Video : ಬೀಚ್‌ಗೆ ಬಂದ್ರು ಮೈ ತುಂಬಾ ಬಟ್ಟೆ, ಭಾರತೀಯರು ಯಾಕೆ ಹೀಗೆ ಎಂದ ವಿದೇಶಿಗ

ಸಾಮಾನ್ಯವಾಗಿ ವಿದೇಶಿಗರು ಪ್ರವಾಸಿ ತಾಣಗಳನ್ನು ವೀಕ್ಷಿಸಲು ಭಾರತಕ್ಕೆ ಭೇಟಿ ನೀಡುತ್ತಿರುವುದನ್ನು ನೀವು ನೋಡಿರಬಹುದು. ಹೀಗೆ ಬಂದ ವಿದೇಶಿಗರು ಬೀಚ್ ಗೆ ತಪ್ಪದೇ ಹೋಗುತ್ತಾರೆ. ನೀವೇನಾದ್ರೂ ಬೀಚ್‌ಗೆ ಹೋಗಿದ್ರೆ ವಿದೇಶಿಗರನ್ನು ಹೆಚ್ಚಾಗಿ ತುಂಡುಡುಗೆಯಲ್ಲೇ ನೋಡಿರುತ್ತೀರಿ. ಆದರೆ ಇದೀಗ ವಿದೇಶಿ ಯುವಕನೊಬ್ಬನು ಬೀಚ್‌ಗೆ ತೆರಳಿದ ಸಂದರ್ಭದಲ್ಲಿ ಭಾರತೀಯರ ಉಡುಗೆ ತೊಡುಗೆಯನ್ನು ನೋಡಿ ಶಾಕ್ ಆಗಿದ್ದಾನೆ. ಭಾರತೀಯರು ಯಾಕೆ ಹೀಗೆ ಎಂದು ಪ್ರಶ್ನೆ ಮಾಡಿದ್ದು ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Video : ಬೀಚ್‌ಗೆ ಬಂದ್ರು ಮೈ ತುಂಬಾ ಬಟ್ಟೆ, ಭಾರತೀಯರು ಯಾಕೆ ಹೀಗೆ ಎಂದ ವಿದೇಶಿಗ
ವೈರಲ್ ವಿಡಿಯೋ
Image Credit source: Instagram

Updated on: Jun 05, 2025 | 10:16 AM

ಬೀಚ್ (beach) ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಮಕ್ಕಳಿಂದ ಹಿಡಿದು ದೊಡ್ಡದವರೆಗೂ ಇಷ್ಟ ಪಡುತ್ತಾರೆ. ದೊಡ್ಡವರು ಕೂಡ ಮಕ್ಕಳಾಗಿ ಆಡುವ ಸ್ಥಳವಿದು. ಈ ಬೀಚ್ ನೋಡಲು ನೀವು ಬಂದರಂತೂ ಕಡಲಕಿನಾರೆಯಲ್ಲಿ ವಿದೇಶಿಗರು ತುಂಡುಡುಗೆಯಲ್ಲೇ ಅಲ್ಲಲ್ಲಿ ಕಾಣಸಿಗುತ್ತಾರೆ. ಆದರೆ ಇದೀಗ ಸಮುದ್ರ ತೀರಕ್ಕೆ ಬಂದ ವಿದೇಶಿಗ(foreigner)ನಿಗೆ ಭಾರತೀಯರನ್ನು ಕಂಡು ಶಾಕ್ ಆಗಿದೆ. ಇಲ್ಲಿನ ಜನರು ಯಾಕೆ ಮೈ ತುಂಬಾ ಬಟ್ಟೆ ಧರಿಸಿದ್ದಾರೆ ಎನ್ನುವುದೇ ಆತನಿಗೆ ಯಕ್ಷ ಪ್ರಶ್ನೆಯಾಗಿ ಕಾಡಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್‌ ಆಗುತ್ತಿದ್ದಂತೆ ಬಳಕೆದಾರರು ಕಾಮೆಂಟ್‌ ಮಾಡುವ ಮೂಲಕ ಈತನ ಗೊಂದಲವನ್ನು ನಿವಾರಿಸುವ ಪ್ರಯತ್ನ ಮಾಡಿದ್ದಾರೆ.

ವೈರಲ್ ವಿಡಿಯೋದಲ್ಲಿ ಏನಿದೆ?

georgebxckley ಹೆಸರಿನ ಖಾತೆಯಲ್ಲಿ ವಿದೇಶಿ ಯುವಕನು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾನೆ. ಈ ವಿಡಿಯೋದಲ್ಲಿ ನಾನು ಭಾರತದ ಪ್ರವಾಸದ ವೇಳೆಯಲ್ಲಿಮೊದಲು ಬೀಚ್ ತಲುಪಿದೆ. ಆದರೆ ಇಲ್ಲಿ ಯಾರು ಕೂಡ ಟಾಪ್ ಲೆಸ್ ಆಗಿಲ್ಲ, ಇಲ್ಲಿ ಎಲ್ಲರೂ  ಮೈ ತುಂಬಾ ಬಟ್ಟೆ ಧರಿಸಿದ್ದಾರೆ. ಇಲ್ಲಿ ಸರಿಸುಮಾರು ನೂರು ಜನರಿದ್ದು, ಇಬ್ಬರು ಯುವಕರು ಮಾತ್ರ ಬಟ್ಟೆ ಧರಿಸಿಲ್ಲ, ಮತ್ತೆ ಎಲ್ಲರೂ ಕೂಡ ಮೈ ತುಂಬಾ  ಬಟ್ಟೆ ಧರಿಸಿಕೊಂಡಿದ್ದಾರೆ, ಯಾಕೆ ಈ ರೀತಿ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳುವುದನ್ನು ನೋಡಬಹುದು. ಇಲ್ಲಿ ಏನಾದರೂ ಬಟ್ಟೆ ಬಿಚ್ಚಬಾರದು ಎನ್ನುವ ರೂಲ್ಸ್ ಇದೆಯೇ ಎಂದು ಭಯದಿಂದಲೇ ಹೇಳುತ್ತಾ, ಶರ್ಟ್ ತೆಗೆದಿಟ್ಟು ಸಮುದ್ರಕ್ಕೆ ಇಳಿದು ಎಂಜಾಯ್ ಮಾಡಿದ್ದಾನೆ.

ಇದನ್ನೂ ಓದಿ
ಅಪ್ಪನಿಗೆ ನೆರಳಾದ ಮುದ್ದಿನ ಮಗಳು
ನಮ್ಮ ಜನರೇಷನ್‌ ಲಕ್ಕಿ ಎನ್ನಲು ಇವೆ ಕಾರಣ ನೋಡಿ
ಆರ್‌ಸಿಬಿ ಗೆದ್ದ ಖುಷಿಗೆ ಪಬ್ಲಿಕ್‌ನಲ್ಲಿ ಕಿಸ್ ಮಾಡಿದ ಪ್ರೇಮಿಗಳು
ಪ್ಲೀಸ್ ನನ್ನ ಬಿಟ್ಟೋಗ್ಬೇಡ, ನಿನ್ನ ಜತೆ ನಾನು ಬರ್ತೀನಿ

Optical Illusion: ಏಳು ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ವಸ್ತು ಹುಡುಕಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು, ಇದು ಭಾರತ, ಇಲ್ಲಿ ಯಾರು ತಮ್ಮ ದೇಹವನ್ನು ತೋರಿಸುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆ ಶ್ರೀಮಂತವಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಯಾವುದೇ ದೇಶಕ್ಕೆ ತೆರಳುವ ಮೊದಲು ಅಲ್ಲಿನ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ ಎಂದಿದ್ದಾರೆ. ಮತ್ತೊರ್ವ ವ್ಯಕ್ತಿ, ನಮ್ಮ ದೇಶದಲ್ಲಿ ಸೂರ್ಯ ತುಂಬಾನೇ ಪ್ರಕಾಶಮಾನವಾಗಿರುತ್ತಾನೆ. ಬಿಸಿಲಿನ ಝಳ ತುಂಬಾ ಪ್ರಬಲವಾಗಿರುತ್ತದೆ ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ