Viral Video: ಸ್ಕೇಟಿಂಗ್ ರೇಸ್​ನಲ್ಲಿ ಬಿದ್ದು ಎದ್ದು ಮುನ್ನುಗ್ಗಿದ 4 ವರ್ಷದ ಬಾಲಕಿ! ಕೊನೇ ಕ್ಷಣದ ದೃಶ್ಯ ಮಜವಾಗಿದೆ ನೀವೂ ನೋಡಿ

ಬಾಲಕಿಯ ತಂದೆ ವಿಡಿಯೋವನ್ನು 2020ರಲ್ಲಿ ಟಿಕ್ಟಾಕ್​ನಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ಇತರ ಸಾಮಾಜಿಕ ವೇದಿಕೆಯಲ್ಲಿ ವಿಡಿಯೋ ಹಂಚಿಕೊಳ್ಳಲಯಿತು. ಇದೀಗ ಮತ್ತೆ ಬಾಲಕಿಯ ಧೈರ್ಯ ಮತ್ತು ಸಾಧನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Viral Video: ಸ್ಕೇಟಿಂಗ್ ರೇಸ್​ನಲ್ಲಿ ಬಿದ್ದು ಎದ್ದು ಮುನ್ನುಗ್ಗಿದ 4 ವರ್ಷದ ಬಾಲಕಿ! ಕೊನೇ ಕ್ಷಣದ ದೃಶ್ಯ ಮಜವಾಗಿದೆ ನೀವೂ ನೋಡಿ
Edited By:

Updated on: Aug 03, 2021 | 9:57 AM

4 ವರ್ಷದ ಪುಟ್ಟ ಬಾಲಕಿ ಸ್ಕೇಟಿಂಗ್ ಆಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದೆ. ವಿಡಿಯೋ ಹಳೆಯದಾಗಿದ್ದರೂ ಬಾಲಕಿಯ (Girl) ಛಲವನ್ನು ಮೆಚ್ಚಿ ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ವಿಡಿಯೋವನ್ನು ಪುನಃ ಹರಿಬಿಡಲಾಗಿದ್ದು ಫುಲ್ ವೈರಲ್ ಆಗಿದೆ. ಸ್ಕೇಟಿಂಗ್​ ಆಟದ (Skating) ಮಧ್ಯೆ ಬಿದ್ದರೂ ಕೂಡಾ ತನ್ನ ಛಲ ಬಿಡದೇ ಹೋರಾಡಿ ಕೊನೇ ಕ್ಷಣದಲ್ಲಿ ನಗುತ್ತಾ ಗಡಿ ಮುಟ್ಟಿದ ಬಾಲಕಿಯ ಮುಖದಲ್ಲಿನ ನಗು ಎಲ್ಲರ ಮನ ಸೆಳೆಯುವುದಂತಿದೆ. ವಿಡಿಯೋ ಕೊನೇ ಕ್ಷಣದವರೆಗೂ ಮಿಸ್ ಮಾಡ್ಕೋಳ್​ಬೇಡಿ..

ಬಾಲಕಿಯ ತಂದೆ ವಿಡಿಯೋವನ್ನು 2020ರಲ್ಲಿ ಟಿಕ್ಟಾಕ್​ನಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ಇತರ ಸಾಮಾಜಿಕ ವೇದಿಕೆಯಲ್ಲಿ ವಿಡಿಯೋ ಹಂಚಿಕೊಳ್ಳಲಯಿತು. ಇದೀಗ ಮತ್ತೆ ಬಾಲಕಿಯ ಧೈರ್ಯ ಮತ್ತು ಸಾಧನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಛಲ ಮತ್ತು ಧರ್ಐದಿಂದ ಮುನ್ನುಗ್ಗಿದ್ದರೆ ಏನೇ ಅಡಿ- ತಡೆಗಳು ಬಂದರೂ ಸಹ ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ.

ಟಿಕ್ಟಾಕ್​ನಲ್ಲಿ ವಿಡಿಯೋ 500 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದು 8 ರ್ಷದ ಮಕ್ಕಳಿಗಾಗಿ ರೇಸ್ ಆಗಿತ್ತು. ನನ್ನ ಮಗಳಿಗೆ ಆಗ ಕೇವಲ 4 ವರ್ಷವಾಗಿತ್ತು ಎಂದು ವಿಡಿಯೋ ಹಂಚಿಕೊಳ್ಳಲಾಗಿತ್ತು. ಆಕೆಯ ಧೈರ್ಯ ಮತ್ತು ಕೊನೇ ಕ್ಷಣದ ಹೋರಾಟದಿಂದ ಜಯ ಗಳಿಸಿದ್ದಾಳೆ. ಕೊನೇಯಲ್ಲಿ ಅವಳ ಮುಖದಲ್ಲಿನ ಸಂತೋಷ ಎಲ್ಲರಿಗೆ ಇಷ್ವಾಗುವಂತಿದೆ.

ರೇಸ್ ಪ್ರಾರಂಭವಾದ ಕೆಲವೇ ಸೆಕೆಂಡುಗಳಲ್ಲಿ ಬಾಲಕಿ ಕೆಳಗೆ ಬೀಳುತ್ತಾಳೆ. ತಕ್ಷಣವೇ ಬದಿಯಲ್ಲಿ ನಿಂತಿದ್ದ ಜನರು ಆಕೆಯನ್ನು ಪ್ರೋತ್ಸಾಹಿಸುತ್ತಾರೆ. ಮೇಲಕ್ಕೆದ್ದು ಮತ್ತೆ ರೇಸ್​ನಲ್ಲಿ ಪಾಲ್ಗೊಳ್ಳುತ್ತಾಳೆ. ಕೊನೇ ಕ್ಷಣದಲ್ಲಿ ರೇಸ್​ನಲ್ಲಿ ಎಲ್ಲರಿಗಿಂತ ಮುಂದೆ ಹೋಗಿ ಗಡಿ ಮುಟ್ಟುತ್ತಾಳೆ. ಬಿದ್ದಾಗ ಇದ್ದ ಮುಖದಲ್ಲಿನ ನೋವು ಮಾಯವಾಗಿ ಕೊನೇ ಕ್ಷಣದಲ್ಲಿ ಖುಷಿಯೇ ತುಂಬಿತ್ತು. ಛಲ ಬಿಡದೇ ಮುನ್ನುಗ್ಗಿದ ಹೋರಾಟಗಾರ್ತಿಗೆ ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗಿದೆ.

ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆಟಗಾರರಿಗೆ ಸ್ಪೂರ್ತಿ ತುಂಬುವ ವಿಡಿಯೋವಿದು ಎಂದು ಕೆಲವು ಹೇಳಿದ್ದಾರೆ. ಈ ವಿಡಿಯೋ ತುಂಬಾ ಮನಸ್ಸಿಗೆ ಇಷ್ಟವಾಯಿತು ಎಂದು ಇನ್ನು ಕೆಲವರು ಹೇಳಿದ್ದಾರೆ. ಆಟದಲ್ಲಿ ಗೆದ್ದಂತೆಯೇ ಏನೇ ಅಡೆ- ತಡೆಗಳು ಬಂದರೂ ಸಹ ಜೀವನದಲ್ಲಿಯೂ ಸಹ ಎಲ್ಲವನ್ನು ಮೆಟ್ಟಿನಿಂತು ಮುನ್ನುಗ್ಗುತ್ತಾಳೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

ಇದನ್ನೂ ಓದಿ:

Viral Video: 100 ಕೆಜಿ ತೂಕದ ಲೆಹೆಂಗಾ ತೊಟ್ಟು ನಿಂತ ವಧು; ವಿಷ್ ಮಾಡಲು ಜಾಗವಿಲ್ಲದೆ ಅತಿಥಿಗಳು ಕಂಗಾಲು!

Viral Video: ಯುವತಿಯರೂ ನಾಚುವಂತೆ ಡ್ಯಾನ್ಸ್ ಮಾಡುವ 78ರ ಅಜ್ಜಿಯ ವಿಡಿಯೋ ವೈರಲ್; ಈಕೆ ಈಗ ಟಿಕ್ ಟಾಕ್ ಸ್ಟಾರ್!