AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸೂಪರ್ ಹೀರೋ ಮೈ ಡ್ಯಾಡಿ; ತೋಳದ ದಾಳಿಯಿಂದ ಕಂದಮ್ಮನನ್ನು  ರಕ್ಷಿಸಿದ ತಂದೆ

ಅಪ್ಪ ಎಂದರೆ ಆಕಾಶ. ತನ್ನ  ಇಡೀ ಜೀವನವನ್ನು ಮಕ್ಕಳು ಹಾಗೂ ಕುಟುಂಬಕ್ಕಾಗಿ  ಮುಡುಪಾಗಿಟ್ಟಿರುವ ತಂದೆ ತನ್ನ ಮಕ್ಕಳನ್ನು ಯಾವುದೇ ರೀತಿಯ  ತೊಂದರೆಗಳಿಂದ ಕಾಪಾಡಲು ಧೈರ್ಯದಿಂದ ಹೋರಾಡುತ್ತಾನೆ. ಇದಕ್ಕೆ ನಿದರ್ಶನದಂತಿರುವ ವಿಡಿಯೋವೊಂದು  ಇದೀಗ ವೈರಲ್ ಆಗಿದ್ದು, ತಂದೆಯೊಬ್ಬರು ತನ್ನ ಪುಟ್ಟ ಮಗಳನ್ನು ತೋಳದ ದಾಳಿಯಿಂದ ರಕ್ಷಣೆ ಮಾಡಿದ್ದಾರೆ. 

Viral Video: ಸೂಪರ್ ಹೀರೋ ಮೈ ಡ್ಯಾಡಿ; ತೋಳದ ದಾಳಿಯಿಂದ ಕಂದಮ್ಮನನ್ನು  ರಕ್ಷಿಸಿದ ತಂದೆ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Mar 25, 2024 | 10:52 AM

Share

ಪ್ರತೀ ಮಗುವಿಗೂ ತಂದೆಯೇ ಸೂಪರ್ ಹೀರೋ.  ಅವರ ತ್ಯಾಗ, ತಾಳ್ಮೆ, ಧೈರ್ಯ ಎಲ್ಲವೂ ಪ್ರತೀ ಮಗುವಿಗೂ ಆದರ್ಶ. ಅವರೊಬ್ಬರು ಜೊತೆಯಿದ್ದರೆ ಮಕ್ಕಳಿಗೆ ಅದೇನೊ ವಿಶ್ವಾಸ. ತನ್ನ ಇಡೀ ಜೀವನವನ್ನು ಕುಟುಂಬಕ್ಕಾಗಿ ಮುಡುಪಾಗಿಟ್ಟು, ತನ್ನ ಸುಖವನ್ನು ಮಕ್ಕಳಿಗಾಗಿ ಮೀಸಲಿಡುವ ಜೀವ ಎಂದರೆ ಅದು ಅಪ್ಪ. ಇಂತಹ ಅಪ್ಪ  ತನ್ನ ಮಗುವಿಗೆ ಯಾವುದೇ ಅಪಾಯ ಬಾರದಂತೆ  ಕಣ್ಣಲ್ಲಿ ಕಣ್ಣಿಟ್ಟು  ನೋಡಿಕೊಳ್ಳುತ್ತಾರೆ. ಇದಕ್ಕೆ ನಿದರ್ಶನದಂತಿರುವ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತಂದೆಯೊಬ್ಬರು ಸೂಪರ್ ಹೀರೋನಂತೆ ಬಂದು ತನ್ನ 2 ವರ್ಷ ವಯಸ್ಸಿನ ಪುಟ್ಟ ಮಗಳನ್ನು ತೋಳದ ದಾಳಿಯಿಂದ ರಕ್ಷಣೆ ಮಾಡಿದ್ದಾರೆ.

ಈ ಘಟನೆ ಒಂದುವರೆ ವರ್ಷಗಳ ಹಿಂದೆ ಅಮೇರಿಕಾದ ಲಾಸ್ ಏಂಜಲೀಸ್ ಅಲ್ಲಿ ನಡೆದಿದ್ದು, ಈ ಕುರಿತ ವಿಡಿಯೋ ತುಣುಕೊಂದು ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋವನ್ನು @crzyclipsonly ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “2 ವರ್ಷ ವಯಸ್ಸಿನ ಮಗುವಿನ ಮೇಲೆ ತೋಳದ ದಾಳಿ ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಮನೆಯ ಹೊರಗಡೆ ಕಾರಿನಿಂದ ಇಳಿಯುತ್ತಿದ್ದಂತೆ 2 ವರ್ಷ ವಯಸ್ಸಿನ  ಮಗುವಿನ ಮೇಲೆ ಕೊಯೆಟಾ ಒಂದು ಜಾತಿಯ ತೋಳ ಇದ್ದಕ್ಕಿದ್ದಂತೆ ದಾಳಿ ಮಾಡುವ ದೃಶ್ಯವನ್ನು ಕಾಣಬಹುದು. ತೋಳ ತನ್ನನ್ನು ಎಳೆದುಕೊಂಡು ಹೋಗುತ್ತಿದ್ದಂತೆ ಮಗು ಜೋರಾಗಿ ಅಳಲು ಪ್ರಾರಂಭಿಸುತ್ತದೆ. ಆ ತಕ್ಷಣ ಕಾರಿನ ಈ ಬದಿಯಲ್ಲಿದ್ದ ತಂದೆ ಸೂಪರ್ ಹೀರೋನಂತೆ  ಓಡಿ ಬಂದು ತೋಳಕ್ಕೆ ಗದರಿಸುವ ಮೂಲಕ ಮಗುವನ್ನು ರಕ್ಷಿಸಿ ಮನೆಯ ಒಳಗೆ ಕರೆದುಕೊಂಡು ಹೋಗುತ್ತಾರೆ. ನಂತರ ನನ್ನ ಮಗಳ ಮೇಲೆ ದಾಳಿ ಮಾಡಲು ನಿನಗೆಷ್ಟು ಧೈರ್ಯ ಎನ್ನುತ್ತಾ ಆ ವ್ಯಕ್ತಿ ಕೈಯಲ್ಲೊಂದು ದೊಣ್ಣೆ ಹಿಡಿದುಕೊಂಡು ಬಂದು ತೋಳವನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಮೆಟ್ರೋದಲ್ಲಿ ಯುವತಿಯರಿಬ್ಬರ ಹೋಳಿ ಆಚರಣೆ; ಅಸಭ್ಯ ವರ್ತನೆಗೆ ಪ್ರಯಾಣಿಕರು ಕಿಡಿ

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಕೊಯೊಟೆಗಳು ವಿಶೇಷವಾಗಿ ಪುಟ್ಟ ಮಕ್ಕಳಿಗೆ ತುಂಬಾನೇ ಅಪಾಯಕಾರಿ. ಆದ್ದರಿಂದ ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳಿʼ ಎಂದು ಸಲಹೆ ನೀಡಿದ್ದಾರೆ. ಇನ್ನೂ ಅನೇಕರು ತಂದೆ ತನ್ನ ಸಮಯಪ್ರಜ್ಞೆಯಿಂದ ಮಗಳನ್ನು ತೋಳದ ದಾಳಿಯಿಂದ ರಕ್ಷಿಸಿದ ಪರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!