ನ್ಯೂ ಇಯರ್​​ ಪಾರ್ಟಿಗೆ ಬಾರ್​​ಗೆ ಕಳ್ಳತನ ಮಾಡಲು ಹೋಗಿ ಕಂಠಪೂರ್ತಿ ಕುಡಿದು ಅಲ್ಲೇ ಮಲಗಿದ ಕಳ್ಳ

|

Updated on: Dec 31, 2024 | 12:38 PM

ತೆಲಂಗಾಣದ ಮೇದಕ್‌ನಲ್ಲಿ ಹೊಸ ವರ್ಷದ ಆಚರಣೆಗೆ ಮದ್ಯ ಕದಿಯಲು ಯತ್ನಿಸಿದ ವ್ಯಕ್ತಿಯೊಬ್ಬ ಮದ್ಯದ ಅಂಗಡಿಗೆ ನುಗ್ಗಿ ಹಣ ಮತ್ತು ಮದ್ಯವನ್ನು ಕದ್ದಿದ್ದಾನೆ. ಆದರೆ, ಕದ್ದ ಮದ್ಯವನ್ನು ಕುಡಿದು ಅಂಗಡಿಯಲ್ಲೇ ನಿದ್ದೆ ಮಾಡಿದ್ದು, ಬೆಳಿಗ್ಗೆ ಅಂಗಡಿ ಮಾಲೀಕ ಬಾಗಿಲು ತೆಗೆದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು ಕಂಡು ಶಾಕ್​ ಆಗಿದ್ದಾರೆ. ಪೊಲೀಸರು ಆತನನ್ನು ಬಂಧಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಘಟನೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ನ್ಯೂ ಇಯರ್​​ ಪಾರ್ಟಿಗೆ ಬಾರ್​​ಗೆ ಕಳ್ಳತನ ಮಾಡಲು ಹೋಗಿ ಕಂಠಪೂರ್ತಿ ಕುಡಿದು ಅಲ್ಲೇ ಮಲಗಿದ ಕಳ್ಳ
Drunk Thief Arrested
Follow us on

ತೆಲಂಗಾಣ: 2025 ರ ಹೊಸ ವರ್ಷದ ಸಂಭ್ರಮಾಚರಣೆಗೆ ದುಡಿಲ್ಲದೇ ಕಾರಣ ತೆಲಂಗಾಣ ವ್ಯಕ್ತಿಯೊಬ್ಬ ಮದ್ಯದ ಅಂಗಡಿಗೆ ನುಗ್ಗಿ ಮದ್ಯದ ಬಾಟಲಿಗಳನ್ನು ದೋಚಿದ್ದಾನೆ. ಕದ್ದ ಬಾಟಲಿಯೊಂದಿಗೆ ಬಾರ್​ನಿಂದ ಹೊರಗಡೆ ಬರುವ ಮುನ್ನ ಅಲ್ಲಿದ್ದ ಒಂದಿಷ್ಟು ಮದ್ಯವನ್ನು ಕುಡಿದು ಮತ್ತೆ ಹೋಗುವ ಎಂದು ಪ್ಲಾನ್​​ ಮಾಡಿದ್ದಾನೆ. ಆದರೆ ಕಂಠಪೂರ್ತಿ ಕುಡಿದ ಕಳ್ಳ ಅಲ್ಲೇ ಮಲಗಿದ್ದು, ಮರುದಿನ ಬೆಳಿಗ್ಗೆ ಅಂಗಡಿಯ ಮಾಲೀಕನ ಕೈ ಸಿಕ್ಕಿಬಿದ್ದಿದ್ದಾನೆ. ತೆಲಂಗಾಣದ ಮೇದಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಭಾನುವಾರ ರಾತ್ರಿ ‘ಕನಕದುರ್ಗಾ ವೈನ್ಸ್’ ಹೆಸರಿನ ಅಂಗಡಿಗೆ ನುಗ್ಗಿ ಛಾವಣಿಯ ಕೆಲವು ಹೆಂಚುಗಳನ್ನು ಕಿತ್ತು ಸಿಸಿಟಿವಿ ಕ್ಯಾಮೆರಾ ನಿಷ್ಕ್ರಿಯಗೊಳಿಸಿ ದುಬಾರಿ ಬೆಲೆಯ ಮದ್ಯದ ಬಾಟಲಿಗಳನ್ನು ಕದ್ದಿದ್ದ ಕಳ್ಳ, ಇನ್ನೇನು ಅಂಗಡಿಯಿಂದ ಪಾರಾಗಬೇಕು ಎನ್ನುವಷ್ಟರಲ್ಲಿ ಚಳಿಗೆ ಸ್ಪಲ್ಪ ಕುಡಿದು ಮತ್ತೆ ಹೋಗುವ ಎಂದು ಯೋಚಿಸಿದ್ದಾನೆ. ಆದರೆ ಮದ್ಯದ ಆಸೆಗೆ ಕಂಠಪೂರ್ತಿ ಕುಡಿದಿದ್ದಾನೆ. ಸೋಮವಾರ ಮುಂಜಾನೆ ಅಂಗಡಿ ಮಾಲೀಕ ಅಂಗಡಿಯ ಬಾಗಿಲು ತೆಗೆದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು ಕಂಡು ಶಾಕ್​ ಆಗಿದ್ದಾರೆ.

ಸೋಮವಾರ ಬೆಳಗ್ಗೆ ಪೊಲೀಸರು ಸ್ಥಳಕ್ಕೆ ಬಂದ ನಂತರ ಘಟನೆಯ ದೃಶ್ಯಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಕಳ್ಳ ಮದ್ಯದಂಗಡಿಯಲ್ಲಿ ನೆಲದ ಮೇಲೆ ಮಲಗಿದ್ದು ನಗದು ಮತ್ತು ಮದ್ಯದ ಬಾಟಲಿಗಳು ಅವನ ಸುತ್ತಲೂ ಬಿದ್ದಿರುವುದನ್ನು ತೋರಿಸುವ ಫೋಟೋ ವೈರಲ್ ಆಗಿದೆ.

ಇದನ್ನೂ ಓದಿ: Viral Video: ಮಳೆ ನೀರಿನಲ್ಲಿ ಆಟವಾಡುತ್ತಿರುವಾಗ ಚರಂಡಿಗೆ ಬಿದ್ದು ಕೊಚ್ಚಿ ಹೋದ 3 ವರ್ಷದ ಮಗು

ಈ ಕುರಿತು ಮಾಹಿತಿ ನೀಡಿದ ಸಬ್ ಇನ್ಸ್‌ಪೆಕ್ಟರ್ ಅಹ್ಮದ್ ಮೊಯಿನುದ್ದೀನ್ “ಕಳ್ಳನನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಂಧಿಸಲಾಗಿದೆ. ಆತನ್ನು ಆಂಬ್ಯುಲೆನ್ಸ್‌ನಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಸಲು ಅವನಿಗೆ ಪ್ರಜ್ಞೆ ಮರಳಲು ಪೊಲೀಸ್ ತಂಡ ಕಾಯುತ್ತಿದೆ ” ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ