ಸ್ಪೇಸ್ ಎಕ್ಸ್ ಬಾಹ್ಯಾಕಾಶ ಸಂಸ್ಥೆಯ ಸಂಸ್ಥಾಪಕ, ಟೆಸ್ಲಾ ಎಲೆಕ್ಟ್ರಿಕ್ ಕಾರು ಕಂಪನಿ ಸಿಇಒ, ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್(Elon Musk), ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ರನ್ನು ನೇರವಾಗಿ ಫೈಟ್ಗೆ ಆಹ್ವಾನಿಸಿದ್ದಾರೆ. ಟ್ವೀಟ್ ಮಾಡಿರುವ ಎಲಾನ್ ಮಸ್ಕ್, ನನ್ನೊಂದಿಗೆ ದ್ವಂದ್ವ ಯುದ್ಧಕ್ಕೆ ಆಗಮಿಸುವಂತೆ ಪುಟಿನ್ರಿಗೆ ನೇರವಾಗಿ ಸವಾಲು ಹಾಕುತ್ತಿದ್ದೇನೆ ಎಂದು ಹೇಳಿದ್ದಾರೆ. ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾ ವಿರುದ್ಧ ಅನೇಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ಕಂಪನಿಗಳು ರಷ್ಯಾ ಮೇಲೆ ನಿರ್ಬಂಧವನ್ನೂ ವಿಧಿಸಿವೆ. ರಷ್ಯಾ-ಉಕ್ರೇನ್ ಯುದ್ಧ ಮೂರನೇ ವಾರಕ್ಕೆ ಕಾಲಿಟ್ಟ ಬೆನ್ನಲ್ಲೇ ಟ್ವೀಟ್ ಮಾಡಿರುವ ಎಲಾನ್ ಮಸ್ಕ್, ನನ್ನೊಂದಿಗೆ ಯುದ್ಧಕ್ಕೆ ಬನ್ನಿ ಎಂದು ಪುಟಿನ್ರನ್ನು ಕರೆದಿದ್ದಾರೆ.
ಎಲಾನ್ ಮಸ್ಕ್ ಟ್ವೀಟ್ಗೆ ರಷ್ಯಾದ ಸ್ಪೇಸ್ ಏಜೆನ್ಸಿಯ ಮಹಾನಿರ್ದೇಶಕ ಡಿಮಿಟ್ರಿ ರೊಗೊಝಿನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮಸ್ಕ್ ಟ್ವೀಟ್ನ್ನು ರೀಟ್ವೀಟ್ ಮಾಡಿಕೊಂಡಿರುವ ಅವರು, ನೀವು ಇನ್ನೂ ಚಿಕ್ಕವರು, ಸಣ್ಣ ಸೈತಾನ ಮತ್ತು ದುರ್ಬಲರು. ಪುಟಿನ್ ವಿರುದ್ಧ ಹೋರಾಡುವುದಕ್ಕೂ ಮೊದಲು ನನ್ನೊಂದಿಗೆ ಯುದ್ಧಕ್ಕೆ ಬನ್ನಿ ಎಂದು ಆಹ್ವಾನಿಸಿದ್ದಾರೆ. ಅಂದರೆ ರಷ್ಯಾದ ಕವಿ ಅಲೆಕ್ಸಾಂಡರ್ ಪುಷ್ಕಿನ್ರ ಕವಿತೆಗಳನ್ನು ಉಲ್ಲೇಖಿಸಿ, ಈ ಸಾಲುಗಳನ್ನು ಬರೆದಿದ್ದಾರೆ.
Ты, бесенок, еще молоденек,
Со мною тягаться слабенек;
Это было б лишь времени трата.
Обгони-ка сперва моего брата.А. С. Пушкин “Сказка о Попе и работнике его Балде” https://t.co/KuR328iH20
— РОГОЗИН (@Rogozin) March 14, 2022
ಡಿಮಿಟ್ರಿ ರೊಗೊಝಿನ್ ಅವರಿಗೆ ಪ್ರತಿಕ್ರಿಯೆ ನೀಡಿದ ಎಲಾನ್ ಮಸ್ಕ್ ಮತ್ತೊಂದು ಟ್ವೀಟ್ ಮಾಡಿ, ಮೀಮ್ವೊಂದನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅಂಗಿಬಿಚ್ಚಿಕೊಂಡು ಕರಡಿ ಮೇಲೆ ಕುಳಿತಿದ್ದರೆ, ಎಲಾನ್ ಮಸ್ಕ್ ಬೆಂಕಿಯುಗುಳುವ ಆಯುಧವನ್ನು ಹಿಡಿದಿರುವುದನ್ನು ನೋಡಬಹುದು. ಈ ಫೋಟೋವನ್ನು ಡಿಮಿಟ್ರಿ ಅವರನ್ನು ಉಲ್ಲೇಖಿಸಿ ಪೋಸ್ಟ್ ಮಾಡಿದ ಮಸ್ಕ್, ನಿಮ್ಮೊಂದಿಗೆ ಸಂಧಾನ ತುಂಬ ಕಠಿಣ ಎಂಬುದು ನನಗೆ ಗೊತ್ತಿದೆ, ನೀವು ಯುದ್ಧ ವೀಕ್ಷಿಸಬಹುದು, ಅದಕ್ಕಾಗಿ ಶೇ.10ರಷ್ಟು ಜಾಸ್ತಿ ಹಣವನ್ನೂ ಪಾವತಿಸಬಹುದು ಎಂದೂ ಹೇಳಿದ್ದಾರೆ.
I see you are a tough negotiator!
Ok, you can have 10% more pay per view money. pic.twitter.com/Nrbkz9IsTP
— Elon Musk (@elonmusk) March 15, 2022
ಎಲಾನ್ ಮಸ್ಕ್ ಉಕ್ರೇನ್ಗೆ ನೆರವು ನೀಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಸ್ಟಾರ್ಲಿಂಕ್ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಯನ್ನು ಉಕ್ರೇನ್ಗೆ ನೀಡಿದ್ದರು. ಅಂದು ಟ್ವೀಟ್ ಮಾಡಿದ್ದ ಎಲಾನ್ ಮಸ್ಕ್, ಉಕ್ರೇನ್ನಲ್ಲಿ ಸದ್ಯ ಸ್ಟಾರ್ಲಿಂಕ್ ಇಂಟರ್ನೆಟ್ ಸಕ್ರಿಯವಾಗಿದೆ. ಇನ್ನೂ ಹಲವು ಸೇವೆಗಳನ್ನು ಅಲ್ಲಿ ಸಕ್ರಿಯಗೊಳಿಸಲಾಗುವುದು ಎಂದು ಹೇಳಿದ್ದರು. ಸ್ಟಾರ್ಲಿಂಕ್ ಎಂಬುದು ಸುಮಾರು 2 ಸಾವಿರ ಉಪಗ್ರಹಗಳ ಪುಂಜವಾಗಿದ್ದು, ಭೂಮಿಯಾದ್ಯಂತ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ನೀಡುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸುತ್ತದೆ.
(ಇಲ್ಲಿ ಎಲಾನ್ ಮಸ್ಕ್ ಶೇರ್ ಮಾಡಿರುವ, ಪುಟಿನ್ ಅಂಗಿ ಬಿಚ್ಚಿಕೊಂಡು ಕರಡಿ ಮೇಲೆ ಕುಳಿತಿರುವ ಫೋಟೋ ನೈಜವಾದದ್ದಲ್ಲ. ಇದು ಗ್ರಾಫಿಕ್ನಿಂದ ಸೃಷ್ಟಿಸಿದ್ದು ಎಂಬುದು ಹಲವು ಪ್ರಮುಖ ಮಾಧ್ಯಮಗಳ ಫ್ಯಾಕ್ಟ್ಚೆಕ್ನಿಂದ ಬಹಿರಂಗವಾಗಿದೆ)
ಇದನ್ನೂ ಓದಿ: ನಾವೆಲ್ಲ ಮೊದಲಿನ ಹಾಗೆಯೇ ಪ್ರೀತಿ-ವಿಶ್ವಾಸದಿಂದ ಒಟ್ಟಾಗಿ ಜೀವಿಸೋಣ ಎಂದರು ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್