ಟ್ಯಾಟೂಗಳು, ಕೂದಲಿಗೆ ಬಣ್ಣ ಹಾಕಿಸಿಕೊಳ್ಳುವಂತಹದ್ದು, ಇವೆಲ್ಲಾ ದೇಸಿ ಪೋಷಕರಿಗೆ ಕೋಪ ತರಿಸುತ್ತದೆ. ಈ ರೀತಿಯ ಹುಚ್ಚು ಫ್ಯಾಶನ್ಗಳು ನಮಗೆ ಶೋಭೆ ತರುವುದಿಲ್ಲ ಎಂದೆಲ್ಲಾ ತಮ್ಮ ಮಕ್ಕಳಿಗೆ ಬುದ್ಧಿವಾದ ಹೇಳುತ್ತಿರುತ್ತಾರೆ. ಅದರಲ್ಲೂ ಮಕ್ಕಳು ಹಚ್ಚೆ ಹಾಕಿಸಿಕೊಳ್ಳುತ್ತೇನೆ ಎಂದರೆ ಹೆಚ್ಚಿನ ಪೋಷಕರು ಅದಕ್ಕೆ ಒಲ್ಲೆ ಎನ್ನುತ್ತಾರೆ. ಪೋಷಕರು ಯಾವತ್ತು ತಮ್ಮ ಮಕ್ಕಳು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಇರಲು ಬಯಸುತ್ತಾರೆ, ಈ ರೀತಿಯ ಹುಚ್ಚು ಫ್ಯಾಶನ್ಗಳು ಅವರಿಗೆ ಎಂದಿಗೂ ಇಷ್ಟವಾಗುವಿದಿಲ್ಲ. ಮತ್ತು ಅನುಮತಿಯಿಲ್ಲದೆ ಹಚ್ಚೆ ಹಾಕಿಸಿಕೊಂಡರಂತೂ ಬೈಗುಳದ ಸುರಿಮಳೆಯೇ ಇರುತ್ತದೆ. ಇದೇ ರೀತಿ ಯುವತಿಯೊಬ್ಬಳು ಕೈಗೆ ಹಚ್ಚೆ ಹಾಕಿಸಿಕೊಂಡು ತಂದೆಯ ಕೋಪಕ್ಕೆ ಗುರಿಯಾಗಿದ್ದಾಳೆ.
ಶರಣ್ಯ ಎಂಬ ಯುವತಿ ತನ್ನ ತಂದೆಯ ಜನ್ಮ ದಿನಾಂಕವನ್ನು ಕೈಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾಳೆ. ಮತ್ತು ಹಚ್ಚೆ ಹಾಕಿಸಿಕೊಂಡ ವೀಡಿಯೋವನ್ನು ತಂದೆ ವಾಟ್ಸಾಪ್ ಮಾಡಿದ್ದಾಳೆ. ಇದನ್ನು ನೋಡಿದ ಆಕೆಯ ತಂದೆ ‘ನಾನು ನಿನ್ನನ್ನು ಕೊಲ್ಲುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಅವರಿಬ್ಬರ ವಾಟ್ಸಾಪ್ ಸಂಭಾಷಣೆಯ ಸ್ಕಿನ್ ಶಾಟ್ನ್ನು ಶರಣ್ಯ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮತ್ತು ನನ್ನ ತಂದೆ ಟ್ಯಾಟೂವನ್ನು ಸ್ಪಷ್ಟವಾಗಿ ಅನುಮೋದಿಸುತ್ತಾರೆ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
My dad approves of the tattoo clearly pic.twitter.com/8uJrYWq5X1
— sharanya;) (@sharandirona) May 10, 2023
ಇದನ್ನೂ ಓದಿ: Viral Post : ನಾನು ಈಗ ವಿಚ್ಛೇದನ ಪಡೆದಿದ್ದೇನೆ, ನನ್ನ ಹಣ ವಾಪಸ್ ಮಾಡಿ, ಮದುವೆ ಫೋಟೋ ತೆಗೆದ ಫೋಟೋಗ್ರಾಫರ್ಗೆ ಮಹಿಳೆ ಮೆಸೇಜ್
ಟ್ವಿಟರ್ನಲ್ಲಿ ವೈರಲ್ ಆಗಿರುವ ಈ ಪೋಸ್ಟ್ ಈವರೆಗೆ 130.9 ಸಾವಿರ ವೀಕ್ಷಣೆಗಳನ್ನು ಹಾಗೂ 1.3 ಸಾವಿರ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಮತ್ತು ಹಲವು ಜನರು ಕಮೆಂಟ್ಸ್ ಕೂಡ ಮಾಡಿದ್ದಾರೆ. ಒಬ್ಬ ಬಳಕೆದಾರರು ‘ನಾನು ಹಚ್ಚೆ ಹಾಕಿಸಿಕೊಳ್ಳುತ್ತಿರುವಾಗ ನನ್ನ ತಾಯಿ ಮತ್ತು ತಂದೆ ಪಕ್ಕದಲ್ಲಿ ಕುಳಿತಿದ್ದರು. ಅವರು ಟ್ಯಾಟೂ ಹಾಕಿಸಿಕೊಳ್ಳಲು ಅನುಮತಿ ನೀಡಿದ್ದು, ನನಗೆ ಆಶ್ಚರ್ಯಕರವೆನಿಸಿತು’ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ನನ್ನ ಕುಟುಂಬದವರು ನಾನು ಹಚ್ಚೆ ಹಾಕಿಸಿಕೊಂಡದ್ದನ್ನು ನೋಡಿದಾಗ ನಾನು ಕೂಡಾ ಇದೇ ಪರಿಸ್ಥಿತಿಯನ್ನು ಎದುರಿಸಿದ್ದೆ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಅನುಮತಿ ಕೇಳುವುದಕ್ಕಿಂತ ಕ್ಷಮೆ ಕೇಳುವುದು ಉತ್ತಮ ಎಂದು ಇದು ಸಾಬೀತು ಪಡಿಸುತ್ತದೆ’ ಎಂದು ಈ ಪೋಸ್ಟ್ ನೋಡಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ