ಸೆಲ್ಫಿಗೆ ಹೆಸರಾಗಿದ್ದ ಗೋರಿಲ್ಲಾ ಇನ್ನಿಲ್ಲ; ಕೇರ್ ಟೇಕರ್​ನ್ನು ಬಿಗಿದಪ್ಪಿ ಹಿಡಿದ ಫೋಟೊ ನೋಡಿ

ಕೇರ್ ಟೇಕರ್ ಆಗಿರುವ ಹಾಗೂ ಜೀವದ ಗೆಳೆಯ ಆಂಡ್ರೆ ಬವುಮಾ ತೋಳುಗಳನ್ನು ಬಿಗಿದಪ್ಪಿ ಹಿಡಿದು ಗೋರಿಲ್ಲಾ ಉಸಿರು ಬಿಟ್ಟಿದೆ. ಆತನ ಜತೆಗೆ ಎನ್​ಡಕಾಸಿ ಮಲಗಿರುವ ದೃಶ್ಯವನ್ನು ವಿರುಂಗಾ ನ್ಯಾಷನಲ್ ಪಾರ್ಕ್ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ.

ಸೆಲ್ಫಿಗೆ ಹೆಸರಾಗಿದ್ದ ಗೋರಿಲ್ಲಾ ಇನ್ನಿಲ್ಲ; ಕೇರ್ ಟೇಕರ್​ನ್ನು ಬಿಗಿದಪ್ಪಿ ಹಿಡಿದ ಫೋಟೊ ನೋಡಿ
ಕೇರ್ ಟೇಕರ್​ನ್ನು ಬಿಗಿದಪ್ಪಿ ಹಿಡಿದ ಗೋರಿಲ್ಲಾ


ಸೆಲ್ಫಿಗೆ ಹೆಸರಾಗಿದ್ದಎನ್​ಡಕಾಸಿ ಎಂಬ ಗೋರಿಲ್ಲಾ ಸಾವಿಗೀಡಾದ ಘಟನೆಯನ್ನು ವಿರುಂಗಾ ನ್ಯಾಷನಲ್ ಪಾರ್ಕ್ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಬೇಸರ ವ್ಯಕ್ತಪಡಿಸಿದೆ. ಎನ್​ಡಕಾಸಿ (ಗೋರಿಲ್ಲಾ) 14ನೇ ವಯಸ್ಸಿನಲ್ಲಿರುವಾಗ ಅನಾರೋಗ್ಯದಿಂದ ಸಾವಿಗೀಡಾಗಿದೆ ಎಂಬ ವಿಷಯವನ್ನು ಪೋಸ್ಟ್​ನಲ್ಲಿ ತಿಳಿಸಲಾಗಿದೆ.

ಕೇರ್ ಟೇಕರ್ (ಆರೈಕೆ ಮಾಡುವವ) ಆಶ್ರಯದಲ್ಲಿದ್ದ ಅನಾಥ ಎನ್​ಡಕಾಸಿ ಹೆಸರಿನ ಗೋರಿಲ್ಲಾ ಸಾವಿಗೀಡಾಗಿರುವುದು ತುಂಬಾ ದುಃಖದ ಸಂಗತಿ. ಅನಾರೋಗ್ಯದಿಂದ ಬಳಲುತ್ತಿದ್ದ ಎನ್​ಡಕಾಸಿ ಸೆಪ್ಟೆಂಬರ್ 26ರ ಸಂಜೆ ಪ್ರಾಣ ಬಿಟ್ಟಿದೆ. ಕೇರ್ ಟೇಕರ್ ಆಗಿರುವ ಹಾಗೂ ಜೀವದ ಗೆಳೆಯ ಆಂಡ್ರೆ ಬವುಮಾ ತೋಳುಗಳನ್ನು ಬಿಗಿದಪ್ಪಿ ಹಿಡಿದು ಉಸಿರು ಬಿಟ್ಟಿದೆ. ಆತನ ಜತೆಗೆ ಎನ್​ಡಕಾಸಿ ಮಲಗಿರುವ ದೃಶ್ಯವನ್ನು ವಿರುಂಗಾ ನ್ಯಾಷನಲ್ ಪಾರ್ಕ್ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ.

ಮನಮಿಡಿಯುವ ಫೋಸ್ಟ್ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ಕೇರ್ ಟೇಕರ್ ಆಗಿದ್ದ ಆಂಡ್ರೆ ಬವುಮಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಜತೆಗೆ ಗೋರಿಲ್ಲಾ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಫೋಟೋಬಾಂಬ್ ಸೆಲ್ಫಿ 2019ರಲ್ಲಿ ವಿರುಂಗಾ ನ್ಯಾಷನಲ್ ಪಾರ್ಕ್ ಹಂಚಿಕೊಂಡ ಬಳಿಕ ಫುಲ್ ವೈರಲ್ ಆಗಿತ್ತು. ಕೇರ್ ಟೇಕರ್​ಗಳಾದ ಮ್ಯಾಥಿಯು ಮತ್ತು ಪ್ಯಾಟ್ರಿಕ್ ಜೊತೆಗೆ ಗೋರಿಲ್ಲಾ ಎನ್​ಡಕಾಸಿ ನಿಂತಿರುವ ಚಿತ್ರವನ್ನು ನೋಡಬಹುದು.

ಇಂತಹ ಜೀವಿಗಳನ್ನು ನೋಡಿಕೊಳ್ಳುವುದು ಒಂದು ಸವಲತ್ತಿನ ಕೆಲಸ. ಎನ್​ಡಕಾಸಿಯು ಅನಾರೋಗ್ಯದಿಂದ ಬಳಲುತ್ತಿರುವುದು ನನಗೆ ತಿಳಿದಿತ್ತು. ಮನುಷ್ಯರು ಮತ್ತು ಇಂತಹ ಜೀವಿಗಳ ನಡುವಿನ ಸಂಪರ್ಕವನ್ನು ಅರ್ಥಮಾಡಿಕೊಳ್ಳುವುದು ಜತೆಗೆ ಎನ್​ಡಕಾಸಿಯ ಸ್ವಭಾವ ಮತ್ತು ಬುದ್ಧಿವಂತಿಕೆಯಿಂದ ನಾನೂ ಸಹ ಸಾಕಷ್ಟು ಕಲಿತಿದ್ದೇನೆ. ಎನ್​ಡಕಾಸಿಯನ್ನು ಉಳಿಸಲು ನಮ್ಮ ಕೈಲಾದ ಎಲ್ಲಾ ಪ್ರಯತ್ನವನ್ನು ಮಾಡಿದೆವು, ಆದರೆ ಸಾಧ್ಯವಾಗಲಿಲ್ಲ ಎಂದು ಕೇರ್ ಟೇಕರ್ ಬವುಮಾ ಹೇಳಿಕೆಯನ್ನು ಸಿಎನ್ಎನ್ ವರದಿ ಮಾಡಿದೆ.

ನಾನು ಎನ್​ಡಕಾಸಿಯನ್ನು ನನ್ನ ಸ್ನೇಹಿತ ಎಂದು ಕರೆದಿದ್ದಕ್ಕೆ ನನಗೆ ಹೆಮ್ಮೆಯಿದೆ. ನಾವು ಮಗುವಿನಂತೆ ನೋಡಿಕೊಳ್ಳುತ್ತಿದ್ದೆ. ಎನ್​ಡಕಾಸಿ (ಗೋರಿಲ್ಲಾ) ಯಾವಾಗಲೂ ನನ್ನೊಂದಿಗೆ ಸಂವಹನ ನಡೆಸುವುದು ನನ್ನ ಮುಖದಲ್ಲಿ ನಗು ತರಿಸುತ್ತಿತ್ತು. ಎಂದಿಗೂ ನಾವು ಕೃತಜ್ಞರಾಗಿರುತ್ತೇವೆ ಎಂದು ಅವರು ಮಾತನಾಡಿದ್ದಾರೆ. ವಿಶೇಷವೆಂದರೆ ಎನ್​ಡಕಾಸಿ ದೂರದರ್ಶನ ಕಾರ್ಯಕ್ರಮಗಳಲ್ಲಿ ಮತ್ತು ಚಲನಚಿತ್ರಗಳಲ್ಲಿ ಈ ಹಿಂದೆ ಕಾಣಿಸಿಕೊಂಡಿತ್ತು.

ಇದನ್ನೂ ಓದಿ:

Viral News: ಬರೋಬ್ಬರಿ 2,700 ವರ್ಷಗಳ ಹಿಂದಿನ ಐಷಾರಾಮಿ ಟಾಯ್ಲೆಟ್ ಪತ್ತೆ; ಏನಿದರ ವಿಶೇಷತೆ?

Viral Video: ತನ್ನ ತಾಯಿಗಾಗಿ ಹುಡುಕಾಡುತ್ತಿರುವ ಆನೆ ಮರಿ; ಮನಮಿಡಿಯುವ ವಿಡಿಯೋ ನೋಡಿ

Read Full Article

Click on your DTH Provider to Add TV9 Kannada