Viral Video : ಬಾಲಕನ ಮೇಲೆ ನಾಯಿದಾಳಿ, ಕೇರಳದಲ್ಲಿ ನಡೆದ ಘಟನೆ

| Updated By: ಶ್ರೀದೇವಿ ಕಳಸದ

Updated on: Sep 13, 2022 | 11:13 AM

Dog Bite : ಮನೆಯ ಬಳಿ ಸೈಕಲ್​ ನಿಲ್ಲಿಸುತ್ತಿದ್ದಂತೆ ನಾಯಿಯೊಂದು ಈ ಬಾಲಕನ ಮೇಲೆ ಎರಗಿದೆ. ಮುಂದೇನಾಯಿತು?

Viral Video : ಬಾಲಕನ ಮೇಲೆ ನಾಯಿದಾಳಿ, ಕೇರಳದಲ್ಲಿ ನಡೆದ ಘಟನೆ
ಬಾಲಕನ ಮೇಲೆ ದಾಳಿ ಮಾಡುತ್ತಿರುವ ನಾಯಿ
Follow us on

Viral Video : ಇತ್ತೀಚೆಗೆ ಮಹಾನಗರಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ದೆಹಲಿಯಲ್ಲಿ ಮಾತ್ರ ಈ ಸಮಸ್ಯೆ ವಿಪರೀತಕ್ಕೆ ತಲುಪಿದೆ ಎಂಬಂಥ ಪರಿಸ್ಥಿತಿ ಇತ್ತು. ಆದರೆ ಇತರೇ ರಾಜ್ಯಗಳಲ್ಲೂ, ಹಳ್ಳಿಹಳ್ಳಿಗಳಲ್ಲೂ ಈ ಸಮಸ್ಯೆ ಹೆಚ್ಚಾಗುತ್ತಿದೆ ಎನ್ನುವುದು ಒಂದೊಂದೇ ಪ್ರಕರಣಗಳ ಮೂಲಕ ಬೆಳಕಿಗೆ ಬರುತ್ತಿದೆ. ಹೀಗಾಗಿ ನಾಯಿಗಳೆಂದರೆ ಸ್ವಲ್ಪ ಭಯದ ವಾತಾವರಣ ಎಲ್ಲೆಡೆ ಉಂಟಾಗುತ್ತಿದೆ. ಕೇರಳದ ಕೋಝಿಕ್ಕೋಡ್​ನ ಹಳ್ಳಿಯೊಂದರಲ್ಲಿ ನಾಯಿಯೊಂದು ಬಾಲಕನ ಮೇಲೆ ಎರಗಿ ಅತ್ಯಂತ ಕ್ರೂರವಾಗಿ ದಾಳಿ ಮಾಡಿದ ಘಟನೆ ನಡೆದಿದೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ರೆಡ್ಡಿಟ್​, ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಆಗಿದೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಈ ಘಟನೆ ಭಾನುವಾರ ನಡೆದಿದೆ. 7 ನೇ ತರಗತಿ ಓದುತ್ತಿರುವ ಈತ ಎಲ್ಲೋ ಹೊರಹೋಗಿದ್ದವ ವಾಪಾಸು ಮನೆಯ ಬಳಿ ಬಂದು ಸೈಕಲ್​ ನಿಲ್ಲಿಸುತ್ತಿದ್ದ. ಆಗ ಇದ್ದಕ್ಕಿದ್ದಂತೆ ಓಡಿಬಂದ ಕಪ್ಪು ನಾಯಿಯೊಂದು ಅವನ ಮೇಲೆ ಭೀಕರವಾಗಿ ಎರಗಿದೆ. ಅವನ ಕೈಯನ್ನು ಕಚ್ಚಿ ಗಟ್ಟಿಯಾಗಿ ಹಿಡಿದಿದೆ. ಆಘಾತಕ್ಕೊಳಗಾದ ಬಾಲಕ ನೆಲಕ್ಕುರುಳಿ ಬಿದ್ದಿದ್ದಾನೆ. ಎದ್ದೇಳಲು ನೋಡಿದಾಗ ತೋಳನ್ನು ಕಚ್ಚಿ ಹಿಡಿದಿದೆ. ಇದೆಲ್ಲವನ್ನು ನೋಡಿದ ಸುತ್ತಮುತ್ತಲಿನ ಮಕ್ಕಳು ಗಾಬರಿಯಾಗಿ ತಮ್ಮ ಮನೆಗಳಿಗೆ ಓಡಿವೆ.

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

 

ಎಷ್ಟೇ ತಪ್ಪಿಸಿಕೊಳ್ಳಲು ಹೋದರೂ ನಾಯಿ ಬಾಲಕನನ್ನು ಬಿಡುವುದೇ ಇಲ್ಲ. ಕೊನೆಗೂ ಹೇಗೋ ಎದ್ದು ಮನೆಯೊಳಗೆ ಓಡುತ್ತಾನೆ. ನಂತರ ನೆರೆಹೊರೆಯವರು ಬಾಲಕನ ಮನೆಗೆ ಧಾವಿಸುತ್ತಾರೆ.

ಇತ್ತೀಚೆಗೆ ಗಾಝಿಯಾಬಾದ್​ನ ಹೌಸಿಂಗ್ ಸೊಸೈಟಿಯ ಲಿಫ್ಟ್​ನೊಳಗೆ ಸಾಕುನಾಯಿಯೊಂದು ಪುಟ್ಟ ಹುಡುಗನಿಗೆ ಕಚ್ಚಿದ ಘಟನೆ ನಡೆದಿತ್ತು. ಇಂಥದೇ ಪ್ರಕರಣ ನೋಯ್ಡಾದಲ್ಲಿಯೂ ನಡೆದಿತ್ತು. ಈ ಎಲ್ಲ ಪ್ರಕರಣಗಳನ್ನು ಗಮನಿಸಿದ ದೆಹಲಿಯ ಮುನ್ಸಿಪಲ್ ಕಾರ್ಪೋರೇಷನ್​, ತಮ್ಮ ತಮ್ಮ ಸಾಕುಪ್ರಾಣಿಗಳನ್ನು ನೋಂದಾಯಿಸಿಕೊಳ್ಳಲು ಆದೇಶ ಹೊರಡಿಸಿದೆ. ನಿಯಮ ಅನುಸರಿಸದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದೆ.

ಯಾವ ಕಾರಣಕ್ಕಾಗಿ ಪ್ರಾಣಿಗಳು ಯಾವಾಗ ದಾಳಿ ಮಾಡುತ್ತವೆ ಎಂದು ನಿಖರವಾಗಿ ಹೇಳುವುದು ಕಷ್ಟಸಾಧ್ಯ.  ಹಾಗಾಗಿ ಮೈಯೆಲ್ಲ ಕಣ್ಣಾಗಿರಬೇಕಾಗುತ್ತದೆ ಓಡಾಡುವಾಗ. ನಾಯಿಯನ್ನು ಸಾಕಿದವರೂ ಅಷ್ಟೇ ಜವಾಬ್ದಾರಿಯಿಂದ ವರ್ತಿಸುವುದೂ ಬಹಳೇ ಮುಖ್ಯ.

ಮತ್ತಷ್ಟು ವೈರಲ್​  ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:03 am, Tue, 13 September 22