Viral Video: ಮಲಗಿದ್ದವನ ಚಡ್ಡಿಯೊಳಗೆ ಅವಿತು ಕುಳಿತ ಹಾವು

ಸಾಮಾನ್ಯವಾಗಿ ಮಳೆಗಾಲ ಬಂತೆಂದರೆ ಹಾವುಗಳು ಮನೆಯೊಳಗೆ ಬರುವ, ಮನೆ ಅಕ್ಕ ಪಕ್ಕದಲ್ಲಿನ ಪೊದೆಗಳಲ್ಲಿ ಅವಿತು ಕುಳಿತುಕೊಳ್ಳುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಇಲ್ಲೊಂದು ಹಾವು ಮಲಗಿದ್ದವನ ಚಡ್ಡಿಯೊಳಗೆಯೇ ಅವಿತು ಕುಳಿತುಬಿಟ್ಟಿದೆ. ಬಹಳ ಜೋಪಾನವಾಗಿ ಅವಿತು ಕುಳಿತ ಹಾವನ್ನು ಹೊರತೆಗೆಯಲಾಗಿದ್ದು, ಈ ಕುರಿತ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral Video: ಮಲಗಿದ್ದವನ ಚಡ್ಡಿಯೊಳಗೆ ಅವಿತು ಕುಳಿತ ಹಾವು
ವೈರಲ್​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 28, 2024 | 4:59 PM

ಮಳೆಗಾಲ ಬಂತೆಂದರೆ ಸಾಕು ಕಾಯಿಲೆಗಳ ಜೊತೆ ಜೊತೆಗೆ ಹಾವು, ಕೀಟಗಳ ಕಾಟವು ಹೆಚ್ಚಾಗುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಹಾವುಗಳ ಕಾಟ ತುಸು ಹೆಚ್ಚಾಗಿಯೇ ಇರುತ್ತದೆ ಅಂತಾನೇ ಹೇಳಬಹುದು. ಈ ಹಾವುಗಳನ್ನು ಕಂಡರೆ ಎಂಥ ಧೈರ್ಯವಂತ ಮನುಷ್ಯನಿಗಾದರೂ ಒಮ್ಮೆ ಭಯವಾಗುತ್ತದೆ. ದಾರಿಯಲ್ಲಿ ಹೋಗುತ್ತಿರುವಾಗ ಎದುರಿಗೆ ಹಾವು ಕಂಡರೂ ಸಾಕು ಮೈ ಪೂರಾ ಬೆವರಿ ಬಿಡುತ್ತದೆ. ಒಂದು ವೇಳೆ ಮನೆಯೊಳಗೆ ಹಾವು ಬಂದರೆ ನಾವು ಅಲ್ಲಿಂದ ಕಾಲ್ಕಿತ್ತು ಬಿಡುತ್ತೇವೆ. ಅಂತದ್ರಲ್ಲಿ ಇಲ್ಲೊಬ್ಬ ಯುವಕನ ಚಡ್ಡಿಯೊಳಗೆಯೇ ಹಾವೊಂದು ಅವಿತು ಕುಳಿತು, ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

ಈ ಘಟನೆ ಥೈಲ್ಯಾಂಡ್‌ನ ರೇಯಾಂಗ್‌ ಎಂಬಲ್ಲಿ ನಡೆದಿದ್ದು, ಮನೆಯಲ್ಲಿ ಮಂಚದ ಮೇಲೆ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದ ಯುವಕನ ಬಳಿ ಬಂದ ಹಾವೊಂದು ಸೀದಾ ಹೋಗಿ ಆತನ ಚಡ್ಡಿಯೊಳಗೆ ಸೇರಿ ಬಿಟ್ಟಿದೆ. ಇದರಿಂದ ಭಯಬೀತನಾದ ಆ ಯುವಕ ಯಾವುದೇ ಆತುರದ ನಿರ್ಧಾರವನ್ನು ತೆಗೆದುಕೊಳ್ಳದೆ ಉರಗ ತಜ್ಞರಿಗೆ ಕರೆ ಮಾಡಿ ಅವರು ಬರುವವರೆಗೂ ಸ್ವಲ್ಪವೂ ಅಲುಗಾಡದೆ ಧೈರ್ಯದಿಂದ ಅಲ್ಲೇ ಮಲಗುತ್ತಾನೆ. ನಂತರ ಉಗರ ತಜ್ಞರು ಬಂದು ಸ್ನೇಕ್‌ ಹುಕ್‌ ಸಹಾಯದಿಂದ ಜೋಪಾನವಾಗಿ ಹಾವನ್ನು ಹೊರ ತೆಗೆದಿದ್ದಾರೆ.

@unikinfold ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಕುರಿತ ಪೋಸ್ಟ್‌ ಒಂದನ್ನು ಹಂಚಿಕೊಳ್ಳಲಾಗಿದ್ದು, “ಥೈಲ್ಯಾಂಡ್‌ನ ರೇಯಾಂಗ್‌ ಪ್ರಾಂತ್ಯದಲ್ಲಿ ವ್ಯಕ್ತಿಯ ಚಡ್ಡಿಯೊಳಗೆ ಸೇರಿಕೊಂಡ ನಾಗರ ಹಾವು” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ವಿಡಿಯೋದಲ್ಲಿ ಯುವಕನೊಬ್ಬ ಬೆಡ್‌ ಮೇಲೆ ಮಲಗಿರುವಂತಹ ದೃಶ್ಯವನ್ನು ಕಾಣಬಹುದು. ಆತನ ಚಡ್ಡಿಯೊಳಗೆ ಸಣ್ಣ ಗಾತ್ರದ ನಾಗರ ಹಾವು ಸೇರಿಕೊಂಡ ಕಾರಣ ಆತ ಯಾವುದೇ ಕಾರಣಕ್ಕೂ ಒಂದಿಷ್ಟು ಅಲುಗಾಡದೆ ಮಲಗಿರುತ್ತಾನೆ. ಬಳಿಕ ಉರಗ ತಜ್ಞರು ಬಂದು ಯುವಕನಿಗೆ ಯಾವುದೇ ಅಪಾಯವಾಗದಂತೆ ಸ್ನೇಕ್‌ ಹುಕ್‌ ಸಹಾಯದಿಂದ ಹಾವನ್ನು ಜೋಪಾನವಾಗಿ ಹೊರ ತೆಗೆದಿದ್ದಾರೆ.

ಇದನ್ನೂ ಓದಿ: ಜನನಿಬಿಡ ರಸ್ತೆಯಲ್ಲಿ ನಗ್ನವಾಗಿ ಓಡಾಡಿದ ಯುವತಿ, ಬೆತ್ತಲೆ ಅವತಾರಕ್ಕೆ ಬೆಚ್ಚಿ ಬಿದ್ದ ಜನ

5 ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 3.5 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಹಾವಿಗೆ ಅವಿತುಕೊಳ್ಳಲು ಬೇರೆ ಯಾವ ಸ್ಥಳವೂ ಸಿಗಲಿಲ್ಲವೇ ಎಂದು ನೆಟ್ಟಿಗರು ತಮಾಷೆಯ ಕಾಮೆಂಟ್ಸ್‌ಗಳನ್ನು ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್