಗೆಮನೆ ಎಷ್ಟು ಸ್ವಚ್ಛವಾಗಿದೆ ಎಂಬುದನ್ನು ಈ ಮೂಲಕವೇ ಊಹಿಸಿಕೊಳ್ಳಬಹುದು. ಅವರು ತಮ್ಮ ವೃತ್ತಿಯನ್ನು ಎಷ್ಟು ಗೌರವಿಸುತ್ತಾರೆ ಎನ್ನುವುದನ್ನೂ ತಿಳಿದುಕೊಳ್ಳಬಹುದು ಎಂದಿದ್ದಾರೆ’ ಇನ್ನೊಬ್ಬರು.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ