Viral Video: ಬಾತುಕೋಳಿಯ ಮೂನ್ ವಾಕ್ ನೋಡಿದ್ದೀರಾ? ಇಲ್ಲಿದೆ ನೋಡಿ ವಿಡಿಯೊ

ಇಲ್ಲೊಂದು ಬಾತುಕೋಳಿ ಮೂನ್​ ವಾಕ್​ ಮಾಡಿದೆ. ಸಕತ್​ ಮ್ಯೂಸಿಕ್​ ಜತೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ವಿಡಿಯೋ ಇಲ್ಲಿದೆ ನೀವೂ ನೋಡಿ.

Viral Video: ಬಾತುಕೋಳಿಯ ಮೂನ್ ವಾಕ್ ನೋಡಿದ್ದೀರಾ? ಇಲ್ಲಿದೆ ನೋಡಿ ವಿಡಿಯೊ
ಮೂನ್​ ವಾಕ್​ ಮಾಡಿದ ಬಾತುಕೋಳಿ
Edited By:

Updated on: Oct 22, 2021 | 9:47 AM

ಪ್ರಾಣಿಗಳ ತುಂಟಾಟದ ವಿಡಿಯೋಗಳು ಮನಗೆಲ್ಲುವುದಂತೂ ಸತ್ಯ. ಒತ್ತಡದ ಮನಸ್ಥಿತಿಯಲ್ಲಿ ಮನಸ್ಸಿಗೆ ಖುಷಿ ನೀಡುವ ದೃಶ್ಯಗಳು ನಿರಾಳ ಭಾವನೆಯನ್ನು ನೀಡುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೊ ನೋಡಿದ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಬಾತುಕೋಳಿಯ ಮೂನ್ ವಾಕ್ ಇದೀಗ ಫುಲ್ ವೈರಲ್ ಆಗಿದೆ. ಮೈಕಲ್ ಜಾಕ್ಸನ್​ ಅವರಂತೆಯೇ ಬಾತುಕೋಳಿ ಮೂನ್ ವಾಕ್ ಮಾಡಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

ವೈರಲ್ ಆಗಿರುವ ವಿಡಿಯೋದಲ್ಲಿ ಗಮನಿಸುವಂತೆ ಬಾತುಕೋಳಿಯು ಹಿಂಭಾಗದಲ್ಲಿ ಚಲಿಸುತ್ತಾ ಮೂನ್ ವಾಕ್ ಮಾಡಿದೆ. ಸುತ್ತಲೂ ಹಲವಾರು ಬಾತುಕೋಳಿಗಳು ನಿಂತಿರುವುದನ್ನು ನೋಡಬಹುದು. ಅವೆಲ್ಲವೂ ಸಹ ಈ ನಿರ್ದಿಷ್ಟ ಬಾತುಕೋಳಿ ಮೂನ್ ವಾಕ್ ಮಾಡುತ್ತಿರುವುದುನ್ನು ಆಶ್ಚರ್ಯದಿಂದ ನೋಡುತ್ತಿವೆ.

ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಹೆಚ್ಚು ಇಷ್ಟಪಟ್ಟಿದ್ದಾರೆ. ಬಾತುಕೋಳಿಯ ಅದ್ಭುತ ನಡಿಗೆಯಿಂದ ಹಲವರು ಆಶ್ಚರ್ಯಗೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುವ ತಮಾಷೆಯ ದೃಶ್ಯಗಳ ಜತೆಗೆ ಮನಗೆಲ್ಲುವ ಇಂತಹ ದೃಶ್ಯಗಳು ಹೆಚ್ಚು ವೈರಲ್​ ಆಗುತ್ತವೆ.

ಇದನ್ನೂ ಓದಿ:

Viral Video: ಮೇಘಾಲಯ ಸಿಎಂ ಹಾಡಿದ ‘ಸಮ್ಮರ್ ಆಫ್ 69’ ಹಾಡಿಗೆ ನೆಟ್ಟಿಗರೆಲ್ಲಾ ಫಿದಾ

Viral Video: ನೆಟ್ಟಿಗರ ಮನಸೂರೆಗೊಂಡ ಹಾವಿನ ರೂಪದ ಕೇಕ್; ಏನಿದು ಸಮಾಚಾರ? ವಿಡಿಯೋ ನೋಡಿ