
ಪ್ರಾಣಿಗಳೇ ಹಾಗೆ, ತಮ್ಮ ಭಾವನೆಗಳನ್ನು ವಿಭಿನ್ನ ರೀತಿಯಲ್ಲಿ ತೋರ್ಪಡಿಸುತ್ತವೆ. ಯಾರು ತನ್ನನ್ನು ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳುತ್ತಾರೋ ಅವರ ಜೊತೆಯಲ್ಲಿ ಮಗುವಿನಂತೆ ವರ್ತಿಸುತ್ತವೆ ಹಾಗೂ ಸಲುಗೆ ಬೆಳೆಸಿಕೊಳ್ಳುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಆನೆಯು (elephant) ತನ್ನನ್ನು ಬಿಟ್ಟು ಹೊರಟ ಮಾಲೀಕನನ್ನು ತಡೆದು ನಿಲ್ಲಿಸುವ ದೃಶ್ಯವಾಗಿದೆ. ಈ ಮುದ್ದಾದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
srithapthaifamily ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮಾಲೀಕ ಹಾಗೂ ಗಜರಾಜನ ಸುಂದರ ಬಾಂಧವ್ಯವನ್ನು ನೋಡಬಹುದು. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸೈಕಲ್ ಏರಿ ಹೊರಟಿರುವುದನ್ನು ಕಾಣಬಹುದು. ಈ ವೇಳೆ ಆನೆಯು ತನ್ನ ಮಾಲೀಕನನ್ನು ತಡೆದು ನಿಲ್ಲಿಸಿ, ಸೈಕಲ್‌ನಿಂದ ಕೆಳಗೆ ಇಳಿಸಿದೆ.
ಇದನ್ನೂ ಓದಿ: ತನಗೆ ಬೊಗಳಿದ ಶ್ವಾನವನ್ನು ಒದ್ದು ಓಡಿಸಿದ ಗಜರಾಜ
ಈ ವಿಡಿಯೋ 5 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ತುಂಬಾನೇ ಮುದ್ದಾಗಿದೆ. ಮತ್ತೊಬ್ಬರು, ಪರಿಶುದ್ಧ ಪ್ರೀತಿ, ಮತ್ತೆ ಮತ್ತೆ ನೋಡಬೇಕೆನಿಸುವ ದೃಶ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇವರಿಬ್ಬರೂ ಸ್ನೇಹಿತರು, ಆಟ ಆಡುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ