ಮೆನುವಿನಲ್ಲಿ ಬೀಫ್‌ ರೆಸಿಪಿ ಹೆಸರು ನೋಡಿ ರೆಸ್ಟೋರೆಂಟ್ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಹಕರು; ವಿಡಿಯೋ ವೈರಲ್‌

ಕ್ಷುಲ್ಲಕ ಕಾರಣಗಳಿಗೆ ಗ್ರಾಹಕರು ಮತ್ತು ರೆಸ್ಟೋರೆಂಟ್‌ ಸಿಬ್ಬಂದಿಗಳ ನಡುವೆ ಜಗಳಗಳು ಏರ್ಪಡುವಂತಹ ಘಟನೆಗಳ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಇಲ್ಲೊಂದು ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಮೆನುವಿನಲ್ಲಿ ಗೋಮಾಂಸ ರೆಸಿಪಿಯ ಹೆಸರಿತ್ತು ಎಂಬ ಕಾರಣಕ್ಕೆ ಗ್ರಾಹಕರ ಗುಂಪು ರೆಸ್ಟೋರೆಂಟ್ ಮಾಲೀಕನ ಮೇಲೆ ಹಲ್ಲೆಯನ್ನು ನಡೆಸಿದ್ದಾರೆ. ಈ ಕುರಿತ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಮೆನುವಿನಲ್ಲಿ ಬೀಫ್‌ ರೆಸಿಪಿ ಹೆಸರು ನೋಡಿ ರೆಸ್ಟೋರೆಂಟ್ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಹಕರು; ವಿಡಿಯೋ ವೈರಲ್‌
ವೈರಲ್​ ವಿಡಿಯೋ
Edited By:

Updated on: Jan 06, 2025 | 5:10 PM

ಆರ್ಡರ್‌ ಕೊಡುವುದು ತಡ ಮಾಡಿದ್ದಕ್ಕೆ, ಚಿಲ್ಲರೆ ಹಣದ ವಿಚಾರವಾಗಿ ಹೀಗೆ ಕೆಲವೊಂದು ಸಣ್ಣಪುಟ್ಟ ವಿಚಾರಗಳಿಗೆ ಗ್ರಾಹಕರು ಮತ್ತು ರೆಸ್ಟೋರೆಂಟ್‌ ಸಿಬ್ಬಂದಿಗಳ ನಡುವೆ ಜಗಳಗಳು ಏರ್ಪಡುತ್ತಿರುತ್ತವೆ. ಇಂತಹ ಘಟನೆಗಳಿಗೆ ಸಂಬಂಧಿಸಿದ ಸುದ್ದಿಗಳು ಆಗಾಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಕಾಣಸಿಗುತ್ತಿರುತ್ತವೆ. ಇದೀಗ ಇಲ್ಲೊಂದು ಇಂತಹ ಘಟನೆಯೊಂದು ನಡೆದಿದ್ದು, ಮೆನುವಿನಲ್ಲಿ ಬೀಫ್‌ ರೆಸಿಪಿ ಹೆಸರಿತ್ತು ಎಂಬ ಕಾರಣಕ್ಕೆ ಕೋಪಗೊಂಡ ಗ್ರಾಹಕರ ಗುಂಪು ರೆಸ್ಟೋರೆಂಟ್ ಮಾಲೀಕನ ಮೇಲೆ ಹಲ್ಲೆಯನ್ನು ನಡೆಸಿದ್ದಾರೆ. ಈ ಭೀಕರ ಹಲ್ಲೆಗೆ ಸಂಬಂಧಿಸಿದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಇಂಗ್ಲೆಂಡಿನ ಶೆಫೀಲ್ಡ್‌ನ ರೆಸ್ಟೋರೆಂಟ್ ಒಂದರಲ್ಲಿ ಬೀಫ್‌ ಖಾದ್ಯದ ವಿಚಾರವಾಗಿ ಮಾಲೀಕ ಮತ್ತು ಗ್ರಾಹಕರ ತಂಡದ ನಡುವೆ ಮಾರಾಮಾರಿ ಏರ್ಪಟ್ಟಿದೆ. ಇಲ್ಲಿನ ಅಬ್ಬಾಸಿನ್‌ ಡಿನ್ನರ್‌ ರೆಸ್ಟೋರೆಂಟ್‌ಗೆ ಊಟಕ್ಕೆಂದು ಬಂದ ಭಾರತೀಯ ಮೂಲದ ಗ್ರಾಹಕರು ಮೆನುವಿನಲ್ಲಿ ಬೀಫ್‌ ಖಾದ್ಯಗಳ ಹೆಸರನ್ನು ಕಂಡು ಕೋಪಗೊಂಡು ಮಾಲೀಕ ಮಹಮ್ಮದ್‌ ಉಲ್ಲಾ ಮೇಲೆ ಹಲ್ಲೆ ನಡೆಸಿದ್ದಾರೆ.

ದಿ ಸ್ಟಾರ್‌ ವರದಿಯ ಪ್ರಕಾರ, ಈ ಘಟನೆ ಆಗಸ್ಟ್‌ 22-22, 2024 ರ ಮಧ್ಯರಾತ್ರಿಯಲ್ಲಿ ನಡೆದಿದ್ದು, ನಂತರ ಪೊಲೀಸರು ತನಿಖೆಯನ್ನು ಆರಂಭಿಸಿ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ಜೊತೆಗೆ ರೆಸ್ಟೋರೆಂಟ್‌ ಹಾನಿ ಮಾಡಿದ್ದಕ್ಕಾಗಿ ಹಲ್ಲೆಕೋರರು 2 ಲಕ್ಷ ರೂಪಾಯಿ ಪರಿಹಾರ ಕೊಡಬೇಕೆಂದು ರೆಸ್ಟೋರೆಂಟ್‌ ಮಾಲೀಕ ಕೇಳಿಕೊಂಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ:

ಮೂರಕ್ಕಿಂತ ಹೆಚ್ಚು ಜನರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಜೊತೆಗೆ ರೆಸ್ಟೋರೆಂಟ್‌ಗೂ ಹಾನಿಯನ್ನು ಮಾಡಿದ್ದಾರೆ. ಇದರ ಖರ್ಚು ಸುಮಾರು 2 ಲಕ್ಷದಷ್ಟಿರಬಹುದು ಎಂದು ರೆಸ್ಟೋರೆಂಟ್‌ ಮಾಲೀಕ ಮೊಹಮ್ಮದ್‌ ಉಲ್ಲಾ ʼದಿ ಸ್ಟಾರ್‌ʼಗೆ ತಿಳಿಸಿದ್ದಾರೆ. The Resonance ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ರೆಸ್ಟೋರೆಂಟ್‌ ಮಾಲೀಕನಿಗೆ ಗ್ರಾಹಕರ ತಂಡವೊಂದು ಹಿಗ್ಗಾಮುಗ್ಗಾ ಥಳಿಸುತ್ತಿರುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದಲ್ಲಿ ರೈಲು ತಡೆಗೋಡೆಯ ನಡುವೆ ಸಿಲುಕಿದ ದೈತ್ಯ ಆನೆ; ಹೇಗಿತ್ತು ನೋಡಿ ರಕ್ಷಣಾ ಕಾರ್ಯ

ಜನವರಿ 3 ರಂದು ಹಂಚಿಕೊಳ್ಳಲಾದ ಈ ವಿಡಿಯೋ 7.9 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹೀಗೆಲ್ಲಾ ಹಲ್ಲೆ ನಡೆಸುವುದು ಎಷ್ಟು ಸರಿʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಕೆಲವರು ಗ್ರಾಹರು ಮಾಡಿದ್ದು ಉತ್ತಮ ಕೆಲಸವೆಂದು ಅವರ ಪರ ಬ್ಯಾಟಿಂಗ್‌ ಬೀಸಿದರೆ, ಇನ್ನೂ ಕೆಲವರು ಗ್ರಾಹಕರು ಹಲ್ಲೆ ನಡೆಸಬಾರದಿತ್ತು ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ