ಭೂಮಿಗೆ ಮರಳಲು ರೂ.24 ಲಕ್ಷ ಬೇಕು; ಮಹಿಳೆಯನ್ನು ವಂಚಿಸಿದ ನಕಲಿ ಗಗನಯಾತ್ರಿ

| Updated By: ಶ್ರೀದೇವಿ ಕಳಸದ

Updated on: Oct 12, 2022 | 11:17 AM

Fake Astronaut Cons Woman : ‘ನಿನ್ನನ್ನು ತುಂಬಾ ಪ್ರೀತಿಸುತ್ತೇನೆ, ಭೂಮಿಗೆ ಬಂದತಕ್ಷಣ ಮದುವೆಯಾಗುತ್ತೇನೆ’ 65 ವರ್ಷದ ಜಪಾನಿ ಮಹಿಳೆಯನ್ನು ಭ್ರಮೆಗೆ ಕೆಡವಿ ಹಣ ವಂಚಿಸಿದ ನಕಲಿ ಗಗನಯಾತ್ರಿಯ ಕಥೆ ಇದು.

ಭೂಮಿಗೆ ಮರಳಲು ರೂ.24 ಲಕ್ಷ ಬೇಕು; ಮಹಿಳೆಯನ್ನು ವಂಚಿಸಿದ ನಕಲಿ ಗಗನಯಾತ್ರಿ
ಪ್ರಾತಿನಿಧಿಕ ಚಿತ್ರ
Follow us on

Trending : ತಾನೊಬ್ಬ ರಷ್ಯಾದ ಗಗನಯಾತ್ರಿ, ಭೂಮಿಗೆ ಹಿಂದಿರುಗಲು ರೂ. 24 ಲಕ್ಷದ ಅವಶ್ಯಕತೆ ಇದೆ ಎಂದು ಸುಳ್ಳು ಹೇಳಿ ಜಪಾನಿನ ಮಹಿಳೆಯೊಬ್ಬಳಿಗೆ ವಂಚಿಸಿದ ಘಟನೆ ನಡೆದಿದೆ. ಇಷ್ಟೇ ಅಲ್ಲ ಆ ನಕಲಿ ಗಗನಯಾತ್ರಿ ತಾನು ಭೂಮಿಗೆ ಬಂದ ತಕ್ಷಣ 65 ವರ್ಷದ ಆ ಮಹಿಳೆಯನ್ನು ಮದುವೆಯಾಗುವುದಾಗಿ ಮಾತು ಕೊಟ್ಟಿದ್ದಾನೆ. ಈ ಘಟನೆಯ ಕುರಿತು ಅಂತರ್ಜಾಲದಲ್ಲಿ ಬಹಳ ಚರ್ಚೆಯಾಗುತ್ತಿದೆ. ಆಗಾಗ ಸೋಶಿಯಲ್​ ಮೀಡಿಯಾದ ಫೇಕ್​ ಅಕೌಂಟುಗಳು ನಿಮ್ಮ ಅಕೌಂಟಿನ ಬಾಗಿಲು ತಟ್ಟುವುದು ನೆನಪಿಗೆ ಬರುತ್ತಿದೆಯಾ?

ಈ ನಕಲಿ ಗಗನಯಾತ್ರಿ ಮತ್ತು ಈ ಮಹಿಳೆಯ ಮಧ್ಯೆ ಸಂಪರ್ಕ ಏರ್ಪಟ್ಟಿದ್ದು ಇನ್​ಸ್ಟಾಗ್ರಾಂ ಮೂಲಕ. ತಾನು ಬಾಹ್ಯಾಕಾಶ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಆತ ನಂಬಿಸಿದ್ದಾನೆ. ಅದಕ್ಕೆ ಪೂರಕವಾಗಿ ತನ್ನ ಅಕೌಂಟಿನಲ್ಲಿ ಬಾಹ್ಯಾಕಾಶದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾನೆ. ಅಲ್ಲದೆ, ಮೊಬೈಲ್​ನಿಂದ ಸೀಮಿತ ವಲಯದ ತನಕ ಮಾತ್ರ ಸಂಪರ್ಕಿಸಲು ತನಗೆ ಸಾಧ್ಯ ಎಂದಿದ್ದಾನೆ.

ಜಪಾನೀಸ್ ಮೆಸೇಜಿಂಗ್ ಅಪ್ಲಿಕೇಶನ್ (LINE ನಲ್ಲಿ) ಪರಸ್ಪರ ಸಂದೇಶಗಳನ್ನು ರವಾನಿಸಿಕೊಂಡಿದ್ದಕ್ಕೆ ಪುರಾವಗಳಿವೆ. ‘ನಾನು ನಿನ್ನನ್ನು ಪ್ರೀತಿಸುತ್ತೇನೆ. ಇದು 1,000 ಸಲ ಹೇಳಿದರೂ ಸಾಕಾಗುವುದಿಲ್ಲ’ ಇದು ಅವನು ಕಳಿಸಿದ ಸಂದೇಶಗಳಲ್ಲಿ ಒಂದು. ಈ ವ್ಯಕ್ತಿ ಇದನ್ನು ಪದೇಪದೇ ಹೇಳಿ ಆಕೆಯನ್ನು ಮರಳು ಮಾಡಿದ್ದಾನೆ. ಪರಸ್ಪರ ಮದುವೆಯಾಗಿ ಜಪಾನಿನಲ್ಲಿ ಮುಂದಿನ ಜೀವನವನ್ನು ಪ್ರಾರಂಭಿಸೋಣ. ಸದ್ಯ ಲ್ಯಾಂಡಿಂಗ್​ ಫೀಸ್​ ಮತ್ತು ವಾಪಸ್​ ಬರಲು ರ್ಯಾಕೆಟ್​ನ ಖರ್ಚನ್ನು ನಿಭಾಯಿಸಲು ಹಣದ ಅಗತ್ಯವಿದೆ ಹಾಗಾಗಿ ಹಣ ಕಳಿಸು ಎಂದು ಆಕೆಗೆ ತಿಳಿಸಿದ್ದಾನೆ. ಅವನ ಮಾತನ್ನು ನಂಬಿದ ಆಕೆ ಆಗಸ್ಟ್ 19 ರಿಂದ ಸೆಪ್ಟೆಂಬರ್ 5 ರವರೆಗೆ 30,000 (ರೂ. 24,69,891) ಡಾಲರ್​ ಹಣವನ್ನು 5 ಕಂತುಗಳಲ್ಲಿ ಪಾವತಿಸಿದ್ದಾಳೆ. ಕ್ರಮೇಣ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದಾಳೆ. 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಜಪಾನಿನಲ್ಲಿ ಹೀಗೆ ಪ್ರಣಯದ ನೆಪದಲ್ಲಿ ಇಂಥ ವಂಚನೆಗಳು ಹೆಚ್ಚೆಚ್ಚು ಸಂಭವಿಸುತ್ತಿದ್ದು, ವಂಚಕರು ವಿಧವಿಧವಾದ ಜಾಲಗಳನ್ನು ಹೆಣೆಯಲಾರಂಭಿಸಿದ್ದಾರೆ. ಈ ಕುರಿತು ಅಲ್ಲಿಯ ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಆದರೆ ಪ್ರೇಮ ಮತ್ತು ಮದುವೆ ನೆಪದಲ್ಲಿ ವಂಚಿಸುವ ಕೃತ್ಯಕ್ಕೆ ಭಾರತವೂ ಹೊರತಾಗಿಲ್ಲ. ಕೆಲ ತಿಂಗಳುಗಳ ಹಿಂದೆ ಏಳು ರಾಜ್ಯಗಳಲ್ಲಿ 14 ಮಹಿಳೆಯರನ್ನು ಮದುವೆಯಾಗಿದ್ದ 54 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ತಾನು ಡಾಕ್ಟರ್​ ಎಂದು ಹೇಳಿಕೊಂಡು ವಂಚಿಸುತ್ತಿದ್ದ. ಇಂಥ ಸಾಕಷ್ಟು ಘಟನೆಗಳು ನಿಮ್ಮ ನೆನಪಿನಲ್ಲಿ ದಾಂಗುಡಿ ಇಡುತ್ತಿರಬಹುದು ಈಗ.

ಹೆಣ್ಣು ಮಾಯೆ, ಹೊನ್ನು ಮಾಯೆ, ಮಣ್ಣು ಮಾಯೆ ಎನ್ನುತ್ತ ಬಂದಿದ್ದೇವೆ. ಆದರೀಗ ಗಂಡು ಮಾಯೆಯನ್ನೂ ಸೇರಿಸಿಕೊಂಡು ಓದಿ.

ಮತ್ತಷ್ಟು ಟ್ರೆಂಡಿಂಗ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:10 am, Wed, 12 October 22