Viral: ಅಮೆರಿಕದ ವಕೀಲೆಗೆ ಗಂಡು ಹುಡುಕಿ ಕೊಟ್ಟವರಿಗೆ ರೂ. 4 ಲಕ್ಷ ಬಹುಮಾನ

|

Updated on: Jul 13, 2023 | 7:04 PM

Husband : ''ಕೋವಿಡ್ ನಂತರ ಡೇಟಿಂಗ್​ ಸಂಸ್ಕೃತಿ ಬದಲಾಗಿದೆ. ಡೇಟಿಂಗ್ ಆ್ಯಪ್​ಗಳಲ್ಲಿ ಸಿಗುವ ಪುರುಷರು ಡೇಟಿಂಗ್​ ಅನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಹಾಗಾಗಿ ಮದುವೆಯಾಗಲು ನಾನು ನಿರೀಕ್ಷಿಸಿದಂಥ ಗಂಡು ಬೇಕು. ಹುಡುಕಿ ಕೊಡುವಿರಾ?''

Viral: ಅಮೆರಿಕದ ವಕೀಲೆಗೆ ಗಂಡು ಹುಡುಕಿ ಕೊಟ್ಟವರಿಗೆ ರೂ. 4 ಲಕ್ಷ ಬಹುಮಾನ
ಅಮೆರಿಕದ ಮಹಿಳಾ ವಕೀಲೆ ಟಿಲ್ಲಿ ಕೋಲ್ಸನ್​
Follow us on

America : ಅಮೆರಿಕದ ಲಾಸ್​ ಎಂಜಲೀಸ್​ನ 35 ವರ್ಷದ ಟಿಲ್ಲಿ ಕೋಲ್ಸನ್ ಕಾರ್ಪೋರೇಟ್​ ಲಾಯರ್​. ಈಕೆ ಈಗ ವಿಚಿತ್ರ ಘೋಷಣೆ ಮಾಡಿ ಸುದ್ದಿಯಲ್ಲಿದ್ದಾಳೆ. ಡೇಟಿಂಗ್​ನಿಂದ (Dating) ಬೇಸತ್ತ ಆಕೆ ಸುಮಾರು ಐದು ವರ್ಷಗಳಿಂದ ಒಂಟಿಯಾಗಿದ್ದಾರೆ. ಹಾಗಾಗಿ ಮದುವೆಗಾಗಿ ತನಗೆ ಗಂಡು ಹುಡುಕುವ ಜವಾಬ್ದಾರಿಯನ್ನು ಸಾರ್ವಜನಿಕರ ಹೆಗಲಿಗೆ ಹೊರಿಸಿದ್ದಾಳೆ. ಯಾರು ಆಕೆಗೆ ಗಂಡು ಹುಡುಕಿ ಕೊಡುತ್ತಾರೋ ಅವರಿಗೆ ಭಾರೀ ಮೊತ್ತದ ಬಹುಮಾನವನ್ನೂ ಕೊಡುವುದಾಗಿ ಹೇಳಿದ್ದಾಳೆ. ಟಿಕ್​ಟಾಕ್​ನಲ್ಲಿ 1 ಮಿಲಿಯನ್​ಗಿಂತಲೂ ಹೆಚ್ಚು ಫಾಲೋವರ್ಸ್​ ಹೊಂದಿರುವ ಈಕೆ ವಿಡಿಯೋ ಮೂಲಕ ತನಗೆ ಮದುವೆಗೆ ಗಂಡು ಬೇಕು ಎಂದು ಮನವಿ ಮಾಡಿಕೊಂಡಿದ್ದಾಳೆ. ಆದರೆ ಈ ವಿಡಿಯೋ ಆಕೆಯ ಸ್ನೇಹಿತರಿಗೆ, ಕಚೇರಿ ಮುಖ್ಯಸ್ಥರಿಗಷ್ಟೇ ಕಾಣುವಂತಿದೆ. ಸದ್ಯದಲ್ಲೇ ಸಾರ್ವಜನಿಕರೂ ಈ ವಿಡಿಯೋ ನೋಡಬಹುದಾಗಿದೆ ಎಂದಿದ್ದಾಳೆ ಈಕೆ.

ನಾನು ಮದುವೆಯಾಗಬೇಕು ಎಂದು ನಿರ್ಧರಿಸಿದ್ದೇನೆ. ಏಕೆಂದರೆ ಡೇಟಿಂಗ್ ಮತ್ತು ಡೇಟಿಂಗ್​ ಆ್ಯಪ್​ಗಳಿಂದ ನಾನು ಬೇಸತ್ತು ಈ ತೀರ್ಮಾನ ತೆಗೆದುಕೊಂಡಿದ್ದೇನೆ. ಕೊವಿಡ್​ನಿಂದಾಗಿ ಡೇಟಿಂಗ್ ಸಂಸ್ಕೃತಿ ವಿಚಿತ್ರ ತಿರುವುಗಳನ್ನು ಪಡೆದುಕೊಂಡಿದೆ. ಆನ್​ಲೈನ್​ನಲ್ಲಿ ಸಿಗುವ ವ್ಯಕ್ತಿಗಳು ನೇರಭೇಟಿಗೆ ಒಪ್ಪಲಾರರು. ಇನ್ನು ಡೇಟಿಂಗ್​ ಅಪ್ಲಿಕೇಷನ್​ಗಳಲ್ಲಿ ಸಿಗುವ ಪುರುಷರು ಗಂಭೀರವಾಗಿ ಡೇಟಿಂಗ್​ನಲ್ಲಿ ತೊಡಗಿಕೊಳ್ಳಲಾರರು. ಹಾಗಾಗಿ ನನ್ನ ಅಗತ್ಯಗಳನ್ನು ಪೂರೈಸುವ ಮತ್ತು ನಿಜವಾಗಲೂ ನನಗೆ ಗಂಡನಾಗಬಯಸುವ ವ್ಯಕ್ತಿಯ ಹುಡುಕಾಟದಲ್ಲಿ ನಾನಿದ್ದೇನೆ ಎಂದಿದ್ದಾರೆ ಕೋಲ್ಸನ್​.

ಇದನ್ನೂ ಒದಿ : Viral: ಮೌಂಟೇನ್ ಡ್ಯೂ ಜಿಲೇಬಿ! ಇದು ಯಾವ ಊರಲ್ಲಿ ಸಿಗುತ್ತದೆ ಗೊತ್ತೇ?

ತನ್ನನ್ನು ಮದುವೆಯಾಗಲು ಬಯಸುವ ಗಂಡಸರು 27ರಿಂದ 40 ವರ್ಷ, 5.11 ಅಡಿ ಎತ್ತರ ಮತ್ತು ಬ್ರಿಟಿಷ್​ ಶೈಲಿಯ ಹಾಸ್ಯಪ್ರಜ್ಞೆಯನ್ನು ಉಳ್ಳವರಾಗಿರಬೇಕು. ಪ್ರಾಣಿ, ಮಕ್ಕಳು ಮತ್ತು ಕ್ರೀಡೆಯನ್ನು ಪ್ರೀತಿಸುವ ವ್ಯಕ್ತಿಯಾಗಿರಬೇಕು. ಅಲ್ಲದೆ ಲಾಂಗ್​ ಡಿಸ್ಟನ್ಸ್​ ರಿಲೇಷನ್​ಶಿಪ್​ನಲ್ಲಿ ಇರಲೂ ನನಗೇನು ಅಭ್ಯಂತರವಿಲ್ಲ. ನಾನು ಸುಮಾರು 5.10 ಅಡಿ ಇದ್ದೇನೆ. ಹಾಗಾಗಿ ಗಂಡನಾಗುವವನೂ ನನಗಿಂತ ಸ್ವಲ್ಪಾದರೂ ಎತ್ತರವಿರಬೇಕೆಂದು ಬಯಸುತ್ತಿದ್ದೇನೆ. ಏಕೆಂದರೆ ಈವರೆಗೆ ಡೇಟ್​ ಮಾಡಿದ ಗಂಡಸರು ನನ್ನೊಂದಿಗಿದ್ದಾಗ ತಮ್ಮ ಎತ್ತರದ ಬಗ್ಗೆ ಮುಜುಗರಪಟ್ಟುಕೊಳ್ಳುತ್ತಿದ್ದರು. ಅವರಿಗೆ ಹೀಲ್ಸ್​ ಧರಿಸಬೇಡಿ ಎಂದು ಹೇಳಿದರೂ ಅವರು ಕೇಳುತ್ತಿರಲಿಲ್ಲ. ಹಾಗಾಗಿ ನನಗಿಂತಲೂ ಎತ್ತರವಿರುವ ವ್ಯಕ್ತಿಯನ್ನು ನಿರೀಕ್ಷಿಸುತ್ತೇನೆ ಎಂದಿದ್ದಾರೆ ಈಕೆ.

ಇದನ್ನೂ ಓದಿ : Viral Video: ಈ ವಿಡಿಯೋ ನೋಡಿದ ಮೇಲೆಯೂ ಈ ಬಟಾಣಿ ತಿನ್ನುವಿರೆ?

ಇನ್ನು ರಾಜಕೀಯ ದೃಷ್ಟಿಕೋನ, ಧಾರ್ಮಿಕ ನಂಬಿಕೆ ಮತ್ತು ಜನಾಂಗೀಯತೆ ಇವೆಲ್ಲವೂ ನನಗೆ ದೊಡ್ಡ ಸಮಸ್ಯೆಗಳೇ ಅಲ್ಲ. ಆದರೆ ಮದುವೆಯಾಗುವ ವ್ಯಕ್ತಿ ಡ್ರಗ್ಸ್​ ತೆಗೆದುಕೊಳ್ಳಬಾರದು. ಇನ್ನು ನಾನು ಮ್ಯಾರೇಜ್​ ಸರ್ಟಿಫಿಕೇಟ್​ಗೆ ಸಹಿ ಹಾಕಿದ ತಕ್ಷಣವೇ ನನಗೆ ಗಂಡು ಹುಡುಕಿ ಕೊಟ್ಟವರು ಖಂಡಿತ ರೂ. 4 ಲಕ್ಷ ಬಹುಮಾನವನ್ನು ಪಡೆಯುತ್ತಾರೆ ಎಂದಿದ್ದಾರೆ ಕೋಲ್ಸನ್.

ನೀವೇನಾದರೂ ಹುಡುಕಿ ಕೊಡುತ್ತೀರೋ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 7:00 pm, Thu, 13 July 23