ಕಾಡಿನಲ್ಲಿರುವ ಸಿಂಹ, ಚಿರತೆ, ಹುಲಿ ಎಷ್ಟು ಅಪಾಯಕಾರಿ ಜೀವಿಗಳೋ, ಅದೇ ರೀತಿ ನೀರಿನಲ್ಲಿರುವ ಮೊಸಳೆಗಳು ಕೂಡಾ ತುಂಬಾನೇ ಅಪಾಯಕಾರಿ. ಹೇಳಿ ಕೇಳಿ ಮೊಸಳೆಗಳು ಬೇಟೆಯಾಡವುದರಲ್ಲಿ ಪಳಗಿರುವ ಪ್ರಾಣಿ. ನದಿ ನೀರಿನ ಬಳಿ ಬೇರಾವ ಪ್ರಾಣಿ ಬಂದರೂ ಮೊಸಳೆ ಕ್ಷಣಾರ್ಧದಲ್ಲಿ ಆ ಪ್ರಾಣಿಗಳ ಮೇಲೆರಗಿ ಅವುಗಳನ್ನು ಕೊಂದೇ ಬಿಡುತ್ತವೆ. . ಇಂತಹ ಭಯಾನಕ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ತನ್ನ ಗುಂಪಿನೊಂದಿಗೆ ನೀರು ಕುಡಿಯಲು ಬಂದಂತಹ ದೈತ್ಯ ಆನೆಯ ಮೇಲೆ ಮೊಸಳೆಯೊಂದು ದಾಳಿ ಮಾಡಿ. ಆ ತಕ್ಷಣ ತನ್ನ ಬುದ್ಧಿವಂತಿಕೆಯಿಂದ ಆನೆಯು ಭೀಕರ ದಾಳಿಯಿಂದ ತಪ್ಪಿಸಿಕೊಂಡಿದೆ.
ಈ ಕುರಿತ ವಿಡಿಯೋವನ್ನು Latest Sightings ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಆನೆಗಳ ಹಿಂಡೊಂದು ನದಿ ಪಕ್ಕ ಬಂದು ಪ್ರಶಾಂತವಾಗಿ ನೀರು ಕುಡಿಯುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಹೀಗೆ ಆನೆಗಳು ನೀರು ಕುಡಿಯುತ್ತಿದ್ದ ವೇಳೆ ಬೇಟೆಗಾಗಿ ಹೊಂಚುಹಾಕಿ ಕುಳಿತಿದ್ದ ಮೊಸಳೆಯೊಂದು ದೈತ್ಯ ಆನೆಯ ಸೊಂಡಿಲಿನ ಮೇಲೆ ಬಂದೆರಗುತ್ತದೆ. ಆ ತಕ್ಷಣ ಆನೆ ತನ್ನ ಸಮಯ ಪ್ರಜ್ಞೆಯಿಂದ ಮೊಸಳೆಯ ದಾಳಿಯಿಂದ ತಪ್ಪಿಸಿಕೊಂಡು ಕಾಲ್ಕಿತ್ತು ಓಡಿ ಹೋಗುತ್ತದೆ. ನಂತರ ರಾತ್ರಿಯ ವೇಳೆಯೂ ಆನೆಗಳ ಮೇಲೆ ದಾಳಿ ನಡೆಸಲು ಮೊಸಳೆ ಹೊಂಚು ಹಾಕಿತ್ತು, ಆದರೆ ದುರಾದೃಷ್ಟವಶಾತ್ ಮೊಸಳೆಗೆ ತನ್ನ ಬೇಟೆಯೇ ಸಿಗಲಿಲ್ಲ.
ಇದನ್ನೂ ಓದಿ: IPL ಪಂದ್ಯದ ವೇಳೆ ಬಾಲ್ ಎಗರಿಸಿ ಪ್ಯಾಂಟ್ ಒಳಗಿಟ್ಟು ಪೊಲೀಸರ ಕೈಗೆ ಸಿಕ್ಕಿ ಬಿದ್ದ KKR ಅಭಿಮಾನಿ
ಮೇ 14 ರಂದು ಹಂಚಿಕೊಳ್ಳಲಾದ ವಿಡಿಯೋ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಮೊಸಳೆಯ ದಾಳಿಯ ಭೀಕರ ದೃಶ್ಯವನ್ನು ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ