
ವಿಮಾನಯಾನದ ಇತಿಹಾಸದಲ್ಲಿ ಇದೇ ಮೊದಲು, ಸಂಪೂರ್ಣ ವಿದ್ಯುತ್ ವಿಮಾನದ ಹಾರಾಟ ಯಶಸ್ವಿಯಾಗಿ ನಡೆದಿದೆ. ಬೀಟಾ ಟೆಕ್ನಾಲಜೀಸ್‌ನ ಆಲಿಯಾ CX300 (Alia CX300) ಎಂಬ ವಿಮಾನ ಪ್ರಯಾಣಿಕರನ್ನು ಹೊತ್ತ ಹಾರಾಟ ನಡೆಸಿದೆ. ಈ ತಿಂಗಳ ಆರಂಭದಲ್ಲಿ ಈಸ್ಟ್ ಹ್ಯಾಂಪ್ಟನ್‌ನಿಂದ ಅಮೆರಿಕದ ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣಕ್ಕೆ ನಾಲ್ಕು ಪ್ರಯಾಣಿಕರೊಂದಿಗೆ ಹಾರಾಟ ನಡೆಸಿತು. ಫಾಕ್ಸ್ ನ್ಯೂಸ್‌ನ ವರದಿಯ ಪ್ರಕಾರ, ಸುಮಾರು 70 ನಾಟಿಕಲ್ ಮೈಲುಗಳನ್ನು (130 ಕಿಲೋಮೀಟರ್) ಕೇವಲ 30 ನಿಮಿಷಗಳಲ್ಲಿ ತಲುಪಿದೆ. ಈ ಹಾರಾಟ ವೆಚ್ಚ ಹೆಲಿಕಾಪ್ಟರ್‌ಗೆ ಹೋಲಿಸಿದ್ರೆ ಅಂದಾಜು ರೂ. 13,885 ($160) ಇಂಧನ ವೆಚ್ಚವಾಗುತ್ತದೆ. ಆದರೆ ಈ ವಿಮಾನಕ್ಕೆ ಕೇವಲ ರೂ. 694 ($8) ವೆಚ್ಚದಲ್ಲಿ ತಲುಪಿದೆ ಎಂದು ಹೇಳಲಾಗಿದೆ. ಜತೆಗೆ ಇದರಲ್ಲಿ ಅಂತಹ ಯಾವುದೇ ಶಬ್ದ-ಗದ್ದಲಗಳು ಇರುವುದಿಲ್ಲ, ಆರಾಮವಾಗಿ ಪ್ರಯಾಣಿಸಬಹುದು.
“ಇದು 100% ವಿದ್ಯುತ್ ಚಾಲಿತ ವಿಮಾನವಾಗಿದ್ದು, ಈಸ್ಟ್ ಹ್ಯಾಂಪ್ಟನ್ ನಿಂದ ಜೆಎಫ್ ಕೆಗೆ ಪ್ರಯಾಣಿಕರೊಂದಿಗೆ ಹಾರಾಟ ನಡೆಸಿದ್ದು, ನ್ಯೂಯಾರ್ಕ್ ಬಂದರು ಪ್ರಾಧಿಕಾರ ಮತ್ತು ನ್ಯೂಯಾರ್ಕ್ ಪ್ರದೇಶಕ್ಕೆ ಇದು ಮೊದಲ ಹಾರಾಟವಾಗಿದೆ. 35 ನಿಮಿಷಗಳಲ್ಲಿ 130 ಕಿಲೋಮೀಟರ್ ದೂರ ಕ್ರಮಿಸಿದ್ದೇವೆ” ಎಂದು ಬೀಟಾ ಟೆಕ್ನಾಲಜೀಸ್ ನ ಸಂಸ್ಥಾಪಕ ಮತ್ತು ಸಿಇಒ ಕೈಲ್ ಕ್ಲಾರ್ಕ್ ಹೇಳಿದ್ದಾರೆ. ಇದನ್ನು ಇಲ್ಲಿಂದ ಹಾರಾಟ ನಡೆಸಲು ಕೇವಲ 8$ (694 ರೂ) ಮಾತ್ರ ಖರ್ಚಾಗಿದೆ. ಪ್ರಯಾಣಿಕರು ಇಲ್ಲಿ ಪೈಲೆಟ್ ಹಾಗೂ ವಿಮಾನಕ್ಕೆ ಮಾತ್ರ ಪಾವತಿ ಮಾಡಬೇಕು ಅಷ್ಟೇ, ಮೂಲಭೂತವಾಗಿ, ಇದು ತುಂಬಾ ಕಡಿಮೆ ವೆಚ್ಚದಾಯಕವಾಗಿದೆ ಎಂದು ಹೇಳಿದ್ದಾರೆ. ಕಂಪನಿಯ ಪ್ರಕಾರ, CX300 ಒದಗಿಸುವ ಸೌಕರ್ಯ, ಪ್ರಯಾಣದ ಅನುಭವದಿಂದ ಮುಂದಿನ ದಿನದಲ್ಲಿ ಇದು ಹೆಚ್ಚು ಜನಪ್ರಿಯತೆ ಪಡೆಯಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಪ್ಪ-ಅಮ್ಮನ ಕನಸಿನ ಹಾರಾಟ, ಸಿಬ್ಬಂದಿಯಾಗಿ ವಿಮಾನದಲ್ಲಿ ಸೇವೆ ಮಾಡುವ ಸೌಭಾಗ್ಯ ನನ್ನದು
ವರ್ಮೊಂಟ್ ಮೂಲದ ಬೀಟಾ ಟೆಕ್ನಾಲಜೀಸ್ ಕಂಪನಿ 2017 ರಲ್ಲಿ ಸ್ಥಾಪನೆಯಾಗಿದೆ. ಈ ವಿದ್ಯುತ್ ವಿಮಾನಗಳ ಉತ್ಪಾದನೆ ಹಾಗೂ ಪ್ರಮಾಣೀಕರಣ ಮತ್ತು ವಾಣಿಜ್ಯೀಕರಣವನ್ನು ವೇಗಗೊಳಿಸಲು $318 (27,597.99 ರೂ.) ಮಿಲಿಯನ್ ಹಣವನ್ನು ಮಿಸಲಿಟ್ಟಿದೆ. ಕಳೆದ ಆರು ವರ್ಷಗಳಿಂದ, ಕಂಪನಿಯು ಈ ವಿಮಾನದ ಸಲವಾಗಿ ಕೆಲಸ ಮಾಡುತ್ತಿದೆ. 6 ವರ್ಷದಲ್ಲಿ ಇದರ ಟೇಕ್‌ಆಫ್ ಹಾಗೂ ಲ್ಯಾಂಡಿಂಗ್ CX300 ಮಾದರಿ ಮತ್ತು ಅದರ ಅಲಿಯಾ 250 eVTOL ಸಾಮಾರ್ಥ್ಯದ ಬಗ್ಗೆ ಕೆಲಸ ಮಾಡುತ್ತಿದೆ. ಈ ವರ್ಷದ ಅಂತ್ಯದ ವೇಳೆಗೆ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಈ ವಿದ್ಯುತ್ ವಿಮಾನಯಾನಕ್ಕೆ ಒಪ್ಪಿಗೆ ನೀಡಬಹುದು ಎಂದು ಹೇಳಲಾಗುತ್ತಿದೆ. ಬೀಟಾ ವಿಮಾನಗಳು ಒಂದೇ ಚಾರ್ಜ್‌ನಲ್ಲಿ 250 ನಾಟಿಕಲ್ ಮೈಲುಗಳವರೆಗೆ ಹಾರುವ ಸಾಮರ್ಥ್ಯವನ್ನು ಹೊಂದಿರುವುದರಿಂದ, ನಗರಗಳು ಮತ್ತು ಉಪನಗರಗಳ ನಡುವಿನ ಸಂಪರ್ಕವನ್ನು ಸುಲಭವಾಗಿ ಸಾಧಿಸಬಹುದು.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:56 pm, Mon, 23 June 25