Fact Check: ನಿಮ್ರತ್ ಕೌರ್ ಜೊತೆಗಿನ ಸಂಬಂಧವನ್ನು ದೃಢಪಡಿಸಿದ ಅಭಿಷೇಕ್ ಬಚ್ಚನ್?: ವೈರಲ್ ಫೋಟೋದ ನಿಜಾಂಶ ಇಲ್ಲಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 18, 2024 | 10:21 AM

ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೈರಲ್ ಪೋಸ್ಟ್ ಅನ್ನು ಹಂಚಿಕೊಂಡು, "ಮಾಜಿ ಪತ್ನಿ ಐಶ್ವರ್ಯಾ ರೈ ಅವರಿಂದ ಬೇರ್ಪಟ್ಟ ನಂತರ, ಅಭಿಷೇಕ್ ಬಚ್ಚನ್ ನಿಮ್ರತ್ ಕೌರ್ ಅವರೊಂದಿಗಿನ ಸಂಬಂಧವನ್ನು ದೃಢೀಕರಿಸಿದ್ದಾರೆ" ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

Fact Check: ನಿಮ್ರತ್ ಕೌರ್ ಜೊತೆಗಿನ ಸಂಬಂಧವನ್ನು ದೃಢಪಡಿಸಿದ ಅಭಿಷೇಕ್ ಬಚ್ಚನ್?: ವೈರಲ್ ಫೋಟೋದ ನಿಜಾಂಶ ಇಲ್ಲಿದೆ
Follow us on

ಸಾಮಾಜಿಕ ಮಾಧ್ಯಮದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳ ಕಳೆದ ಕೆಲವು ತಿಂಗಳುಗಳಿಂದ ಕೇಳಿ ಬರುತ್ತಲೇ ಇದೆ. ಅನಂತ್-ರಾಧಿಕಾ ಮದುವೆಗೆ ಐಶ್ವರ್ಯಾ-ಅಭಿಷೇಕ್ ಪ್ರತ್ಯೇಕವಾಗಿ ಆಗಮಿಸಿದ್ದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿತು. ಇದಾದ ನಂತರ ಒಂದೋ ಎರಡೋ ಬಾರಿ ಬಿಟ್ಟರೆ ಇವರಿಬ್ಬರೂ ಒಟ್ಟಿಗೆ ಕಾಣಿಸಲೇ ಇಲ್ಲ. ಇದರ ನಡುವೆ, ಅಭಿಷೇಕ್ ಮತ್ತು ನಿಮ್ರತ್ ಕೌರ್ ಅವರ ಫೋಟೋ ಇಂಟರ್ನೆಟ್​ನಲ್ಲಿ ವೈರಲ್ ಆಗುತ್ತಿದೆ. ಚಿತ್ರದಲ್ಲಿ, ನಿಮ್ರತ್ ಕೌರ್ ಸಿಂಧೂರ ಧರಿಸಿ ಅಭಿಷೇಕ್ ಬಚ್ಚನ್ ಜೊತೆ ನಿಂತಿರುವುದನ್ನು ಕಾಣಬಹುದು.

ವೈರಲ್ ಆಗುತ್ತಿರುವುದು ಏನು?

ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೈರಲ್ ಪೋಸ್ಟ್ ಅನ್ನು ಹಂಚಿಕೊಂಡು, “ಮಾಜಿ ಪತ್ನಿ ಐಶ್ವರ್ಯಾ ರೈ ಅವರಿಂದ ಬೇರ್ಪಟ್ಟ ನಂತರ, ಅಭಿಷೇಕ್ ಬಚ್ಚನ್ ನಿಮ್ರತ್ ಕೌರ್ ಅವರೊಂದಿಗಿನ ಸಂಬಂಧವನ್ನು ದೃಢೀಕರಿಸಿದ್ದಾರೆ” ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ವೈರಲ್ ಈ ಪೋಸ್ಟ್ ಸುಳ್ಳು ಎಂದು ಕಂಡುಹಿಡಿದಿದೆ. ಅಭಿಷೇಕ್ ಬಚ್ಚನ್ ಮತ್ತು ನಿಮ್ರತ್ ಕೌರ್ ಅವರ ವೈರಲ್ ಚಿತ್ರವನ್ನು ಎಡಿಟ್ ಮಾಡಲಾಗಿದೆ. ಮೂಲ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಅವರೊಂದಿಗೆ ಐಶ್ವರ್ಯಾ ರೈ ಇದ್ದಾರೆ. ಇಬ್ಬರೂ ಸುಮಾರು ಒಂದು ವರ್ಷದ ಹಿಂದೆ ನಿರ್ಮಾಪಕ ಸುಭಾಷ್ ಘಾಯ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಆ ಸಮಯದಲ್ಲಿ ತೆಗೆದ ಫೋಟೋವನ್ನು ಈಗ ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ.

ನಿಜಾಂಶವನ್ನು ತಿಳಿಯಲು, ನಾವು ಗೂಗಲ್ ರಿವರ್ಸ್ ಇಮೇಜ್ ಮೂಲಕ ಫೋಟೋವನ್ನು ಹುಡುಕಿದೆವು. ಆಗ ಟಿವಿ9 ಹಿಂದಿ ವೆಬ್‌ಸೈಟ್‌ನಲ್ಲಿನ ವರದಿಯಲ್ಲಿ ನಾವು ಮೂಲ ಫೋಟೋ ಕಂಡುಕೊಂಡಿದ್ದೇವೆ. ವರದಿಯನ್ನು 24 ಜನವರಿ 2023 ರಂದು ಪ್ರಕಟಿಸಲಾಗಿದೆ. ವರದಿಯಲ್ಲಿರುವ ಮೂಲ ಚಿತ್ರದಲ್ಲಿ, ಅಭಿಷೇಕ್ ಬಚ್ಚನ್ ಜೊತೆಗೆ ನಿಮ್ರತ್ ಕೌರ್ ಇಲ್ಲ, ಬದಲಾಗಿ ಐಶ್ವರ್ಯಾ ರೈ ಇದ್ದಾರೆ. ಈ ಚಿತ್ರವು ನಿರ್ಮಾಪಕ ಸುಭಾಷ್ ಘಾಯ್ ಅವರ ಹುಟ್ಟುಹಬ್ಬದ ಸಂದರ್ಭ ತೆಗೆಯಲಾಗಿದೆ.

https://www.tv9hindi.com/entertainment/bollywood-news/subhash-ghai-bollywood-happy-birthday-celebration-salman-khan-aishwarya-rai-bachchan-abhishek-au569-1679306.html

ನಾವು ಸಂಬಂಧಿತ ಕೀವರ್ಡ್‌ಗಳ ಸಹಾಯದಿಂದ ಗೂಗಲ್​ನಲ್ಲಿ ಸರ್ಚ್ ಮಾಡಿದ್ದೇವೆ. ಆಗ ಸುಭಾಷ್ ಘಾಯ್ ಅವರ ಹುಟ್ಟುಹಬ್ಬದ ಪಾರ್ಟಿಯ ವಿಡಿಯೋವನ್ನು ನಾವು ‘ವೈರಲ್ ಬಾಲಿವುಡ್’ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಕಂಡುಕೊಂಡಿದ್ದೇವೆ. ಈ ವೀಡಿಯೊವನ್ನು 24 ಜನವರಿ 2023 ರಂದು ಅಪ್‌ಲೋಡ್ ಮಾಡಲಾಗಿದೆ. ಇದರಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಜೊತೆಯಲ್ಲಿದ್ದು, ವೈರಲ್ ಫೋಟೋದಲ್ಲಿ ಕಂಡುಬರುವ ಅದೇ ನೀಲಿ ನೆಕ್ ಸೂಟ್ ಅನ್ನು ಅವರು ಧರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ: ಬಿಯರ್‌ ಬಾಟಲ್‌ನಲ್ಲಿ ಪತ್ತೆಯಾಯ್ತು ಸತ್ತ ಹಲ್ಲಿ; ಕಿಕ್ಕೇರಿಸುವ ಮುನ್ನ ಜೋಪಾನ ಮದ್ಯ ಪ್ರಿಯರೇ….

ಹೀಗಾಗಿ ಅಭಿಷೇಕ್ ಬಚ್ಚನ್ ಮತ್ತು ನಿಮ್ರತ್ ಕೌರ್ ಅವರ ಸಂಬಂಧದ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಫೋಟೋ ಸುಳ್ಳು ಮತ್ತು ಇದನ್ನು ಎಡಿಟ್ ಮಾಡಲಾಗಿದೆ ಎಂದು ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ಕಂಡುಹಿಡಿದಿದೆ. ಮೂಲ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಅವರೊಂದಿಗೆ ಐಶ್ವರ್ಯಾ ರೈಯನ್ನು ಇದ್ದಾರೆ. ಇಬ್ಬರೂ ಸುಮಾರು ಒಂದು ವರ್ಷದ ಹಿಂದೆ ನಿರ್ಮಾಪಕ ಸುಭಾಷ್ ಘಾಯ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದಾಗ ತೆಗೆದ ಫೋಟೋ ಇದಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 6:12 pm, Tue, 29 October 24