ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುತ್ತವೆ. ಕೆಲವು ಮನಕಲಕುವ ದೃಶ್ಯಗಳು ಕಣ್ಣು ತೇವಗೊಳಿಸಿದ್ರೆ, ಇನ್ನೂ ಕೆಲ ವಿಡಿಯೋಗಳನ್ನು ನೋಡಿದ್ರಂತೂ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸುತ್ತವೆ. ಅದರಂತೆ ಇಲ್ಲೊಂದು ವಿಡಿಯೋ ನಗುವಿನಲ್ಲಿ ತೇಲಾಡಿಸುತ್ತೆ.
ಹೌದು….ಬಾಯಲ್ಲಿ ಹಲ್ಲಿಲ್ಲದ ಹಣ್ಣಾದ ಮುದುಕನೋರ್ವ ನವ ಯೌವನದ ಹುಡುಗಿಯನ್ನು ಮದುವೆಯಾಗಿದ್ದಾನೆ. ವಧು-ವರನ ವಯಸ್ಸಿನ ವ್ಯತ್ಯಾಸ ನೋಡಿದ್ರೆ ಹೌಹಾರುವುದಂತೂ ಗ್ಯಾರಂಟಿ. ಒಂದು ಸುಂದರವಾದ ಹುಡುಗಿ ಓರ್ವ ಬೊಚ್ಚು ಬಾಯಿ ಮುದುಕನ್ನನ್ನು ಮದ್ವೆಯಾಗಿದ್ದು, ಆ ವಿಡಿಯೋ ಸಖತ್ ವೈರಲ್ ಆಗಿದೆ. ಅದರಲ್ಲೂ ಈ ವಿಡಿಯೋದಲ್ಲಿ ಹುಡುಗಿ ಪಕ್ಕ ಕುಳಿತ ಅಜ್ಜನ ಎಕ್ಸ್ಪ್ರೇಷನ್ ನಗೆಯಲ್ಲಿ ತೇಲಾಡಿಸುತ್ತೆ.
ಕೆಲವು ಸೆಕೆಂಡುಗಳ ಈ ವಿಡಿಯೋದಲ್ಲಿ ಸುಮಾರು 60 ವರ್ಷ ವಯಸ್ಸಿನ ವೃದ್ಧನೊಬ್ಬ ವರನ ಬಟ್ಟೆಯಲ್ಲಿ ಕುಳಿತಿರುವುದನ್ನು ಕಾಣಬಹುದು. ಅವನ ಕೊರಳಲ್ಲಿ ಹೂವಿನ ಹಾರ, ತಲೆಯ ಮೇಲೆ ಪೇಟ ಧರಿಸಿ ಹಾಕಿಕೊಂಡು ಇಪ್ಪತ್ತು ವರ್ಷದ ಆಸುಪಾಸಿನ ಹುಡುಗಿ ಪಕ್ಕ ಕುಳಿತುಕೊಂಡು ಮುಸಿ-ಮುಸಿ ನಕ್ಕಿದ್ದಾನೆ. ಇದು ನೋಡುಗರನ್ನು ಹುಬ್ಬೇರುವಂತೆ ಮಾಡಿದೆ. ಅಲ್ಲದೇ ಮದ್ವೆಯಾಗಲು ಹುಡುಗಿ ಸಿಗದವರೆಗೆ ಟಾಂಟ್ ಕೊಟ್ಟಂತಿದೆ.
ಕೆಲವೇ ಸೆಕೆಂಡುಗಳಲ್ಲಿ ಹೊರಬಿದ್ದ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಅವರ ಮುಖದಲ್ಲಿನ ಸಂತೋಷವನ್ನು ಈ ವಿಡಿಯೋದಲ್ಲಿ ಕಾಣಬಹುದು. ಇನ್ನು ಮುದುಕನ ಕುಳಿತಿರುವ ವಧು ಬಿಗ್ ಕೂಲ್ ಸೈಲೆಂಲ್ಗೆ ಜಾರಿದ್ದು, ಬರೀ ಪಿಳಿಪಿಳಿ ಕಣ್ಣು ಬಿಡ್ತಿದ್ದಾಳೆ ಅಷ್ಟೇ.
Psycho Bihari ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ನಿಂದ ಈ ವಿಡಿಯೋ ಶೇರ್ ಆಗಿದ್ದು, ಸಾಕಷ್ಟು ಜನರು ಲೈಕ್ಸ್, ಕಮೆಂಟ್ಸ್ ಮಾಡುತ್ತಿದ್ದಾರೆ. ಇನ್ನು ಒಂದುವರೆ ಲಕ್ಷಕ್ಕೂ ಅಧಿಕ ಜನ ನೋಡಿದ್ದಾರೆ. ಇನ್ನು ನೀವೂ ಒಂದು ಸಲ ಈ ವಿಡಿಯೋವನ್ನು ಒಂದು ಸಲ ನೋಡಿ ನಕ್ಕು ಬಿಡಿ….