AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಆಟೋ ಹಿಂಬದಿ ಬರೆದ ಸಾಲಿನಲ್ಲಿದೆ ಚಾಲಕನ ಬದುಕಿನ ಕಥೆ, ವೈರಲ್ ಆಯ್ತು ದೃಶ್ಯ

ನೀವು ಈ ಆಟೋ, ಬೈಕ್‌ಗಳ ಹಿಂಬದಿಯಲ್ಲಿ ಬರೆದಿರುವುದನ್ನು ಆಕರ್ಷಕ ಸಾಲುಗಳನ್ನು ನೋಡಿರುತ್ತೀರಿ. ಕೆಲ ಸಾಲುಗಳು ಜೀವನಕ್ಕೆ ಪಾಠವಾದರೆ, ಇನ್ನು ಕೆಲ ಸಾಲುಗಳು ನಗು ಮೂಡಿಸುತ್ತದೆ. ಆದರೆ ಈ ಭಾವನಾತ್ಮಕ ಸಾಲು ಆಟೋಚಾಲಕನ ಬದುಕಿನ ನೈಜ ಕಥೆಯನ್ನು ತೆರೆದಿಟ್ಟಿದೆ. ಹೌದು, ಆಟೋ ಚಾಲಕನು ಅಗಲಿದ ತನ್ನ ಪತ್ನಿ ನನ್ನ ಜೊತೆಯಲ್ಲಿಯೇ ಇದ್ದಾಳೆ ಎಂದು ಈ ಸಾಲುಗಳನ್ನು ಬರೆಸಿದ್ದಾನೆ. ಈ ವಿಡಿಯೋ ನೆಟ್ಟಿಗರ ಹೃದಯ ಮುಟ್ಟಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಆಟೋ ಹಿಂಬದಿ ಬರೆದ ಸಾಲಿನಲ್ಲಿದೆ ಚಾಲಕನ ಬದುಕಿನ ಕಥೆ, ವೈರಲ್ ಆಯ್ತು ದೃಶ್ಯ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Nov 08, 2026 | 6:27 PM

Share

ಬದುಕು ಕೆಲವೊಮ್ಮೆ ಹೇಳದೇನೆ ಹೊಡೆತಗಳನ್ನು ನೀಡುತ್ತವೆ. ಆದರೆ ಎಲ್ಲದರಿಂದಲು ಚೇತರಿಸಿಕೊಳ್ಳಬೇಕಷ್ಟೆ. ಈ ಆಟೋಚಾಲಕನದ್ದು (Auto Driver) ಅದೇ ಕಥೆ. ಆಟೋ ಡ್ರೈವರ್ ಬಳಿ ತನ್ನ ವಾಹನದ ಹಿಂದೆ ಬರೆದ ಸಾಲುಗಳ ಬಗ್ಗೆ ಕೆದಕಿದಾಗ ಅಸಲಿ ವಿಚಾರ ಹೊರ ಬಿದ್ದಿದೆ. ಪತ್ನಿ ನೆನಪಿನಲ್ಲಿ ಬರೆದ ಸಾಲುಗಳು ಇವು ಎಂದಿದ್ದಾರೆ. ಈ ಆಟೋ ಚಾಲಕನ ಭಾವುಕ ಮಾತು ನೆಟ್ಟಿಗರ ಕಣ್ಣು ಒದ್ದೆಯಾಗಿಸಿದೆ.

ಆಟೋದ ಹಿಂಬದಿಯಲ್ಲಿದೆ ಭಾವನಾತ್ಮಕ ಸಾಲು

ಬಾಬುಗ್ ವೈಬ್ಸ್ (babugvibes) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ವ್ಲಾಗರ್ ರೊಬ್ಬರು ಆಟೋದ ಹಿಂಬದಿ ಬರೆದ ಸಾಲುಗಳನ್ನು ಓದುತ್ತಾ ಆಟೋ ಚಾಲಕನನ್ನು ಮಾತನಾಡಿಸಿದ್ದಾರೆ. ಈ ಸಾಲುಗಳನ್ನು ಹಾಕಿಸಿದ್ದರ ಉದ್ದೇಶವೇನು ಎನ್ನುವುದು ತಿಳಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಆಟೋಚಾಲಕನ ಬಳಿ ಈ ಸಾಲುಗಳನ್ನು ಯಾಕಾಗಿ ಹಾಕಿಸಿದ್ದೀರಾ ಎಂದು ಕೇಳಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

View this post on Instagram

A post shared by Babugvibes (@babugvibes)

ಅಗಲಿದ ಹೆಂಡ್ತಿ ನನ್ನ ಜತೆಯಲ್ಲಿ ಇದ್ದಾಳೆ

ಇದೇ ವೇಳೆ ಆಟೋ ಚಾಲಕ, ನನ್ನ ಪತ್ನಿ ಗರ್ಭಿಣಿಯಾಗಿದ್ದಾಗ ನನ್ನನ್ನು ಬಿಟ್ಟು ಹೋದಳು. ಅಗಲಿದರೂ ಹೆಂಡ್ತಿ ನನ್ನ ಜೊತೆಯಲ್ಲಿಯೇ ಇದ್ದಾಳೆ ಎಂದು ಈ ಸಾಲುಗಳನ್ನು ಬರೆಸಿದ್ದೇನೆ. ಈಗ ನನ್ನ ಜತೆಗೆ ಇರುವ ಮಗಳಿಗಾಗಿ ಜೀವನ ನಡೆಸುತ್ತಿದ್ದೇನೆ. ನನ್ನೊಂದಿಗೆ ಮುಂದಿನ ಜೀವನ ನಡೆಸಲು ಮಗಳನ್ನು ಬಿಟ್ಟು ಹೋಗಿದ್ದಾಳೆ. ಮುಂದಿನ ಜೀವನವೆಲ್ಲಾ ಮಗಳಿಗೆ ಮೀಸಲು. ಪತ್ನಿ ನೆನಪುಗಳ ಜೊತೆಯಲ್ಲಿದ್ದೇನೆ ಎಂದು ಹೇಳಿದ್ದಾರೆ.

ಒಮ್ಮೆ ನೆನಪಾಗಿ ಮತ್ತೊಮ್ಮೆ ನೋವಾಗಿ ಜತೆಗೆ ಇದ್ದಾಳೆ

ಆಟೋ ಹಿಂಬದಿಯಲ್ಲಿ ಕೊನೆಯವರೆಗೂ ಇರುತ್ತೇನೆ ಎಂದಳು, ಮಾತು ತಪ್ಪಲಿಲ್ಲ. ಈಗಲೂ ಜೊತೆಗೇ ಇದ್ದಾಳೆ, ಒಮ್ಮೆ ನೆನಪಾಗಿ, ಮತ್ತೊಮ್ಮೆ ನೋವಾಗಿ ಎಂದು ಬರೆದಿರುವುದನ್ನು ಕಾಣಬಹುದು.

ಇದನ್ನೂ ಓದಿ: ವಿದೇಶಿ ಜೀವನಕ್ಕೆ ಗುಡ್ ಬೈ, ಮಗುವಿನ ಚಿಕಿತ್ಸೆಗಾಗಿ ರಾಪಿಡೋ ಚಾಲಕನಾದ ತಂದೆ

ಈ ವಿಡಿಯೋ ಇದುವರೆಗೆ 63 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಜತೆಗಿರದ ಜೀವ ಎಂದೆಂದಿಗೂ ಜೀವಂತ ಎಂದಿದ್ದಾರೆ. ಇನ್ನೊಬ್ಬರು, ಒಂದು ಕ್ಷಣ ಕಣ್ಣಲ್ಲಿ ನೀರು ಬಂತು ಅಣ್ಣ ಎಂದು ಹೇಳಿದ್ದಾರೆ. ಮತ್ತೊಬ್ಬರು, ಮಡದಿಗಷ್ಟೇ ಮರಣ, ಪ್ರೇಮಕ್ಕಲ್ಲ, ಪ್ರೀತಿ ಅಮರ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಎಥೆನಾಲ್​ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಸಚಿವ ಎಂಬಿ ಪಾಟೀಲ್​
ಎಥೆನಾಲ್​ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಸಚಿವ ಎಂಬಿ ಪಾಟೀಲ್​
ದೇವಿರಮ್ಮ ದರ್ಶನಕ್ಕೆ ಭಕ್ತಸಾಗರ! ಬೆಟ್ಟದ ತುದಿಯಲ್ಲಿ ಕಂಬಿ ಮುರಿದು ದುರಂತ
ದೇವಿರಮ್ಮ ದರ್ಶನಕ್ಕೆ ಭಕ್ತಸಾಗರ! ಬೆಟ್ಟದ ತುದಿಯಲ್ಲಿ ಕಂಬಿ ಮುರಿದು ದುರಂತ
ಕಿಚ್ಚ ಸುದೀಪ್ ಆಡಿಸಿದ ಆಟಕ್ಕೆ ಬಿಗ್ ಬಾಸ್ ಸ್ಪರ್ಧಿಗಳ ತಲೆ ಗಿರಗಿರ
ಕಿಚ್ಚ ಸುದೀಪ್ ಆಡಿಸಿದ ಆಟಕ್ಕೆ ಬಿಗ್ ಬಾಸ್ ಸ್ಪರ್ಧಿಗಳ ತಲೆ ಗಿರಗಿರ
ಹಾಸನಾಂಬೆ ದರ್ಶನ ಪಡೆದ ಹೆಚ್​ಡಿಕೆ ದಂಪತಿ
ಹಾಸನಾಂಬೆ ದರ್ಶನ ಪಡೆದ ಹೆಚ್​ಡಿಕೆ ದಂಪತಿ
ಕುಟುಂಬ ಸಮೇತ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಕುಟುಂಬ ಸಮೇತ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ
ಶಿವಮೊಗ್ಗದ ಬಿಜೆಪಿ ಕಚೇರಿ, ವಿಜಯೇಂದ್ರ ನಿವಾಸದ ಮುಂದೂ ಪೋಸ್ಟರ್​
ಶಿವಮೊಗ್ಗದ ಬಿಜೆಪಿ ಕಚೇರಿ, ವಿಜಯೇಂದ್ರ ನಿವಾಸದ ಮುಂದೂ ಪೋಸ್ಟರ್​
'ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ': JDSಗೆ ಕಾಂಗ್ರೆಸ್​​ ಕೌಂಟರ್​
'ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ': JDSಗೆ ಕಾಂಗ್ರೆಸ್​​ ಕೌಂಟರ್​
ಮಂಜನ ಮತ್ತೆ ಬಿಗ್​​ಬಾಸ್​ಗೆ ಸ್ವಾಗತಿಸಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಮಂಜನ ಮತ್ತೆ ಬಿಗ್​​ಬಾಸ್​ಗೆ ಸ್ವಾಗತಿಸಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಹಾಸನಾಂಬೆ ದರ್ಶನಕ್ಕೆ ಬೆಳಿಗ್ಗೆಯಿಂದಲೇ ಮುಗಿಬಿದ್ದ ಭಕ್ತರು
ಹಾಸನಾಂಬೆ ದರ್ಶನಕ್ಕೆ ಬೆಳಿಗ್ಗೆಯಿಂದಲೇ ಮುಗಿಬಿದ್ದ ಭಕ್ತರು