AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಮನಬಿಲ್ಲಿನ ಬಣ್ಣಕ್ಕೆ ತಿರುಗಿದ ನೀಲಗಿರಿ ಮರದ ತೊಗಟೆ: ಫೋಟೋ ನೋಡಿ ಅಚ್ಚರಿಗೊಂಡ ನೆಟ್ಟಿಗರು

ನೀಲಗಿರಿ ಮರಗಳು ಕಾಮನಬಿಲ್ಲಿನ ಬಣ್ಣದ ತೊಗಟೆಯನ್ನು ಹೊಂದಿರುವ ಫೋಟೋ ಸಾಮಾಜಿಕ  ಜಾಲತಾಣದಲ್ಲಿ ವೈರಲ್​ ಆಗಿದೆ. ಐಎಫ್​ಎಸ್​ ಅಧಿಕಾರಿ ಸುಸಾಂತ್​ ನಂದ ಅವರು ಇದರ ಫೋಟೋವನ್ನು ಹಂಚಿಕೊಂಡಿದ್ದಾರೆ.

ಕಾಮನಬಿಲ್ಲಿನ ಬಣ್ಣಕ್ಕೆ ತಿರುಗಿದ ನೀಲಗಿರಿ ಮರದ ತೊಗಟೆ: ಫೋಟೋ ನೋಡಿ ಅಚ್ಚರಿಗೊಂಡ ನೆಟ್ಟಿಗರು
ನೀಲಗಿರಿ ಮರ
TV9 Web
| Updated By: Pavitra Bhat Jigalemane|

Updated on:Mar 17, 2022 | 3:40 PM

Share

ಪ್ರಕೃತಿ ಸದಾ ಸೋಜಿಗದ ತಾಣ. ಒಂದಲ್ಲ ಒಂದು ವಿಸ್ಮಯವನ್ನು ತನ್ನೊಳಗಿಟ್ಟುಕೊಂಡು ಅಚ್ಚರಿಯನ್ನು ಉಂಟುಮಾಡುತ್ತದೆ. ಇದೀಗ ನೀಲಗಿರಿ ಮರಗಳು (Eucalyptus Tree) ಕಾಮನಬಿಲ್ಲಿನ ಬಣ್ಣದ ತೊಗಟೆಯನ್ನು ಹೊಂದಿರುವ ಫೋಟೋ ಸಾಮಾಜಿಕ  ಜಾಲತಾಣದಲ್ಲಿ ವೈರಲ್​ ಆಗಿದೆ. ಐಎಫ್​ಎಸ್​ ಅಧಿಕಾರಿ ಸುಸಾಂತ್​ ನಂದ ಅವರು ಇದರ ಫೋಟೋವನ್ನು ಹಂಚಿಕೊಂಡಿದ್ದಾರೆ. ನೀಲಗಿರ ಮರವೊಂದು ಕಾಮನಬಿಲ್ಲಿನ ಬಣ್ಣವನ್ನು ಹೊಂದಿರುವುದು ಸದ್ಯ ನೆಟ್ಟಿಗರನ್ನು ಅಚ್ಚರಿಗೊಳಿಸಿದೆ. ನೈಜವಾಗಿಯೂ ಮರ ಅದೇ ರೀತಿ ಇದೆ ಎಂದು ಹೇಳಲಾಗಿದೆ.

ಫೋಟೋ ಹಂಚಿಕೊಂಡ ಸುಸಾಂತ್​ ಅವರು  ಕಾಮನಬಿಲ್ಲಿನಂತೆ ಕಾಣುವ ನೀಲಗಿರಿ ಮರವು ಉತ್ತರ ಗೋಳಾರ್ಧದಲ್ಲಿ ಸ್ಥಳೀಯವಾಗಿರುವ ಏಕೈಕ ನೀಲಗಿರಿ ಮರವಾಗಿದೆ. ಇದು ವಿಶ್ವದ ಅತ್ಯಂತ ವರ್ಣರಂಜಿತ ಮರವಾಗಿದೆ. ಪ್ರತಿ ಋತುವಿನ ಅಂತ್ಯದಲ್ಲಿಯೂ ತೊಗಟೆಯು ಸಿಪ್ಪೆ ಸುಲಿಯುವುದರಿಂದ ಮಳೆಬಿಲ್ಲಿನಂತೆ ಕಾಣುತ್ತದೆ, ಇದು ಕೆಳಗಿನ ತಾಜಾ, ಗಾಢ ಬಣ್ಣದ ತೊಗಟೆಯನ್ನು ಬಹಿರಂಗಪಡಿಸುತ್ತದೆಎಂದು ಪೋಸ್ಟ್‌ನ ಕ್ಯಾಪ್ಷನ್​ನಲ್ಲಿ ಕಾಮನಬಿಲ್ಲಿನ ನೀಲಗಿರಿ ಮರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸುಂದರವಾದ ಮರವನ್ನು ನೋಡಿ ನೆಟ್ಟಿಗರು ವಿಸ್ಮಯಗೊಂಡಿದ್ದಾರೆ. ಇದನ್ನು ಪ್ರಕೃತಿಯ ವಿಶಿಷ್ಟ ಚಿತ್ರ ಎಂದು ಕರೆದಿದ್ದಾರೆ. ಕಾಮನಬಿಲ್ಲಿನ ಯೂಕಲಿಪ್ಟಸ್​ ಮರಗಳು ತಗ್ಗು ಪ್ರದೇಶ ಮಳೆಕಾಡಿನಲ್ಲಿ ಸಮುದ್ರ ಮಟ್ಟದಿಂದ 1,800 ಮೀ (5,900 ಅಡಿ) ಎತ್ತರದಲ್ಲಿ ಬೆಳೆಯುತ್ತದೆ. ಇದು ಇಂಡೋನೇಷ್ಯಾ, ಪಪುವಾ ನ್ಯೂ ಗಿನಿಯಾ ಮತ್ತು ಫಿಲಿಪೈನ್ಸ್‌ಗೆ ಸ್ಥಳೀಯವಾಗಿದೆ, ಆದರೆ ಅನೇಕ ಇತರ ದೇಶಗಳಲ್ಲಿ ವ್ಯಾಪಕವಾಗಿ ನೆಡಲಾಗಿದೆ.

ಇದನ್ನೂ ಓದಿ:

Viral Video: ಮೂರು ನಾಗರ ಹಾವುಗಳೊಂದಿಗೆ ಯುವಕನ ಸಾಹಸ: ಸಿಟ್ಟಿಗೆದ್ದು ಕಚ್ಚಿದ ಹಾವು

Published On - 3:40 pm, Thu, 17 March 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?