ಸಫಾರಿಗೆ ತೆರಳಿದ ವಿದ್ಯಾರ್ಥಿಗಳ ಮೇಲೆ ಆನೆ ದಾಳಿ ಮಾಡಿದ್ದು, ಭಯಭೀತರಾದ ವಿದ್ಯಾರ್ಥಿಗಳು ಪ್ರಾಣ ರಕ್ಷಣೆಗಾಗಿ ಸಫಾರಿ ವಾಹನದಿಂದ ಇಳಿದು ಓಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ. ದಕ್ಷಿಣ ಆಫ್ರಿಕಾದ ಲಿಂಪೊಪೊ ಪ್ರಾಂತ್ಯದ ಗ್ಲೋವೆಲೆಟ್ ಮತ್ತು ಫಲಬೋರ್ವಾ ಪಟ್ಟಣಗಳ ನಡುವೆ ಇರುವ ವನ್ಯಜೀವಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆನೆಗಳ ಸಂತಾನೋತ್ಪತ್ತಿ ಪ್ರಕ್ರಿಯೆ ಬಗ್ಗೆ ತಿಳಿಯಲು ಬಂದ ವಿದ್ಯಾರ್ಥಿಗಳ ಮೇಲೆ ಆನೆ ದಾಳಿ (Elephant attack) ನಡೆಸಿದೆ.
ಎಡ್ವರ್ಡ್ ದಿ ಗೈಡ್ ಪೋಸ್ಟ್ ಮಾಡಿದ ಈ ವಿಡಿಯೋದಲ್ಲಿ ಆನೆ ದಾಳಿಯಿಂದ ವಿದ್ಯಾರ್ಥಿಗಳು ಸಫಾರಿ ವಾಹನದಿಂದ ಜೀವ ಉಳಿಸಿಕೊಳ್ಳಲು ಓಡುತ್ತಿರುವ ದೃಶ್ಯ ಕಂಡುಬಂದಿದೆ. ಮತ್ತೊಂದು ಕಡೆ ವಾಹನದಲ್ಲಿದ್ದ ಮಾರ್ಗದರ್ಶಕ ಹೊರಗೆ ಹೋಗಿ ಹೊರಡಿ, ಹೊರಡಿ ಎಂದು ಕಿರುಚುತ್ತಿರುವುದು ಕಂಡುಬಂದಿದೆ.
ಪರಿಸರ ತರಬೇತಿ ಬೋಧಕರು ಮತ್ತು ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಸಫಾರಿ ವಾಹನದ ಮೇಲೆ ಆನೆಯೊಂದು ದಾಳಿ ಮಾಡಿದೆ. ಈ ವಿಡಿಯೋದಲ್ಲಿ ಕೆಲವು ವಿದ್ಯಾರ್ಥಿಗಳು ತಮ್ಮ ಜೀವ ಉಳಿಸಿಕೊಳ್ಳಲು ತಮ್ಮ ಬಳಿ ಇದ್ದ ವಸ್ತುಗಳನ್ನು ಬಿಟ್ಟು ಓಡಿರುವುದು ಸೆರೆಯಾಗಿದೆ. ಸಂತಾನೊತ್ಪತ್ತಿ ಹಂತದಲ್ಲಿರುವಾಗ ಸಫಾರಿ ವಾಹನದ ಸದ್ದು ಕೇಳಿದ್ದರಿಂದ ಹೆಚ್ಚು ಕೋಪಗೊಂಡು ದಾಳಿ ಮಾಡಿದೆ ಎಂದು ವಿಡಿಯೋ ನೋಡಿದ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತ್ತಿದ್ದಂತೆ ಇದೇ ರೀತಿ ಆನೆ ದಾಳಿ ಮಾಡಿದ ಮತ್ತೊಂದು ವಿಡಿಯೋವನ್ನು ಶೇರ್ ಮಾಡಲಾಗಿದೆ. ಪ್ರಾಣಿಗಳನ್ನು ನೋಡುತ್ತಾ ಅತಿ ಹೆಚ್ಚು ಸಮೀಪ ಹೋಗುವುದೇ ಇದಕ್ಕೆ ಕಾರಣ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇನ್ನು ಈ ಘಟನೆಯಿಂದ ಸಫಾರಿ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಆನೆಯ ದಾಳಿಯಿಂದ ಯಾರಿಗೂ ಗಾಯಗಳಾಗಿಲ್ಲ ಎನ್ನುವುದು ಸಮಾಧಾನ ತಂದಿದೆ.
ಎಚ್ಚರ ಇರಲಿ
ಪ್ರಯಾಣಿಕರು, ವಿಶೇಷವಾಗಿ ಮಾರ್ಗದರ್ಶಿಗಳು, ಪ್ರಾಣಿಗಳನ್ನು ಪ್ರಚೋದಿಸಬಾರದು. ಪ್ರಾಣಿಗಳನ್ನು ಗೌರವಿಸಬೇಕು ಮತ್ತು ಅವುಗಳ ಏಕಾಂತಕ್ಕೆ ಅಡ್ಡಿ ಮಾಡಬಾರದು. ಪ್ರಾಣಿಗಳಿಂದ ದೂರ ಇದ್ದು, ಎಚ್ಚರದಿಂದ ಇದ್ದರೆ ಇಂತಹ ಅಪಾಯಗಳು ಸಂಭವಿಸುವುದಿಲ್ಲ.
ಇದನ್ನೂ ಓದಿ:
Viral Video: ಕಲಾವಿದನ ಕೈಚಳಕದಿಂದ ಮೂಡಿದ ಕಣ್ಣಿನ ಚಿತ್ರ; ವಿಡಿಯೊ ವೈರಲ್
Viral Video: ಕೆಣಕಿದವರನ್ನು ಅಟ್ಟಾಡಿಸಿ ಹೊಸಕಿಹಾಕಿದ ಆನೆ; ವಿಡಿಯೋ ನೋಡಿ ತಪ್ಪು ಯಾರದ್ದು ನೀವೇ ಹೇಳಿ?