Viral Video : ಮೊದಲು ಎನ್ನುವ ಅಚ್ಚರಿ, ಬೆರಗು, ಸಂತಸ ಎಂದೂ ಮರೆಯದ್ದು. ಮೊದಲ ಸಲ ತನ್ನ ತಂಗಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆಯುತ್ತಿದ್ದಾಳೆ ಎನ್ನುವುದು ಆಕೆಯ ಅಣ್ಣನಿಗೆ ಎಷ್ಟೊಂದು ಅಚ್ಚರಿ ನೀಡಿದೆ! ಇಷ್ಟು ಸಣ್ಣ ವಯಸ್ಸಿನಲ್ಲಿ ಅಣ್ಣ ಇದನ್ನು ಗಮನಿಸಿ ಸ್ಪಂದಿಸುತ್ತಾನೆ ಎಂದರೆ, ಅವರಿಬ್ಬರ ನಡುವೆ ಈಗಿನಿಂದಲೇ ಎಂಥ ಬಂಧ ಇರಬಹುದು. ಸಾಮಾನ್ಯವಾಗಿ ಹುಡುಗರು ತಮ್ಮದೇ ಲೋಕದಲ್ಲಿ ಕಳೆದುಹೋಗುವುದು ಜಾಸ್ತಿ, ಅದೂ ಈ ವಯಸ್ಸಿನಲ್ಲಿ. ಆದರೆ ತನ್ನ ತಂಗಿಯ ನಡೆನುಡಿ ಬೆಳವಣಿಗೆಯನ್ನೆಲ್ಲ ಈತ ಗಮನಿಸುತ್ತಾ ಬಂದಿದ್ದಾನೆಂದರೆ, ಇದು ಅಪರೂಪದ ಅಣ್ಣ ತಂಗಿಯ ಪ್ರೀತಿಯ ಬಂಧ.
This older brother had the cutest reaction to seeing his baby sister walk for the first time ? pic.twitter.com/lu4Uw0KwWK
ಇದನ್ನೂ ಓದಿ— NowThis (@nowthisnews) August 30, 2022
ಈ ವಿಡಿಯೋ 20 ಸಾವಿರ ವೀಕ್ಷಣೆ ಪಡೆದಿದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ