Video: ವಿಮಾನ ಅಪಘಾತದಲ್ಲಿ ಎಲ್ಲವೂ ಸುಟ್ಟು ಕರಕಲಾದರೂ ಭಗವದ್ಗೀತೆಗೆ ಏನು ಆಗಿಲ್ಲ ನೋಡಿ

ಅಹ್ಮದಾಬಾದ್‌ನಿಂದ ಲಂಡನ್‌ನ ಗ್ಯಾಟ್‌ವಿಕ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ಗುರುವಾರ ಪತನಗೊಂಡಿದೆ. ಈ ದುರಂತಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೀಗ ವಿಮಾನ ದುರಂತ ನಡೆದ ಸ್ಥಳಕ್ಕೆ ಸಂಬಂಧಪಟ್ಟ ದೃಶ್ಯ ಎನ್ನಲಾಗುತ್ತಿರುವ ವಿಡಿಯೋವೊಂದು ವೈರಲ್‌ ಆಗುತ್ತಿದ್ದು, ಅಪಘಾತದಲ್ಲಿ ಎಲ್ಲವೂ ಸುಟ್ಟುಕರಕಲಾದರೂ, ಆ ಅವಶೇಷಗಳ ಅಡಿಯಲ್ಲಿ ಭಗವದ್ಗೀತೆಯೊಂದು ಪತ್ತೆಯಾಗಿದೆ. ಈ ದೃಶ್ಯವನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.

Video: ವಿಮಾನ ಅಪಘಾತದಲ್ಲಿ ಎಲ್ಲವೂ ಸುಟ್ಟು ಕರಕಲಾದರೂ ಭಗವದ್ಗೀತೆಗೆ ಏನು ಆಗಿಲ್ಲ ನೋಡಿ
ಅವಶೇಷದ ಅಡಿಯಲ್ಲಿ ಸುರಕ್ಷಿತವಾಗಿ ಪತ್ತೆಯಾದ ಭಗವದ್ಗೀತೆ
Image Credit source: Instagram

Updated on: Jun 13, 2025 | 10:36 AM

ಸುಮಾರು 242 ಪ್ರಯಾಣಿಕರಿದ್ದ ಏರ್‌ ಇಂಡಿಯಾ ವಿಮಾನ ಗುಜರಾತಿನ ಅಹ್ಮದಾಬಾದ್‌ನಲ್ಲಿ ಪತನಗೊಂಡಂತಹ (Plane Crash) ಆಘಾತಕಾರಿ ಘಟನೆ ಗುರುವಾರ ಸಂಭವಿಸಿದೆ. ಈ ಅಪಘಾತವನ್ನು ವಿಮಾನ ಅಪಘಾತಗಳ ಇತಿಹಾಸದಲ್ಲೇ ಅತ್ಯಂತ ದೊಡ್ಡ ಅಪಘಾತವೆಂದು ಪರಿಗಣಿಸಲಾಗಿದೆ. ದುರಂತದಲ್ಲಿ ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ ಸೇರಿದಂತೆ ಒಟ್ಟು 246 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಈ ಅಪಘಾತದಲ್ಲಿ ಎಲ್ಲವೂ ಸುಟ್ಟು ಭಸ್ಮವಾಗಿದ್ದು, ಇದಕ್ಕೆ ಸಂಬಂಧಪಟ್ಟ ಆಘಾತಕಾರಿ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇನ್ನೂ ಈ ಅಪಘಾತ ಸಂಭವಿಸಿದ ಸ್ಥಳದಲ್ಲಿನ  ರಕ್ಷಣಾ ಕಾರ್ಯಾಚರಣೆಯ ವೇಳೆ ಅವಶೇಷಗಳ ಅಡಿಯಲ್ಲಿ ಭಗವದ್ಗೀತೆಯೊಂದು (Bhagavad gita) ಸಿಕ್ಕಿದ್ದು, ಎಲ್ಲವೂ ಸುಟ್ಟುಕರಕಲಾದರೂ ಈ ಭಗವದ್ಗೀತೆಯ ಪುಸ್ತಕ ಮಾತ್ರ ಏನು ಆಗಯೇ ಇದ್ದಿದ್ದನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.

ಅವಶೇಷಗಳ ಅಡಿಯಲ್ಲಿ ಪತ್ತೆಯಾದ ಭಗವದ್ಗೀತೆ:

ವಿಮಾನ ಪತನವಾದ ಸ್ಥಳಕ್ಕೆ ಸಂಬಂಧಪಟ್ಟ ದೃಶ್ಯವೆಂದು ಹೇಳಲಾಗುತ್ತಿರುವ ವಿಡಿಯೋವೊಂದು ವೈರಲ್‌ ಆಗುತ್ತಿದ್ದು, ವಿಮಾನ ಪತನದ ನಂತರ ಭಾರೀ ಬೆಂಕಿ ಹೊತ್ತಿಕೊಂಡು ಎಲ್ಲವೂ ಸುಟ್ಟು ಕರಕಲಾದರೂ ಅಲ್ಲಿದ್ದ ಭಗವದ್ಗೀತೆಯೊಂದು ಹಾಗೆಯೇ ಇತ್ತು. ಸುಟ್ಟುಕರಕಲಾದ ಅವಶೇಷಗಳ ಅಡಿಯಲ್ಲಿ ಭಗವದ್ಗೀತೆ ಸುರಕ್ಷಿತವಾಗಿ ಪತ್ತೆಯಾಗಿದ್ದು,  ಇದರ ಸತ್ಯಾಸತ್ಯತೆಯ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ
ಪ್ರಾಮಾಣಿಕತೆಗೆ ಈ ಹಳ್ಳಿ ಹೆಸರುವಾಸಿ, ಇಲ್ಲಿ ಅಂಗಡಿಗಳಿಗೆ ಮಾಲೀಕರೇ ಇಲ್ಲ
ಈ ಚಿತ್ರದಲ್ಲಿ ಬಾಲವಿಲ್ಲದ ಕುದುರೆ ಎಲ್ಲಿದೆ ಎಂದು ಹೇಳಬಲ್ಲಿರಾ?
ಮರದ ಬುಡದಿಂದ ಚಿಮ್ಮಿದ ನೀರು ಕಂಡು ಪೂಜೆ ಮಾಡಿದ ಸ್ಥಳೀಯರು
ಹನುಮಾನ್ ಭಕ್ತರೊಬ್ಬರ ಅಂತ್ಯಕ್ರಿಯೆಗೆ ಬಂದ ಕೋತಿ

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವನ್ನು amdavad.clicks ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದ್ದು, “ವಿಮಾನ ಅಪಘಾತದಲ್ಲಿ ಎಲ್ಲವೂ ನಾಶವಾಯಿತು ಆದರೆ ಭಗವದ್ಗೀತೆ ಒಳಗಿನಿಂದ ಹಾಗೆಯೇ ಇತ್ತು” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಕಾರ್ಯಾಚರಣೆಯ ವೇಳೆ ಸಿಕ್ಕ ಭಗವದ್ಗೀತೆ ಪುಸ್ತಕವನ್ನು ವ್ಯಕ್ತಿಯೊಬ್ಬರು ತೆರೆದು ತೋರಿಸುತ್ತಿರುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಮರದ ಬುಡದಿಂದ ಚಿಮ್ಮಿದ ನೀರು, ದೈವಿಕ ಮರ ಎಂದ ಸ್ಥಳೀಯರು, ಅಸಲಿ ವಿಚಾರ ಇಲ್ಲಿದೆ ನೋಡಿ

ಜೂನ್‌ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.1 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ದೃಶ್ಯವನ್ನು ಕಂಡು ನೋಡುಗರು ಆಶ್ಚರ್ಯಚಕಿತರಾಗಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:35 am, Fri, 13 June 25