
ಹೆಂಗಳೆಯರ ಅಂದ ಹೆಚ್ಚಿಸುವುದೇ ಈ ಸೀರೆ. ಭಾರತೀಯ ನಾರಿಯರಿಗೆ ಮಾತ್ರ ಈ ಸೀರೆ ಎಂಬ ಕಲ್ಪನೆ ಈಗಾಗಲೇ ಹೋಗಿದೆ. ಹೌದು, ವಿದೇಶಿ ಮಹಿಳೆಯರು (foreigners) ಭಾರತಕ್ಕೆ ಬಂದಾಗ ಸೀರೆಯನ್ನು ಇಷ್ಟ ಉಡುತ್ತಾರೆ. ಇದಕ್ಕೆ ಸಾಕ್ಷಿ ಯಾಗಿದೆ ಈ ದೃಶ್ಯ. ಭಾರತಕ್ಕೆ ಬಂದ ವಿದೇಶಿ ಮಹಿಳೆ ಮಹಿಳಾ ಜವಳಿ ವ್ಯಾಪಾರಿಯಿಂದ ಸೀರೆ ಉಡಿಸಿಕೊಂಡ ವಿಡಿಯೋ ಸದ್ಯ ವೈರಲ್ ಆಗಿದೆ. ನೆಟ್ಟಿಗರು ವಿದೇಶಿ ಮಹಿಳೆಯನ್ನು ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ನೋಡಿ ಖುಷಿ ಪಟ್ಟಿದ್ದಾರೆ.
ಜೆನಿಫರ್ ಕೆ ಹಿಲ್ (Jennifer K Hill) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ವಿದೇಶಿ ಮಹಿಳೆ ಹಾಗೂ ಮಹಿಳಾ ಜವಳಿ ವ್ಯಾಪಾರಿ ನಡುವಿನ ಮುದ್ದಾದ ಸಂಭಾಷಣೆಯನ್ನು ನೀವಿಲ್ಲಿ ಕಾಣಬಹುದು. ರಸ್ತೆ ಬದಿಯಲ್ಲಿದ್ದ ಮಹಿಳಾ ಜವಳಿ ವ್ಯಾಪಾರಿಯಿಂದ ವಿದೇಶಿ ಮಹಿಳೆ ಸೀರೆ ಉಡಿಸಿಕೊಳ್ಳುವುದನ್ನು ಕಾಣಬಹುದು. ಇದೇ ವೇಳೆ ವಿದೇಶಿ ಮಹಿಳೆಗೆ ಈ ಮಹಿಳಾ ವ್ಯಾಪಾರಿ ಸೀರೆ ಉಡುವುದು ತುಂಬಾನೇ ಸುಲಭ ಎಂದು ಹೇಳುತ್ತಿರುವುದನ್ನು ಕಾಣಬಹುದು. ವಿವಿಧ ಶೈಲಿಯಲ್ಲಿ ಸೀರೆ ಉಡಬಹುದೆಂದು ವಿದೇಶಿ ಮಹಿಳೆಗೆ ಭಾರತೀಯ ಮಹಿಳೆ ಹೇಳಿ ಕೊಡುತ್ತಿರುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ: ಬಿಹಾರದ ಹುಡುಗನ ಜತೆಗೆ ಚಿಗುರಿದ ಪ್ರೀತಿ; ಪ್ರೇಮಿಯನ್ನು ವರಿಸಲು ಭಾರತಕ್ಕೆ ಬಂದ ರಷ್ಯನ್ ಯುವತಿ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಸಹೋದರಿ ಸೀರೆಯಲ್ಲಿ ನೀವು ಮುದ್ದಾಗಿ ಕಾಣಿಸಿದ್ದೀರಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ತುಂಬಾ ಸುಂದರವಾಗಿ ಕಾಣಿಸುತ್ತಿದ್ದೀರಿ ಎಂದು ಕಾಮೆಂಟ್ ನಲ್ಲಿ ಬರೆದಿದ್ದಾರೆ. ಇನ್ನೊಬ್ಬರು, ಸೂಪರ್ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ