ಮನೆಗೆ ಬಂತು ಹೊಸ ಫ್ಯಾನ್, ಈ ಕ್ಷಣವನ್ನು ಸಂಭ್ರಮಿಸಿದ ಕುಟುಂಬ, ಹೃದಯಸ್ಪರ್ಶಿ ವಿಡಿಯೋ

ಸೋಶಿಯಲ್ ಮೀಡಿಯಾದಲ್ಲಿ ಕೆಲವು ವಿಡಿಯೋಗಳನ್ನು ನೋಡಿದಾಗ ನಗು ಬರುತ್ತದೆ. ಇನ್ನು ಕೆಲವು ದೃಶ್ಯಗಳು ಎದೆ ಝಲ್ ಎನ್ನುವಂತೆ ಮಾಡುತ್ತದೆ. ಅದಲ್ಲದೇ ಕೆಲವು ಭಾವನಾತ್ಮಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮಧ್ಯಮ ವರ್ಗದ ಕುಟುಂಬವೊಂದು ಹೊಸ ಫ್ಯಾನ್ ಖರೀದಿಸಿದ್ದು , ಹೊಸ ಫ್ಯಾನ್ ಮನೆಗೆ ಬರುತ್ತಿದ್ದಂತೆ ಮನೆ ಮಂದಿಯೆಲ್ಲಾ ಒಟ್ಟು ಸೇರಿ ಆ ಕ್ಷಣವನ್ನು ಸಂಭ್ರಮಿಸಿದ್ದಾರೆ. ಈ ಭಾವನಾತ್ಮಕ ವಿಡಿಯೋ ನೋಡಿದ ಬಳಕೆದಾರರು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಮನೆಗೆ ಬಂತು ಹೊಸ  ಫ್ಯಾನ್, ಈ ಕ್ಷಣವನ್ನು ಸಂಭ್ರಮಿಸಿದ ಕುಟುಂಬ, ಹೃದಯಸ್ಪರ್ಶಿ ವಿಡಿಯೋ
ವೈರಲ್ ವಿಡಿಯೋ
Image Credit source: Instagram

Updated on: Apr 28, 2025 | 2:20 PM

ಮಧ್ಯಮವರ್ಗ (middle class) ದ ಜನರು ದುಡಿದ ಸಂಬಳದಲ್ಲಿ ಮನೆ ಖರ್ಚು ಎಲ್ಲವನ್ನು ತೂಗಿಸಿಕೊಂಡು ಅಲ್ಪ ಸ್ವಲ್ಪ ಹಣ ಉಳಿತಾಯ (saving) ಮಾಡಿ ಮನೆಗೆ ಅಗತ್ಯವಿರುವ ಐಟಂಗಳನ್ನು ಖರೀದಿಸುತ್ತಾರೆ. ಮನೆಗೆ ಬೇಕಾದ ಫ್ಯಾನ್, ಫ್ರಿಡ್ಜ್ ಸೇರಿದಂತೆ ಇನ್ನಿತ್ತರ ಸಾಧನಗಳನ್ನು ತಂದಾಗ ಆಗುವ ಖುಷಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಇದಕ್ಕಾಗಿ ಎಷ್ಟೋ ದಿನಗಳ ಕಾಲ ಶ್ರಮವಹಿಸಿ ದುಡಿದಿರುತ್ತಾರೆ. ಇದೀಗ ಮಧ್ಯಮ ವರ್ಗದ ಕುಟುಂಬವೊಂದು ಸೀಲಿಂಗ್ ಫ್ಯಾನ್ (ceiling fan) ಖರೀದಿಸಿ ಮನೆಗೆ ತಂದಿದ್ದು, ಆ ಖುಷಿಯ ಕ್ಷಣವನ್ನು ಮನೆ ಮಂದಿಯೆಲ್ಲಾ ಸೇರಿ ಸಂಭ್ರಮಿಸಿದ್ದಾರೆ. ಹೊಸ ಫ್ಯಾನ್ ಗೆ ಅರಶಿನ ಹಚ್ಚಿ ಮನೆಯೊಳಗೆ ಒಳಗೆ ತಂದಿದ್ದು, ಈ ವಿಡಿಯೋವೊಂದು ನೆಟ್ಟಿಗರ ಮನಸ್ಸನ್ನು ಗೆದ್ದುಕೊಂಡಿದೆ.

insta mini volg7 ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಮನೆಯ ಹೊರಭಾಗದಲ್ಲಿ ಹೊಸ ಫ್ಯಾನ್ ಹಿಡಿದು ನಿಂತು ಕೊಂಡಿದ್ದಾಳೆ. ಪಕ್ಕದಲ್ಲಿ ನಿಂತಿರುವ ಮಹಿಳೆಯೂ ಫ್ಯಾನ್ ಗೆ ಅರಶಿನ ಹಚ್ಚಿ ಕೆಂಪು ದಾರವನ್ನು ಕಟ್ಟಿದ್ದಾರೆ. ಆ ಬಳಿಕ ಮನೆಯ ಸದಸ್ಯರ ಹಣೆಗೆ ಅರಶಿನ ಹಚ್ಚಿ ಕೈಗೆ ದಾರ ಕಟ್ಟುತ್ತಿರುವುದನ್ನು ಕಾಣಬಹುದು. ಈ ವಿಡಿಯೋದ ಕೊನೆಯಲ್ಲಿ ಮಹಿಳೆ ಯೊಬ್ಬರು ಹೊಸ ಫ್ಯಾನ್ ಅಡಿಯಲ್ಲಿ ನಿಂತಿರುವುದನ್ನು ಕಾಣಬಹುದು.

ಇದನ್ನೂ ಓದಿ
ದನದ ಕೊಟ್ಟಿಗೆಯಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ
ಪೈಲಟ್ ಮೊಮ್ಮಗನ ಜೊತೆಯಲ್ಲಿ ಅಜ್ಜನ ಮೊದಲ ವಿಮಾನ ಪ್ರಯಾಣ, ವಿಡಿಯೋ ವೈರಲ್
ಶಸ್ತ್ರಚಿಕಿತ್ಸೆಯ ಸಾಧನ ಬಳಸಿ ಹರಿದ ಚಪ್ಪಲಿ ಹೊಲಿದ ವೈದ್ಯಕೀಯ ವಿದ್ಯಾರ್ಥಿ
ಇದು ಬಾಯಲ್ಲಿ ನೀರೂರಿಸುವ ಫ್ರೂಟ್ ಐಸ್ ಗೋಲಾ

ಇದನ್ನೂ ಓದಿ :Viral : ಇದು ಅಪ್ಡೇಟೆಡ್ ಟೆಕ್ನಾಲಜಿ, ಟ್ರ್ಯಾಕ್ಟರ್ ಬದಲು ಉಳುಮೆ ಮಾಡಲು ಆಟೋ ಬಂತು

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ವಿಡಿಯೋ ಈಗಾಗಲೇ ಹನ್ನೆರಡು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು, ‘ಮಧ್ಯಮ ವರ್ಗದ ಜನರೇ ಹಾಗೆ, ಸಣ್ಣ ಸಣ್ಣ ವಿಚಾರದಲ್ಲಿ ಖುಷಿ ಕಾಣುತ್ತಾರೆ’ ಎಂದಿದ್ದಾರೆ. ಇನ್ನೊಬ್ಬರು, ‘ಈ ರೀತಿ ಖುಷಿಯ ಕ್ಷಣವನ್ನು ಇಂದಿಗೆ ಕಾಣಲು ಸಿಗುವುದಿಲ್ಲ’ ಎಂದು ಕಾಮೆಂಟ್ ನಲ್ಲಿ ಬರೆದಿದ್ದಾರೆ. ಮತ್ತೊಬ್ಬರು, ‘ಈ ಖುಷಿಯೂ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ, ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು’ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ