ಚಿಕಾಗೋದಲ್ಲಿ ಸ್ನೇಹಿತನ ಮದುವೆಗೆ ಸೀರೆಯುಟ್ಟು ಬಂದ ಪುರುಷಮಣಿಗಳು

| Updated By: ಶ್ರೀದೇವಿ ಕಳಸದ

Updated on: Nov 15, 2022 | 1:11 PM

Men Wearing Saree : ಈ ಯುವಕರಿಬ್ಬರೂ ಹೀಗೆ ಸೀರೆಯುಟ್ಟು ವಧುವರರನ್ನು ಅಚ್ಚರಿಗೆ, ಗೊಂದಲಕ್ಕೆ ಕೆಡವಿದ್ದಾರೆ. ಬಹಳ ಮಜವಾಗಿದೆ ಈ ವಿಡಿಯೋ ಎನ್ನುತ್ತಿದ್ದಾರೆ ನೆಟ್ಟಿಗರು.

ಚಿಕಾಗೋದಲ್ಲಿ ಸ್ನೇಹಿತನ ಮದುವೆಗೆ ಸೀರೆಯುಟ್ಟು ಬಂದ ಪುರುಷಮಣಿಗಳು
Friends of desi groom arrive at wedding venue in Chicago wearing saree
Follow us on

Viral Video : ಎಲ್ಲಾದರೂ ನೋಡಿದ್ದೀರಾ ಇಂಥ ದೃಶ್ಯ? ಹಾಗಿದ್ದರೆ ಇಲ್ಲಿ ನೋಡಿ. ಚಿಕಾಗೋದಲ್ಲಿ ವರನ ಸ್ನೇಹಿತರು ಸೀರೆಯುಟ್ಟು ಮದುವೆಗೆ ಬಂದಿದ್ದಾರೆ. ವರ ಅಚ್ಚರಿಯಷ್ಟೇ ಗೊಂದಲಕ್ಕೂ ಒಳಗಾಗಿ ಇವರನ್ನು ನೋಡುತ್ತ ಕುಳಿತಿದ್ದಾನೆ. ವಧುವಂತೂ… ವಿವರಿಸುವುದೇ ಬೇಡ. ನೀವೇ ನೋಡಿ. ಇದೀಗ ಆನ್​ಲೈನ್​ನಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ ಈ ವಿಡಿಯೋ. ಸೀರೆಯುಟ್ಟ ಈ ಪುರುಷಮಣಿಗಳನ್ನು ನೀವೂ ನೋಡಿ.

 

ಇದನ್ನೂ ಓದಿ
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ವರ ಮೊದಲು ದಂಗುಬಡಿದ. ಆದರೆ ಕ್ರಮೇಣ ಇವರ ಒಂದೊಂದು ಅಲಂಕಾರವನ್ನೂ ನೋಡುತ್ತ ನಗಲು ಶುರುಮಾಡಿದ. ಚಿಕಾಗೋ ವೆಡ್ಡಿಂಗ್ ಫೋಟೋಗ್ರಾಫರ್ ಒಬ್ಬರು ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇವರಿಗೆ ಸೀರೆ ಉಡಿಸಲು ಸ್ಥಳೀಯ ಮಹಿಳೆಯೊಬ್ಬರು ಸಹಕರಿಸಿದ್ದಾರೆ. ಕಂಚೀ ರೇಷಿಮೆ ಸೀರೆಯನ್ನು ಇವರಿಬ್ಬರೂ ಉಟ್ಟಿದ್ದಾರೆ. ಮದುವೆಗೆ ಬಂದ ಜನರ ಗಮನ ಸೆಳೆಯಲು ಮತ್ತು ತಮಾಷೆಗಾಗಿ ಹೀಗೆ ಉಡುಗೆ ತೊಡುಗೆ ಮತ್ತು ಅಲಂಕಾರ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.

ನೋಡಿದಿರಲ್ಲ ವಧು ಮತ್ತು ವರರ ಪ್ರತಿಕ್ರಿಯೆಯನ್ನು. ಎಂಥ ನಗುವಿನಲ್ಲಿ ತೇಲಿ ಹೋಗಿದ್ದಾರೆ. ನಿಮಗೂ ನಗು ಉಕ್ಕಿತೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

 

Published On - 1:10 pm, Tue, 15 November 22