ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದಲ್ಲಿ ರೈಲು ತಡೆಗೋಡೆಯ ನಡುವೆ ಸಿಲುಕಿದ ದೈತ್ಯ ಆನೆ; ಹೇಗಿತ್ತು ನೋಡಿ ರಕ್ಷಣಾ ಕಾರ್ಯ
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಹಳ್ಳಿ ವ್ಯಾಪ್ತಿಯಲ್ಲಿ ರೈಲು ತಡೆಗೋಡೆ ದಾಟುವ ಸಂದರ್ಭದಲ್ಲಿ ಆನೆಯೊಂದು ತಡೆಗೊಡೆಯ ಮಧ್ಯೆ ಸಿಲುಕಿ ಪ್ರಾಣ ರಕ್ಷಣೆಗಾಗಿ ಒದ್ದಾಡಿದಂತಹ ಘಟನೆ ನಡೆದಿದೆ. ಸದ್ಯ ಆನೆಯನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದ್ದು, ಗಜರಾಜನ ರಕ್ಷಣಾ ಕಾರ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
2018 ನೇ ಇಸವಿಯಲ್ಲಿ ಗಂಡಾನೆಯೊಂದು ರೈಲ್ವೆ ತಡೆಗೋಡೆಗೆ ಸಿಲುಕಿ ಸಾವನ್ನಪ್ಪಿದ ದಾರುಣ ಘಟನೆಯೊಂದು ನಡೆದಿತ್ತು. ಇದೀಗ ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಬೇಲಿ ದಾಟುವ ಸಂದರ್ಭದಲ್ಲಿ ಆನೆಯೊಂದು ತಡೆಗೋಡೆಯ ನಡುವೆ ಸಿಲುಕಿ ಒದ್ದಾಡಿದೆ. ವಿಷಯ ಗೊತ್ತಾದ ಕೂಡಲೇ ಅರಣ್ಯಾಧಿಕಾರಿಗಳು ಬಂದು ಜೆಸಿಬಿಯ ಸಹಾಯದಿಂದ ತಡೆಗೋಡೆಯ ಒಂದು ಕಂಬವನ್ನು ಕೆಡವುವ ಮೂಲಕ ಆನೆಯನ್ನು ರಕ್ಷಿಸಿದ್ದಾರೆ. ನಂತರ ಆನೆ ಸುರಕ್ಷಿತವಾಗಿ ಕಾಡಿಗೆ ತಲುಸಿದ್ದು, ಗಜರಾಜನ ರಕ್ಷಣಾ ಕಾರ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಭಾನುವಾರ (ಜನವರಿ 05) ಹುಣಸೂರಿನ ನಾಗರಹೊಳೆ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ವೀರನಹೊಸಳ್ಳಿ ವ್ಯಾಪ್ತಿಯ ಬಳಿ ಈ ಘಟನೆ ನಡೆದಿದೆ. ಮುಂಜಾನೆ ಸುಮಾರು 5:45 ರಿಂದ 6:00 ಗಂಟೆಯ ಸುಮಾರಿಗೆ ದೈತ್ಯ ಆನೆ ತಡೆಗೋಡೆಗಳ ನಡುವೆ ಸಿಲುಕಿದ ಮಾಹಿತಿ ಸಿಕ್ಕಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಜೆಸಿಬಿ ಸಹಾಯದಿಂದ ತಡೆಗೋಡೆಯ ಒಂದು ಕಂಬವನ್ನು ಕೆಡವುವ ಮೂಲಕ ಆನೆಯನ್ನು ರಕ್ಷಣೆ ಮಾಡಿದ್ದಾರೆ. ನಂತರ ಆನೆ ಅಲ್ಲಿಂದ ಓಡಿ ಹೋಗಿದೆ. ಜೊತೆಗೆ ಯಾವುದೇ ಗಾಯಗಳಾಗಿಲ್ಲ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಆನೆಯೊಂದು ರೈಲು ತಡೆಗೋಡೆಯ ಮಧ್ಯೆ ಸಿಲುಕಿ ಒದ್ದಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ನಂತರ ತಡೆಯೋಡೆಯ ಒಂದು ಕಂಬವನ್ನು ಜಿಸಿಬಿ ಸಹಾಯದಿಂದ ಕೆಡವುತ್ತಿದ್ದಂತೆ ತನ್ನನ್ನು ತಾನು ಬಿಡಿಸಿಕೊಂಡು ಅಲ್ಲಿಂದ ಆನೆ ಸೀದಾ ಓಡಿ ಹೋಗಿದೆ.
ಇದನ್ನೂ ಓದಿ: ಚಳಿಯಲ್ಲಿ ನಡುಗಿ ಹೋಗಿದ್ದ ನಾಯಿ ಮರಿಗಳಿಗಾಗಿ ಬೆಂಕಿ ಕಾಯಿಸಿದ ಯುವಕ; ಮುದ್ದಾದ ದೃಶ್ಯ ವೈರಲ್
ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಅರಣ್ಯ ಪ್ರದೇಶದ ಗಡಿ ಭಾಗಗಳಲ್ಲಿ ರೈಲು ತಡೆಗೋಡೆಯನ್ನು ನಿರ್ಮಿಸಲಾಗಿದ್ದು, ಈ ಹಿಂದೆಯೂ ಆನೆಗಳು ಈ ತಡೆಗೋಡೆಯ ನಡುವೆ ಸಿಲುಕಿದ ಹಾಗೂ ಇದರಿಂದ ಸಾವನ್ನಪ್ಪಿದ ಘಟನೆಗಳು ನಡೆದಿವೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ