Video Viral: ಬೆಂಗಳೂರಿನಲ್ಲಿದೆ ಪರಿಸರ ಸ್ನೇಹಿ ಜ್ಯೂಸ್‌ ಸೆಂಟರ್​​​​; ಸೈಕಲ್‌ ಬಳಸಿ ಜ್ಯೂಸ್‌ ತಯಾರಿಕೆ

|

Updated on: Apr 19, 2024 | 4:05 PM

ಸೈಕಲ್‌ ಹಿಂದೆ ಮಿಕ್ಸರ್‌ ಜಾರ್‌ವೊಂದನ್ನ ಅಳವಡಿಸಲಾಗಿದ್ದು, ಅದರಲ್ಲಿ ಹಣ್ಣುಗಳನ್ನಿರಿಸಿ ಪೆಡಲ್‌ ಮಾಡಿದರೆ ಜ್ಯೂಸ್‌ ತಯಾರಾಗುತ್ತದೆ. ಇದಲ್ಲದೇ ಹಣ್ಣಿನ ಜ್ಯೂಸ್​​ ಅನ್ನು ಹಣ್ಣಿನ ತಿರುಳಿನಲ್ಲೇ ಸುರಿದು ಸರ್ವ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

Video Viral: ಬೆಂಗಳೂರಿನಲ್ಲಿದೆ ಪರಿಸರ ಸ್ನೇಹಿ ಜ್ಯೂಸ್‌ ಸೆಂಟರ್​​​​; ಸೈಕಲ್‌ ಬಳಸಿ ಜ್ಯೂಸ್‌ ತಯಾರಿಕೆ
Eat Raja
Follow us on

ಬೆಂಗಳೂರಿನ ಪರಿಸರ ಸ್ನೇಹಿ ‘ಈಟ್‌ ರಾಜ’ (Eat Raja) ಜ್ಯೂಸ್‌ ಅಂಗಡಿ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ
ಸುದ್ದಿಯಲ್ಲಿದೆ. ಇಲ್ಲಿ ಸೈಕಲ್‌ ಬಳಸಿ ಜ್ಯೂಸ್‌ ತಯಾರಿಸಲಾಗುತ್ತದೆ. ಇದಲ್ಲದೇ ಯಾವುದೇ ರೀತಿಯ ಗಾಜಿನ ಗ್ಲಾಸ್‌, ಪ್ಲಾಸ್ಟಿಕ್ ಗ್ಲಾಸ್‌ ಹಾಗೂ ಪ್ಲಾಸ್ಟಿಕ್​ ಸ್ಟ್ರಾಗಳ ಬಳಕೆಯಿಲ್ಲ. ಬದಲಾಗಿ ಜ್ಯೂಸ್​​ ತಯಾರಿಸಿದ ಹಣ್ಣಿನ ತಿರುಳಿನಿಂದಲೇ ಜ್ಯೂಸ್​​ ಸರ್ವ್ ಮಾಡಿಕೊಡಲಾಗುತ್ತದೆ. ಈ ಪರಿಸರ ಸ್ನೇಹಿ ಜ್ಯೂಸ್‌ ಸೆಂಟರ್ ಬೆಂಗಳೂರಿನ ಮಲ್ಲೇಶ್ವರಂನಲ್ಲಿದೆ.

@ontheground.with.sai ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಈ ಪರಿಸರ ಸ್ನೇಹಿ ಜ್ಯೂಸ್‌ ಅಂಗಡಿಯ ವಿಡಿಯೋ ಹಂಚಿಕೊಂಡಿದ್ದು, ಸದ್ಯ ಎಲ್ಲೆಡೆ ವೈರಲ್​​ ಆಗುತ್ತಿದೆ. ವಿಡಿಯೋದಲ್ಲಿ ಸೈಕಲ್‌ ಹಿಂದೆ ಮಿಕ್ಸರ್‌ ಜಾರ್‌ವೊಂದನ್ನ ಅಳವಡಿಸಲಾಗಿದ್ದು, ಅದರಲ್ಲಿ ಹಣ್ಣುಗಳನ್ನಿರಿಸಿ ಪೆಡಲ್‌ ಮಾಡಿದರೆ ಜ್ಯೂಸ್‌ ತಯಾರಾಗುತ್ತದೆ. ಇದಲ್ಲದೇ ಹಣ್ಣಿನ ಜ್ಯೂಸ್​​ ಅನ್ನು ಹಣ್ಣಿನ ತಿರುಳಿನಲ್ಲೇ ಸುರಿದು ಸರ್ವ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಈ ವೈರಲ್​​ ಜೀನ್ಸ್​​ ಪ್ಯಾಂಟ್​ ಕಂಡು ‘ಬೇಸಿಗೆಗೆ ಹೇಳಿ ಮಾಡಿಸಿದ ಜೀನ್ಸ್’​​ ಎಂದ ನೆಟ್ಟಿಗರು

ಸದ್ಯ ಏಪ್ರಿಲ್​​ 17ರಂದು ಹಂಚಿಕೊಂಡಿರುವ ಈ ವಿಡಿಯೋ ಎರಡೇ ದಿನದಲ್ಲಿ 3ಲಕ್ಷದ 67ಸಾವಿರ ವೀಕ್ಷಣೆಯನ್ನು ಪಡೆದುಕೊಂಡಿದೆ. ಇದಲ್ಲದೇ 31ಸಾವಿರಕ್ಕೂ ಹೆಚ್ಚಿನ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಬೆಂಗಳೂರಿನ ಪರಿಸರ ಸ್ನೇಹಿ ಜ್ಯೂಸ್​ ಸೆಂಟರ್​ ವಿಡಿಯೋ ಎಲ್ಲೆಡೆ ಭಾರೀ ವೈರಲ್​ ಆಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ