Viral Post: 2018ರಲ್ಲಿ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಚಪ್ಪಲಿ, 6 ವರ್ಷಗಳ ಬಳಿಕ ಡೆಲಿವರಿ
ಮುಂಬೈನ ಅಹ್ಸಾನ್ ಎಂಬ ವ್ಯಕ್ತಿ ಫ್ಲಿಪ್‌ಕಾರ್ಟ್‌ನಲ್ಲಿ ಚಪ್ಪಲಿ ಆರ್ಡರ್ ಮಾಡಿದ್ದಾನೆ. ಇದು ನಡೆದಿದ್ದು 6 ವರ್ಷಗಳ ಹಿಂದೆ ಅಂದರೆ 2018ರಲ್ಲಿ. ಅದರಂತೆ ಮೇ 20, 2018 ರಂದು ಆರ್ಡರ್ ಡೆಲಿವರಿ ಆಗುತ್ತೇ ಎಂಬ ನೊಟಿಫಿಕೇಷನ್ ಕೂಡ ಬಂದಿದೆ. ಆದರೆ ಆ ತಾರೀಖಿಗೆ ಡೆಲಿವರಿ ಬಂದಿರಲಿಲ್ಲ. ಹೀಗೆ ಆರು ವರ್ಷಗಳು ಕಳೆದಿವೆ.
ಮುಂಬೈ: ಇತ್ತೀಚಿನ ದಿನಗಳಲ್ಲಿ ಎಲ್ಲವು ಆನ್ಲೈನ್ಮಯವಾಗಿದೆ. ಆಹಾರದಿಂದ ಹಿಡಿದು ಎಲೆಕ್ಟ್ರಾನಿಕ್ ವಸ್ತುಗಳ ವರೆಗೆ ಏನೇ ಖರೀದಿ ಮಾಡಬೇಕೆಂದರೂ ಜನರು ಆನ್ಲೈನ್ ಮೊರೆ ಹೋಗುತ್ತಿದ್ದಾರೆ. ಸಾಮಾನ್ಯವಾಗಿ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದರೆ ಗಂಟೆಗಳಲ್ಲಿ ಅಥವಾ 2, ಒಂದು ವಾರದೊಳಗೆ ಆರ್ಡರ್ ಪಾರ್ಸೆಲ್ ಮನೆಗೆ ಬಂದು ತಲುಪುತ್ತದೆ. ಆದರೆ ಈಗ ನಾವು ಹೇಳಲು ಹೊರಟಿರುವುದನ್ನು ಕೇಳಿದರೆ ನೀವು ಶಾಕ್ ಆಗುವುದು ಖಚಿತ. 2018ರಲ್ಲಿ ವ್ಯಕ್ತಿಯೊಬ್ಬ ಆನ್‌ಲೈನ್‌ನಲ್ಲಿ ಚಪ್ಪಲಿ ಆರ್ಡರ್ ಮಾಡಿದ್ದಾನೆ. ಆದರೆ ಚಪ್ಪಲಿ 6 ವರ್ಷಗಳ ನಂತರ ಡೆಲಿವರಿ ಆಗಿದೆ. ಈ ಘಟನೆ ಮುಂಬೈನಲ್ಲಿ ನಡೆದಿದೆ.
ಅಹ್ಸಾನ್ ಎಂಬ ವ್ಯಕ್ತಿ ಫ್ಲಿಪ್‌ಕಾರ್ಟ್‌ನಲ್ಲಿ ಸ್ಪಾರ್ಕ್ಸ್ ಕಂಪನಿಯ ಚಪ್ಪಲಿ ಆರ್ಡರ್ ಮಾಡಿದ್ದಾನೆ. ಇದು ನಡೆದಿದ್ದು 6 ವರ್ಷಗಳ ಹಿಂದೆ ಅಂದರೆ 2018ರಲ್ಲಿ ರೂ. 485ಕ್ಕೆ ಖರೀದಿಸಲಾಗಿದೆ. ಅದರಂತೆ ಮೇ 20, 2018 ರಂದು ಆರ್ಡರ್ ಡಲಿವರಿ ಆಗುತ್ತೇ ಎಂಬ ನೊಟಿಫಿಕೇಷನ್ ಬಂದಿದೆ. ಆದರೆ ಆ ತಾರೀಖಿಗೆ ಡೆಲಿವರಿ ಬಂದಿರಲಿಲ್ಲ. ಹೀಗೆ ಆರು ವರ್ಷಗಳು ಕಳೆದಿವೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
After 6 yrs @Flipkart called me for this order 😂 Asking me what issue I was facing pic.twitter.com/WLHFrFW8FV
— Ahsan (@AHSANKHARBAI) June 25, 2024
ಇದನ್ನೂ ಓದಿ: 57 ವರ್ಷದ ಪ್ರಿಯಕರನ ಮನ ಒಲಿಸಲು ಯುವತಿ ಮಾಡಿದ ಕಸರತ್ತು ಏನು ಗೊತ್ತಾ?
ಅಂತಿಮವಾಗಿ ಎರಡು ದಿನಗಳ ಹಿಂದೆ ಅಂದರೆ 2024ರ ಜೂನ್ 20ರಂದು ಗ್ರಾಹಕನಿಗೆ ಫ್ಲಿಪ್‌ಕಾರ್ಟ್ ಗ್ರಾಹಕ ಸೇವೆಯಿಂದ ಅನಿರೀಕ್ಷಿತ ಕರೆ ಬಂದಿದೆ. ಕಸ್ಟಮರ್ ಕೇರ್ ಸೇವಾ ವ್ಯಕ್ತಿಯು ಆರ್ಡರ್‌ಗೆ ಸಂಬಂಧಿಸಿದಂತೆ ಯಾವ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದೀರಿ ಎಂದು ವ್ಯಕ್ತಿಯನ್ನು ಕೇಳಿದ್ದಾರೆ. ಏತನ್ಮಧ್ಯೆ, ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:46 pm, Fri, 28 June 24