Math Puzzle: ವಾರಾಂತ್ಯ ಮೆಲ್ಲನೇ ಆರಂಭವಾಗಿದೆ. ಮುಂದಿನ ಕೆಲಸಗಳಿಗೆ ಹುರುಪು ತುಂಬಲು ನಿಮ್ಮ ಮೆದುಳಿಗೆ ಚೂರು ಗುದ್ದು (Brain Teaser) ಕೊಟ್ಟರೆ ಹೇಗೆ? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಮೋಜಿನ ಗಣಿತ ಇಲ್ಲಿದೆ. ನೆಟ್ಟಿಗರೂ ಈ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಚುರುಕಾಗಿರುವ ನೀವು ಇದಕ್ಕೆ ಉತ್ತರ ಕಂಡುಕೊಳ್ಳುತ್ತೀರಿ ಎನ್ನುವ ಭರವಸೆ ಇದೆ. ಮಿಶೆಲ್ ಸ್ಟೋಹಿರೋ ಎಂಬುವ X ಖಾತೆದಾರರು ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಪ್ರಶ್ನೆ ಇಲ್ಲಿದೆ; ಸ್ಯಾಮ್ ಮತ್ತು ಜೆಸ್ಸಿ ಪ್ರತಿ ಒಂದು ಗಂಟೆಗೆ 5 ಕಾರುಗಳನ್ನು ತೊಳೆಯುತ್ತಾರೆ. ದಿನಕ್ಕೆ 7 ಗಂಟೆಗಳ ಕಾಲ ಇವರು ಕೆಲಸ ಮಾಡುತ್ತಾರೆ. ಹಾಗಾದರೆ ಸ್ಯಾಮ್ ಮತ್ತು ಜೆಸ್ಸಿ 2 ದಿನಗಳಲ್ಲಿ ಒಟ್ಟು ಎಷ್ಟು ಕಾರುಗಳನ್ನು ತೊಳೆಯುತ್ತಾರೆ?
ಇದನ್ನೂ ಓದಿ : Viral Video: ದೀಪಾವಳಿ ಬೋನಸ್; ತಮಿಳುನಾಡಿನ ಟೀ ಎಸ್ಟೇಟ್ ಉದ್ಯೋಗಿಗಳಿಗೆ ರಾಯಲ್ ಎನ್ಫೀಲ್ಡ್
ನವೆಂಬರ್ 8ರಂದು ಹಂಚಿಕೊಂಡಿ ಈ ಪೋಸ್ಟ್ ಅನ್ನು ಈತನಕ 93,000 ಜನರು ನೋಡಿದ್ದಾರೆ. 600ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದು ನೂರಾರು ಜನರು ಪ್ರತಿಕ್ರಿಯಿಸಿ ಈ ಒಗಟನ್ನು ಬಿಡಿಸಲು ನೋಡಿದ್ದಾರೆ. ಅನೇಕರು ತಮಾಷೆ ಮಾಡಿದ್ದಾರೆ.
Hey #lawtwitter I have questions.
1. Are Sam & Jesse washing 5 cars total each hour or 5 cars per person each hour?
2. Just because Sam & Jesse “can” wash 5 cars each hour, are we to assume they did?
3. Did math get harder since I was in 3rd grade or did law school ruin me? pic.twitter.com/TT4MbslpkG
— Michelle Strowhiro (@strowhiro) November 8, 2023
ಗಣಿತದ ಈ ಒಗಟನ್ನು ಇಂಗ್ಲಿಷ್ ಶಿಕ್ಷಕರಿಗೆ ಪರಿಶೀಲಿಸಲು ಹೇಳಬೇಕಿದೆ ಎಂದು ತಮಾಷೆ ಮಾಡಿದ್ದಾರೆ ಒಬ್ಬರು. ಪ್ರೈಮರಿ ಸ್ಕೂಲಿನಲ್ಲಿ ಗಣಿತ ಬಿಡಿಸುವಾಗ ಕಣ್ಣೀರು ಹಾಕುತ್ತಿದ್ದುದು ಈಗ ನೆನಪಾಗುತ್ತಿದೆ ಎಂದಿದ್ದಾರೆ ಇನ್ನೊಬ್ಬರು. 140 ಅಥವಾ ಅದಕ್ಕಿಂತ ಕಡಿಮೆ ಎಂದಿದ್ದಾರೆ ಮತ್ತೊಬ್ಬರು. ಅಯ್ಯೋ ಈ ನಂಬರ್ಗಳನ್ನು ನೋಡಿದರೆ ನನಗೆ ಹುಚ್ಚು ಹಿಡಿಯುತ್ತದೆ ಎಂದಿದ್ದಾರೆ ಮಗದೊಬ್ಬರು.
ನಿಮಗೆ ಉತ್ತರ ಹೊಳೆಯಿತೆ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:20 am, Sat, 11 November 23