ಮಾರುಕಟ್ಟೆಯಲ್ಲಿ ವಿವಿಧ ಕಂಪೆನಿಯ ಎಲೆಕ್ಟ್ರಿಕ್ ವಾಹನಗಳಿದ್ದು, ಆದರೆ ಓಲಾ ಕಂಪೆನಿಯ ಸೇವೆಯಲ್ಲಿ ಗ್ರಾಹಕರು ಬೇಸರಗೊಂಡಿದ್ದಾರೆ. ಈ ಕಂಪೆನಿಯು ನೀಡುವ ಸೇವೆಯು ಕಳಪೆ ಮಟ್ಟದ್ದಾಗಿದ್ದು, ಈ ಬಗ್ಗೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುವ ಘಟನೆಗಳು ಬೆಳಕಿಗೆ ಬಂದಿದೆ. ಆದರೆ ಬೆಂಗಳೂರಿನ ಮಹಿಳೆಯೊಬ್ಬರು, ಓಲಾ ಸಂಸ್ಥೆಯ ಕೆಟ್ಟ ಗ್ರಾಹಕ ಸೇವೆಯಿಂದ ಬೇಸೆತ್ತು, ಪೋಸ್ಟ್ ವೊಂದನ್ನು ಮಾಡಿದ್ದಾರೆ.
ನಿಶಾ ಗೌರಿ (@Nisha_gowru) ಎನ್ನುವ ಹೆಸರಿನ ಎಕ್ಸ್ ಬಳಕೆದಾರರು ಇದೀಗ ಓಲಾ ಸ್ಕೂಟರ್ ಖರೀದಿ ಮಾಡದಂತೆ ಜನರಿಗೆ ಮನವಿ ಮಾಡುತ್ತಿದ್ದಾರೆ. ಓಲಾ ಒಂದು ಡಬ್ಬಾ ಗಾಡಿ ನೀವು ಖರೀದಿ ಮಾಡಿದರೆ ನೆಮ್ಮದಿ ಹಾಳುಮಾಡಿಕೊಳ್ಳಬೇಡಿ ಎಂದಿದ್ದಾರೆ. ಹೌದು, ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಓಲಾ ತಗೊಂಡ್ರೆ ನಿಮ್ಮ ಜೀವನ ಗೋಳು, ಓಲಾ ವಿರುದ್ಧ ಜಾಗೃತಿಯನ್ನು ಮೂಡಿಸುತ್ತಿದ್ದೇನೆ. ಈ ಐಡಿಯಾ ಕೊಟ್ಟಿದ್ದಕ್ಕೆ ಥ್ಯಾಂಕ್ಸ್” ಎಂದು ತಮ್ಮ ಸ್ನೇಹಿತರ ಹೆಸರನ್ನು ಟ್ಯಾಗ್ ಮಾಡಿದ್ದಾರೆ.
“Ola ತಗೊಂಡ್ರೆ ನಿಮ್ಮ ಜೀವನ ಗೋಳು “
I will Be Spreading Awareness Against Ola Electric 😁🤌🏻
Thanks For The Idea @UppinaKai Sir 🫡 #DontBuyOla#OlaElectric pic.twitter.com/bcVQ3i6P3K— ನಿಶಾ ಗೌರಿ 💛❤ (@Nisha_gowru) September 12, 2024
ಅಲ್ಲದೆ ತಮ್ಮ ಓಲಾ ಗಾಡಿ ಮೇಲೆ “ಪ್ರಿಯ ಕನ್ನಡಿಗರೆ, ಓಲಾ ಒಂದು ಡಬ್ಬಾ ಗಾಡಿ, ದಯವಿಟ್ಟು ತಗೋಬೇಡಿ, ಓಲಾ ತಗೊಂಡ್ರೆ ನಿಮ್ಮ ಜೀವನ ಗೋಳು. ದಯವಿಟ್ಟು ಓಲಾ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಬೇಡಿ ಎಂದು ಬರೆದಿರುವ ಕಾಗದವನ್ನು ಅಂಟಿಸಿದ್ದಾರೆ. ಗೌರಿ ಅವರು ನಿರಾಶೆಗೊಂಡ ಕಾರಣವೇನು ಎನ್ನುವುದನ್ನು ರಿವೀಲ್ ಮಾಡಿಲ್ಲ. ಆದರೆ ಪೋಸ್ಟ್ ವೈರಲ್ ಆಗಿದ್ದು, ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಜ್ಯೂಸ್ನಲ್ಲಿ ಮೂತ್ರ ಬೆರೆಸಿ ಮಾರಾಟ: ಆರೋಪಿಯ ಬಂಧನ
ಬಳಕೆದಾರರೊಬ್ಬರು, ನಿಮ್ಮ ಓಲಾ ಸ್ಕೂಟಿಯ ನಿಖರವಾದ ಸಮಸ್ಯೆ ಏನು? ದಯವಿಟ್ಟು ತಿಳಿಸಿ, ಇದು ಇತರ ಬಳಕೆದಾರರಿಗೆ ಸಹ ಉಪಯುಕ್ತವಾಗಿರುತ್ತದೆ. ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, ‘ಶೋರೂಂನ ಟೆಕ್ನಿಷಿಯನ್‌ಗಳಿಗೂ ಸ್ಕೂಟರ್ ಸರಿ ರಿಪೇರಿ ಮಾಡಲಾಗುತ್ತಿಲ್ಲ. ಟೆಕ್ನಿಷಿಯನ್ ಸುಮಾರು ಒಂದೂವರೆ ಗಂಟೆ ತೆಗೆದುಕೊಂಡು ರಿಪೇರಿ ಮಾಡಿದ್ರೂ ಮತ್ತೆ ಅದೇ ಸಮಸ್ಯೆಯು ಮುಂದುವರೆದಿದೆ’ ಎಂದಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ